ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯಾ ಶಾಲೆಯಲ್ಲಿ ಸಿಖ್ ಹುಡುಗನಿಗೆ ಕಿರುಕುಳ

By Mahesh
|
Google Oneindia Kannada News

SiKh, a file photo
ವಿಕ್ಟೋರಿಯಾ, ಜೂ 3: ಇಲ್ಲಿನ ಶಾಲೆಯೊಂದರಲ್ಲಿ ಸಿಖ್ ಸಮುದಾಯಕ್ಕೆ ಸೇರಿದ ಹುಡುಗನೊಬ್ಬನಿಗೆ ಕಿರುಕುಳ ನೀಡಿ, ಬಲವಂತವಾಗಿ ಆತನ ಗಡ್ಡ ಬೋಳಿಸಿದ ಘಟನೆ ನಡೆದಿದೆ. ಇದರಿಂದ ಇಲ್ಲಿನ ಭಾರತೀಯ ಸಮುದಾಯ ಕುಪಿತಗೊಂಡಿದ್ದು, ಧಾರ್ಮಿಕ ಅಸಮಾನತೆ ಮೆರೆಯುವ ಶಾಲೆಯ ವಿರುದ್ಧ ಕಿಡಿಕಾರಿದ್ದಾರೆ.

ಮೆಲ್ಬೋರ್ನ್ ನ ನಾರ್ಥನ್ ಕ್ರಿಶ್ಚಿಯನ್ ಶಾಲೆಯಲ್ಲಿ ಕ್ಲಾಸ್ 11 ರಲ್ಲಿ ಓದುತ್ತಿರುವ ಸಿಖ್ ವಿದ್ಯಾರ್ಥಿಯ ಗಡ್ಡವನ್ನು ಬಲವಂತವಾಗಿ ಶೇವ್ ಮಾಡಲಾಗಿದೆ ಎಂದು ಸಿಖ್ ಫೆಡರೇಷನ್ ಆಫ್ ಆಸ್ಟ್ರೇಲಿಯಾನ ಹರ್ಕಿರತ್ ಸಿಂಗ್ ಎಬಿಸಿ ರೇಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಹುಡುಗನ ಪೋಷಕರು ನನ್ನನ್ನು ಭೇಟೀ ಮಾಡಿ ಈ ಘಟನೆ ಬಗ್ಗೆ ವಿವರಿಸಿದಾಗ, ನನಗೆ ನಿಜಕ್ಕೂ ಶಾಕ್ ಆಯಿತು. ಪ್ರತಿಷ್ಠಿತ ಶಾಲೆಗಳಲ್ಲೇ ಅನ್ಯಮತೀಯರನ್ನು ಈ ರೀತಿ ನಡೆಸಿಕೊಂಡರೆ ಮುಂದೆ ಗತಿ ಏನು ಎಂದು ಅನ್ನಿಸಿಬಿಟ್ಟಿತು. ಈ ಘಟನೆಯಿಂದ ವಿದ್ಯಾರ್ಥಿ ಮಾನಸಿಕ ಖಿನ್ನತೆ ಅನುಭವಿಸುತ್ತಿದ್ದಾನೆ ಎಂದು ಹರ್ಕಿರತ್ ಸಿಂಗ್ ಹೇಳಿದ್ದಾರೆ.

ಪ್ರಕರಣ ಹೆಚ್ಚು ಪ್ರಚಾರ ಪಡೆದು ಈಕ್ವಲ್ ಆಪಾರ್ಚುನಿಟಿ ಆಯುಕ್ತರ ತನಕ ಮುಟ್ಟಿದ ಮೇಲೆ ಎಚ್ಚೆತ್ತುಕೊಂಡ ವಿಕ್ಟೋರಿಯನ್ ಶಾಲೆ, ಸಿಖ್ ವಿದ್ಯಾರ್ಥಿಯ ಕ್ಷಮೆ ಯಾಚಿಸಿದೆ. ಈ ಕೃತ್ಯದಲ್ಲಿ ಭಾಗಿಯಾದ ಶಿಕ್ಷಕರಿಗೆ ಶಾಲಾ ನಿಯಮಗಳ ಬಗ್ಗೆ ತಿಳಿದಿರಲಿಲ್ಲ. ಸಿಖ್ ಸಮುದಾಯದ ಧಾರ್ಮಿಕ ನಂಬಿಕೆಗಳಿಗೆ ಅಪಮಾನವಾಗಿದ್ದರೆ ಶಾಲೆ ವತಿಯಿಂದ ಕ್ಷಮೆ ಕೋರುತ್ತೇವೆ. ಸಿಖ್ ಹುಡುಗರು ಗಡ್ಡ ಬಿಡಲು ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ಶಾಲಾ ಆಡಳಿತ ಮಂಡಳಿ ಹೇಳಿದೆ.

English summary
A Sikh Student was mentally tortured and school authority forced him to shave off his beard in Australian state of Victoria. Indian community in this area accused the institute of religious discrimination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X