ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಕರ್ ಖರೀದಿ ಆರೋಪ : ರೆಹಮಾನ ಹರಾಜು

By Srinath
|
Google Oneindia Kannada News

ಮುಂಬೈ, ಮೇ 31: 'ಸ್ಲಂ ಡಾಗ್‌ ಮಿಲಿಯನೇರ್‌' ಚಿತ್ರದ ಸಂಗೀತಕ್ಕಾಗಿ ಎ.ಆರ್‌. ರೆಹಮಾನ್‌ ಗೆ ಆಸ್ಕರ್ ಪ್ರಶಸ್ತಿ ಪುರಸ್ಕೃತವಾಗಲಿಲ್ಲ. ಬದಲಿಗೆ ಅವರು ಅದನ್ನು ಖರೀದಿಸಿದ್ದು ಎಂದು ಖ್ಯಾತ ಸಂಗೀತ ನಿರ್ದೇಶಕ ಇಸ್ಮಾಯಿಲ್‌ ದರ್ಬಾರ್ ಆರೋಪಿಸಿದ್ದಾರೆ.

ನಾಗಪುರದಲ್ಲಿ ಸೋಮವಾರ (ಮೇ 30) ಈ ವಿಷಯ ತಿಳಿಸಿರುವ ಇಸ್ಮಾಯಿಲ್‌ 'ಆಸ್ಕರ್ ಪ್ರಶಸ್ತಿ ಸಿಗುವಂತಹ ಸಂಗೀತ ಆ ಚಿತ್ರದಲ್ಲಿ ಏನಿದೆ? ರೋಜಾ ಅಥವಾ ಬಾಂಬೆ ಚಿತ್ರಕ್ಕಾಗಿ ಆಸ್ಕರ್ ಸಿಕ್ಕಿದ್ದರೆ ಅದನ್ನು ಒಪ್ಪಿಕೊಳ್ಳಬಹುದಿತ್ತು. ಆದರೆ ಸ್ಲಂ ಡಾಗ್‌ ಮಿಲೆನಿಯರ್ ಚಿತ್ರದ ಸಂಗೀತದಲ್ಲಿ ಅಂತಹ ಯಾವುದೇ ವಿಶೇಷತೆಯೂ ಇಲ್ಲ. ಆ ಪ್ರಶಸ್ತಿ ಪಡೆಯುವ ಅರ್ಹತೆಯೂ ಆ ಚಿತ್ರದ ಸಂಗೀತಕ್ಕಿಲ್ಲ. ಆಸ್ಕರ್, ರೆಹಮಾನ್‌ಗೆ ಸಿಕ್ಕಿದ್ದಲ್ಲ. ಖರೀದಿಸಿದ್ದು' ಎಂದು ಆರೋಪಿಸಿದ್ದಾರೆ. ಅಲ್ಲದೆ ತಾವು ಪ್ರಚಾರಕ್ಕಾಗಿ ಈ ಆರೋಪ ಮಾಡುತ್ತಿಲ್ಲ ಎಂದೂ ಹೇಳಿದ್ದಾರೆ.

ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಎ.ಆರ್‌. ರೆಹಮಾನ್‌, ಆಸ್ಕರ್ ಪ್ರಶಸ್ತಿಯನ್ನು ಯಾರೂ ಖರೀದಿಸಲು ಸಾಧ್ಯವಿಲ್ಲ. 3000 ಜನ ಸೇರಿ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡುತ್ತಾರೆ. ಹೀಗಿರುವಾಗ ಪ್ರಶಸ್ತಿಯನ್ನು ಖರೀದಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

English summary
Bollywood music director Ismail Darbar claimed that music director AR Rahman bought Oscar for the Danny Boyle movie 'Slumdog Millionaire'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X