ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿನಿ ಸ್ಕರ್ಟಿನಲ್ಲಿ ಮೂಡಿದ್ದ ನಟರಾಜನ ಚಿತ್ರ ಈಗ ಮಾಯ

By Mahesh
|
Google Oneindia Kannada News

Manish web removes objectionable shiv wear
ನವದೆಹಲಿ, ಮೇ 31: ಭಾರತೀಯ ಮೂಲದ ವಿಶ್ವಖ್ಯಾತ ಫ್ಯಾಷನ್ ವಿನ್ಯಾಸಕ ಮನೀಷ್ ಅರೋರಾ ಕೊನೆಗೂ ಶಂಭೋ ಶಂಕರನ ಭಕ್ತರಿಗೆ ಶರಣು ಶರಣೆಂದಿದ್ದಾರೆ. ಮಿನಿಸ್ಕರ್ಟ್ ಮೇಲೆ ನಟರಾಜ ಭಂಗಿಯ ಶಿವನ ಚಿತ್ರ ವಿರುವ ವಸ್ತ್ರಗಳನ್ನು ತಮ್ಮ ಕಂಪೆನಿ ವೆಬ್ ಸೈಟ್ ನಲ್ಲಿ ಮಾರಾಟಕ್ಕಿಟ್ಟು ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದ ಮನೀಷ್ ಈಗ ತಮ್ಮ ವೆಬ್ ಸೈಟ್ ನಿಂದ ವಿವಾದಿತ ವಿನ್ಯಾಸದ ಉಡುಪುಗಳನ್ನು ಹೊರಹಾಕಿದ್ದಾರೆ.

ಇತ್ತೀಚೆಗೆ ಆಸ್ಟ್ರೇಲಿಯಾದ ಕಂಪನಿಯೊಂದು ಸ್ವಿಮ್‌ಸೂಟ್ ಮೇಲೆ ಲಕ್ಷ್ಮಿ ದೇವಿಯ ಚಿತ್ರ ಬಿಡಿಸಿ ವಿವಾದ ಸೃಷ್ಟಿಸಿತ್ತು. ನಟರಾಜ ಭಂಗಿಯಲ್ಲಿ ಒಬಾಮಾರನ್ನು ನಿಲ್ಲಿಸಿ ಮ್ಯಾಗಜೀನ್ ಒಂದು ವಿವಾದ ಉಂಟುಮಾಡಿತ್ತು. ಮನೀಷ್ ಅನ್ ಲೈನ್ ಸ್ಟೋರ್ ನಲ್ಲಿ ಲೆಗ್ಗಿಂಗ್ ಹಾಗೂ ಮಿನಿಸ್ಕರ್ಟ್ ನಲ್ಲಿ ಶಿವನ ಚಿತ್ರ ಕಂಡ ತಕ್ಷಣ ಎಚ್ಚರಗೊಂಡ 'ಯೂನಿವರ್ಸಲ್ ಸೊಸೈಟಿ ಆಫ್ ಹಿಂದೂಯಿಸಂ" ಸಂಘಟನೆ ಅಧ್ಯಕ್ಷ ರಾಜನ್ ಝೆಡ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.ರಾಜನ್ ಅವರಿಗೆ ಬೌದ್ಧ ಹಾಗೂ ಜ್ಯೂಯಷ್ ಧಾರ್ಮಿಕ ಮುಖಂಡರ ಬೆಂಬಲ ಕೂಡಾ ಸಿಕ್ಕಿತ್ತು.

"ಹಿಂದೂಗಳ ಆರಾಧ್ಯ ದೈವ ಶಿವನ ಚಿತ್ರವು ಜನರ ಕಾಲುಗಳ ಮೇಲೆ ಇರುವುದನ್ನು ನೋಡಲು ಹಿಂಸೆಯಾಗುತ್ತದೆ. ವ್ಯಾಪಾರವನ್ನು ಹೆಚ್ಚಿಸಿಕೊಳ್ಳುವ ತಂತ್ರಕ್ಕಾಗಿ ದೇವಾಲಯಗಳಲ್ಲಿ ಆರಾಧಿಸುವ ಶಿವನ ಚಿತ್ರವನ್ನು ಕಾಲುಗಳು ಹಾಗೂ ದೇಹದ ಕೆಳಭಾಗದಲ್ಲಿ ಧರಿಸುವ ಉಡುಪುಗಳ ಮೇಲೆ ಚಿತ್ರಿಸುವುದು ಸರಿಯಲ್ಲ. ವಸ್ತ್ರ ವಿನ್ಯಾಸಕ ಮನೀಷ್ ಆರೋರಾ ಅವರು ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು" ಎಂದು ರಾಜನ್ ಆಕ್ಷೇಪಿಸಿದ್ದರು.

1997ರಲ್ಲಿ ವಸ್ತ ವಿನ್ಯಾಸ ವೃತ್ತಿ ಆರಂಭಿಸಿದ ಮನೀಷ್ ಆರೋರಾ, ಖ್ಯಾತ ಸೆಲೆಬ್ರೆಟಿಗಳಾದ ಲೇಡಿ ಗಾಗಾ, ಬ್ರಿಟ್ನಿ ಸ್ಪೀಯರ್ಸ್, ರಿಹಾನಾ, ಕೇಟ್ ಮೊಸ್, ಕೇಟ್ ಪೆರಿ ಅವರಿಗೆ ವಸ್ತ್ರ ವಿನ್ಯಾಸ ಮಾಡಿ, ಹೆಸರುಗಳಿಸಿದ್ದಾರೆ.

;
English summary
Dancing Nataraja layered miniskirt, knee-length dancing Nataraja harem pants which were available on Manish Arora online store for sale has been removed. After protest from several Hindu oraganisation Manish's company web site has been removed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X