ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಸ್ಮಾರ್ಟ್ ಫೋನ್ ಕ್ಲಿಕ್ ಆಗೋದು ಗ್ಯಾರಂಟಿ!

By Mahesh
|
Google Oneindia Kannada News

HTC Wildfire Smartphone launch
ನವದೆಹಲಿ, ಜೂ 2: ಭಾರತದಲ್ಲಿ ಸ್ಮಾರ್ಟ್ ಫೋನ್ ಗಳ ಮಾರುಕಟ್ಟೆ ವಿಸ್ತಾರಗೊಳ್ಳುತ್ತಿದ್ದಂತೆ ಹೊಸ ಹೊಸ ಸೌಲಭ್ಯಗಳೊಂದಿಗೆ ಅನೇಕ ಕಂಪೆನಿಗಳು ಮಾರುಕಟ್ಟೆಗೆ ಜಿಗಿಯುತ್ತಿದೆ. ಎಚ್ ಟಿಸಿ ಇತ್ತೀಚೆಗೆ ಹೊರ ತಂದಿರುವ ಸ್ಮಾರ್ಟ್ ಫೋನ್ "ವೈಲ್ಡ್ ಫೈರ್" ಎಸ್ ಅನೇಕ ಸೌಲಭ್ಯಗಳನ್ನು ಹೊಂದಿದ್ದು ಗ್ರಾಹಕರನ್ನು ಸೆಳೆಯಲಿದೆ ಎಂದು ಎಚ್ ಟಿಸಿ ಇಂಡಿಯಾದ ವ್ಯವಸ್ಥಾಪಕ ಫೈಸಲ್ ಸಿದ್ದಿಕಿ ಹೇಳುತ್ತಾರೆ.

3.2 ಇಂಚಿನ HVGA ಸ್ಕ್ರೀನ್, 5 ಮೆಗಾ ಪಿಕ್ಸಲ್ ಕೆಮೆರಾ ಜೊತೆಗೆ ಆಂಡ್ರ್ಯಾಡ್ 2.3.3 ಜಿಂಜರ್ ಬ್ರೆಡ್ ಅಪರೇಟಿಂಗ್ ಸಿಸ್ಟಮ್ ಹೊಂದಿರುವ ಎಚ್ ಟಿಸಿ ವೈಲ್ಡ್ ಫೈರ್, 600 Mhz ಪ್ರೊಸೆಸರ್ ಹೊಂದಿದೆ. HD ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದು.

ಸಾಮಾನ್ಯವಾದ ಎಚ್ ಟಿಸಿ ಸ್ಮಾರ್ಟ್ ಫೋನ್ ಗಿಂತ ಕೊಂಚ ಹಗುರವಾದ ವಿನ್ಯಾಸ ಹೊಂದಿರುವ ಈ ಸ್ಮಾರ್ಟ್ ಫೋನ್ ಗೆ ಯೂಸರ್ ಇಂಟರ್ ಫೇಸ್ ಸೆನ್ಸ್ ಕೂಡಾ ಇದೆ. ಅತಿ ವೇಗದಲ್ಲಿ ಮೊಬೈಲ್ ಕಾರ್ಯಕ್ಷಮತೆ ಸಾಧ್ಯ ಎಂದು ಸಂಸ್ಥೆ ಹೇಳಿಕೊಂಡಿದೆ.

ಎಚ್ ಟಿಸಿ ವೈಲ್ಡ್ ಫೈಯರ್ ವಿಶೇಷತೆಗಳು:
* ಕ್ವಾಡ್ ಬ್ಯಾಂಡ್ ಜಿಎಸ್ ಎಂ ಹಾಗೂ ಡುಯಲ್ ಬ್ಯಾಂಡ್ 3ಜಿ
* 3.2 ಇಂಚಿನ ಟಿಎಫ್ ಟಿ ಸ್ಕ್ರೀನ್ HVGA (320 x 480 pixels) resolution
* ಅಂಡ್ರೆನೊ ಸಿಪಿಯು, 600 MHz ಪ್ರೊಸೆಸರ್
* ಆಂಡ್ರ್ಯಾಡ್ 2.3.3 ಜಿಂಜರ್ ಬ್ರೆಡ್ ಎಚ್ ಟಿಸಿ ಸೆನ್ಸ್ UI
* ವೈಫೈ802.11 b, g, n
* ಜಿಪಿಎಸ್, ಡಿಜಿಟಲ್ ಕಾಂಪಸ್
* 5 ಮೆಗಾ ಪಿಕ್ಸಲ್ ಕೆಮೆರಾ ಆಟೋಫೋಕಸ್, LED ಫ್ಲಾಶ್
* VGA ವಿಡಿಯೋ@ 24fps
* ಬ್ಲೂಟೂಥ್, ಮೈಕ್ರೋ ಎಸ್ ಡಿ ಸ್ಲಾಟ್( 32ಜಿಬಿ)
* ಸ್ಟಿರಿಯೋ ಎಫ್ ಎಂ ರೇಡಿಯೋ

ಎಲ್ಲಾ ಇದ್ದರೂ ಏನೋ ಇಲ್ಲ ಅನ್ನಿಸುತ್ತದೆ. ಕೆಮೆರಾ ಫರ್ಮಮೆನ್ಸ್ ಅಷ್ಟು ಮೆಚ್ಚುಗೆ ಇಲ್ಲ. HD 720p ವಿಡಿಯೋ ರೆಕಾರ್ಡಿಂಗ್ ಸೌಲಭ್ಯವಿಲ್ಲ, ಕೆಮೆರಾಗೆ ಶಟರ್ ಕೀ ಇಲ್ಲ, ಅಡೋಬ್ ಫ್ಲಾಶ್, ಫ್ಲಾಶ್ ಲೈಟ್ ಬಳಕೆಗೆ ಅವಕಾಶವಿಲ್ಲ, ಡಾಕ್ಯುಮೆಂಟ್ ವೀವರ್, ವಿಡಿಯೋ ಕಾಲಿಂಗ್ ಕೆಮೆರಾ ಪತ್ತೆ ಇಲ್ಲ. ಮಾರುಕಟ್ಟೆಯಲ್ಲಿ ಬೇರೆ ಕಂಪೆನಿಗಳ ಫೋನ್ ಗಳು ಕಣ್ಣು ಕುಕ್ಕುವಂತೆ ಎಚ್ ಟಿಸಿ ಯಾವುದೇ ವಿಶೇಷ ಸೌಲಭ್ಯ ಒದಗಿಸುತ್ತಿಲ್ಲ. ಗ್ರಾಹಕರ ಮೆಚ್ಚುಗೆ ಗಳಿಸಿದರೂ ಈ ಸ್ಮಾರ್ಟ್ ಫೋನ್ ಖರೀದಿಸುವ ಮುನ್ನ ಸ್ಮಾರ್ಟ್ ಆಗಿ ಯೋಚಿಸುವುದು ಒಳ್ಳೆಯದು.

English summary
HTC has launched its latest Smartphone 'Wildfire S' in India. The Android based phone is available in grey and silver white colour and at Rs. 14,700, 5 megapixel camera with auto-focus can attract many customer says Faisal Siddiqui, HTC India Manager.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X