ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರು ಮಳೆ ಎದುರಿಸಲು ಮಂಗಳೂರು ಸಜ್ಜು

By * ನಮ್ಮ ವರದಿಗಾರರಿಂದ
|
Google Oneindia Kannada News

Rain in Mangalore
ಮಂಗಳೂರು, ಜೂ. 2 : ಬಂದರು ನಗರಿ ಮಂಗಳೂರು ಬರಲಿರುವ 'ಮುಂಗಾರು" ಎದುರಿಸಲು ಸಿದ್ದವಾಗಿದೆ, ದಿನದ 24 ಗಂಟೆಯೂ ಕಾರ್ಯಾಚರಣೆಗೆ ತಂಡಗಳನ್ನು ಅಣಿಗೊಳಿಸಲಾಗಿದೆ ಎಂದು ಮಂಗಳೂರು ಮೇಯರ್ ಪ್ರವೀಣ್ ಮತ್ತು ಆಯುಕ್ತರಾದ ಡಾ.ವಿಜಯ ಪ್ರಕಾಶ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ನಗರದ 60 ವಾರ್ಡ್‌ಗಳಲ್ಲೂ ತುರ್ತು ವಿಪತ್ತು ನಿರ್ವಹಣ ತಂಡಗಳನ್ನು ನಿಯೋಜಿಸಲಾಗಿದೆ. ಈಗಾಗಲೇ ನಗರದ 60ಕ್ಕೂ ಹೆಚ್ಚು ದೊಡ್ಡ ಚರಂಡಿಗಳ ಹೂಳೆತ್ತಲಾಗಿದೆ. ಗೃಹರಕ್ಷಕ ದಳ, ಅಗ್ನಿಶಾಮಕ ದಳಗಳ ನೆರವು ಪಡೆದುಕೊಳ್ಳಲಾಗುತ್ತಿದೆ. ಪರಿಣತ ಈಜುಗಾರರು, ತುರ್ತು ಸಂದರ್ಭದಲ್ಲಿ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ದೋಣಿಗಳನ್ನು ಸನ್ನದ್ದ ಸ್ಥಿತಿಯಲ್ಲಿಡಲಾಗಿದೆ ಎಂದರು.

ಮಹಾನಗರ ಪಾಲಿಕೆಯಲ್ಲಿ ದಿನದ 24 ಗಂಟೆಯೂ ಮಾಹಿತಿ ಘಟಕ ಕಾರ್ಯನಿರ್ವಹಿಸಲಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಪತ್ತು ನಿರ್ವಹಣ ತಂಡಗಳು ಕಾರ್ಯಾಚರಿಸಲಿವೆ ಎಂದರು.

English summary
Mangalore city is decked up to face monsoon, which entered the Karnataka on June 2, 2011. District management has made wide arrangements and disaster management is in place to avert any untoward incidents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X