ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡಿಕೇರಿ-ಸಂಪಾಜೆ ರಸ್ತೆ ಜೂ.1 ರಿಂದ ಮುಕ್ತ ಮುಕ್ತ

By Bm Lavakumar
|
Google Oneindia Kannada News

Madikeri Sampaje Road
ಮಡಿಕೇರಿ, ಮೇ.31: ಕಳೆದ ಆರು ತಿಂಗಳಿನಿಂದ ಬಂದ್ ಆಗಿದ್ದ ಮಡಿಕೇರಿ ಸಂಪಾಜೆ ರಸ್ತೆ ಜೂನ್ 1 ರಿಂದ ವಾಹನ ಸಂಚಾರಕ್ಕೆ ತೆರೆದುಕೊಳ್ಳಲಿದೆ. ಮೈಸೂರು-ಮಾಣಿ ರಾಜ್ಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಯನ್ನು ನಡೆಸುವ ಹಿನ್ನಲೆಯಲ್ಲಿ ಕಳೆದ ಡಿ.20 ರಿಂದ 2011 ರ ಏಪ್ರಿಲ್ 30ರವರೆಗೆ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು.

ಇದರಿಂದಾಗಿ ಮಡಿಕೇರಿ-ಸುಳ್ಯ ಮಾರ್ಗವಾಗಿ ಮಂಗಳೂರು ತೆರಳುತ್ತಿದ್ದ ಬಸ್‌ಗಳೆಲ್ಲವೂ ಮೈಸೂರು-ಹಾಸನ ಮಾರ್ಗವಾಗಿ ಇನ್ನು ಕೆಲವು ಕುಶಾಲನಗರ, ಸೋಮವಾರಪೇಟೆ ಬಿಸಿಲೆ ಮಾರ್ಗವಾಗಿ ತೆರಳುತ್ತಿದ್ದವು. ಮಡಿಕೇರಿಯಿಂದ ಸಂಪಾಜೆ ತನಕ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಮಿನಿ ಬಸ್ ಸೌಲಭ್ಯವನ್ನು ಏರ್ಪಡಿಸಿತ್ತು.

ಮಡಿಕೇರಿಯಿಂದ ಸಂಪಾಜೆ ತನಕ ಸುಮಾರು 28 ಕಿ.ಮೀ. ದ್ವಿಪಥ ರಸ್ತೆ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮವು ಹಮ್ಮಿಕೊಂಡಿತ್ತಲ್ಲದೆ, ಮೇ 31 ರೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ ಇದೀಗ ಹಲವು ಕಾರಣಗಳಿಂದ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ಸ್ಥಗಿತಗೊಂಡಿದೆ. ಸುಮಾರು 28 ಕಿ.ಮೀ. ಪೈಕಿ ಕೇವಲ 18 ಕಿ.ಮೀ ಮಾತ್ರ ಪೂರ್ಣಗೊಂಡಿದೆ.

ರಸ್ತೆ ಕಾಮಗಾರಿ ಆಮೆಗತಿಯಲ್ಲಿ ನಡೆಯಲು ಹಾಗೂ ಕಾಮಗಾರಿ ಪೂರ್ಣಗೊಳ್ಳದಿರಲು ಕಚ್ಚಾವಸ್ತುಗಳ ಕೊರತೆಯೇ ಕಾರಣ ಎಂದು ಸಂಬಂಧಿಸಿದ ಅಧಿಕಾರಿಗಳು ಹೇಳುತ್ತಿದ್ದಾರೆ.ಇನ್ನು ಕೆಲವೇ ದಿನಗಳಲ್ಲಿ ಮಳೆ ಆರಂಭವಾಗಲಿರುವುದರಿಂದ ಕಾಮಗಾರಿ ನಡೆಸಲು ತೊಂದರೆಯಾಗುವುದರಿಂದ ಸ್ಥಗಿತಗೊಳಿಸಲಾಗುತ್ತಿದ್ದು, ಉಳಿದ ಕಾಮಗಾರಿಯನ್ನು ಮಳೆಗಾಲ ಬಳಿಕ ಅಂದರೆ ನವೆಂಬರ್‌ನಲ್ಲಿ ಹಮ್ಮಿಕೊಳ್ಳಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರ ಆಕ್ರೋಶ: ನಿಗದಿತ ಸಮಯಕ್ಕೆ ಕಾಮಗಾರಿ ಆಗದೆ ಇರುವುದರಿಂದ ಈ ವ್ಯಾಪ್ತಿಯ ಜನರಿಗೆ ತೊಂದರೆಯಾಗಿದ್ದು, ಮುಂದೆಯೂ ಮತ್ತೆ ರಸ್ತೆ ಸಂಚಾರ ಬಂದ್ ಆದರೆ ಇನ್ನಷ್ಟು ತೊಂದರೆ ಉಂಟಾಗಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Madikeri Sampaje Road which was closed for last four months will be opened from June 1. This stretch was closed due to the delay of upgrading Mysore Bhantwal highway(State highway 88)work by Karnataka Road Development Corporation Ltd heavy traffic was not be allowed on this stretch during 20 Dec 2010 to 30 Apr 2011.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X