ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ಜಿ: ಟಾಟಾ, ಅಂಬಾನಿಗೆ ಕ್ಲೀನ್ ಚೀಟ್

By Mahesh
|
Google Oneindia Kannada News

Ratan Tata gets cleanchit
ನವದೆಹಲಿ, ಜೂ 3: 2 ಜಿ ಸ್ಪೆಕ್ಟ್ರಂ ಹಗರಣದಿಂದ ಟಾಟಾ ಸಮೂಹವು ಯಾವುದೇ ರೀತಿಯಲ್ಲಿ ಲಾಭ ಪಡೆದುಕೊಂಡಿಲ್ಲ ಸಿಬಿಐ ವಿಶೇಷ ನ್ಯಾಯಾಲಯ ಪ್ರತಿಷ್ಠಿತ ಉದ್ಯಮಿ ರತನ್ ಟಾಟಾಗೆ ಕ್ಲೀನ್ ಚೀಟ್ ನೀಡಿದೆ. ಟಾಟಾಗೆ ಪರವಾನಿಗೆಗಳನ್ನು ನೀಡುವಲ್ಲಿ ಯಾವುದೇ ಅಕ್ರಮಗಳು ಕಂಡುಬಂದಿಲ್ಲ ಮತ್ತು ಟ್ರಾಯ್ ನಿಯಮಾವಳಿಗಳಿಗೆ ಅನುಗುಣವಾಗಿಯೇ ಈ ಪ್ರಕ್ರಿಯೆ ನಡೆದಿದೆ ವಿಶೇಷ ನ್ಯಾಯಾಲಯ ಹೇಳಿದೆ.

ಟಾಟಾ ಟೆಲಿಸರ್ವಿಸಸ್‌ಗೆ ಪರವಾನಿಗೆ ಕೊಡಿಸುವಲ್ಲಿ ಕಾರ್ಪೊರೇಟ್ ಲಾಬಿಗಾರ್ತಿ ನೀರಾ ರಾಡಿಯಾ ಮಹತ್ವದ ಪಾತ್ರ ವಹಿಸಿದ್ದರು ಎಂದು ಆರೋಪವರಿಸಿ ನ್ಯಾಯಾಲಯದಲ್ಲಿ ಸಲ್ಲಿಸಲಾದ ಅರ್ಜಿಗೆ ಉತ್ತರವಾಗಿ ಸಿಬಿಐ ತನ್ನ ಈ ನಿಲುವನ್ನು ಗುರುವಾರ ಸ್ಪಷ್ಟಪಡಿಸಿದೆ.

ರತನ್ ಟಾಟಾ ಅಲ್ಲದೆ, ಎಡಿಎಜಿ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ, ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಪತ್ನಿ ದಯಾಳು ಅಮ್ಮಾಳ್ ಅವರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಕೋರ್ಟ್ ವಜಾಗೊಳಿಸಿದೆ. ಪ್ರಮುಖ ಉದ್ಯಮಿಗಳ ವಿರುದ್ಧ ಅರ್ಜಿ ಸಲ್ಲಿಸಿದ್ದ ಎಂ ಫರ್ಕ್ವಾನ್ ಹಾಗೂ ಧರ್ಮೇಂಧರ್ ಪಾಂಡೆ ಅವರಿಗೆ 10 ಸಾವಿರ ರು ದಂಡವನ್ನು ವಿಧಿಸಿರುಅ ಸಿಬಿಐ ನ್ಯಾಯಾಧೀಶ ಓಪಿ ಸೈನಿ,ಮೂರು ದಿನದೊಳಗೆ ದಂಡ ಶುಲ್ಕವನ್ನು ಪಾವತಿಸಬೇಕು ಇಲ್ಲದಿದ್ದರೆ ಅರ್ಜಿದಾರರ ವಿರುದ್ಧ ವಾರೆಂಟ್ ಜಾರಿಗೊಳಿಸಲಗುವುದು ಎಂದು ಎಚ್ಚರಿಸಿದ್ದಾರೆ.

English summary
A special CBI trial court Thursday(Jun 2) rejected a petition to include industrialists Anil Ambani and Ratan Tata as co-accused in the second generation (2G) spectrum case and also imposed a fine of Rs.10,000 each on the petitioners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X