• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಿನಲ್ಲಿ 'ಮಿತಿಮೀರಿದ' ಮಂಗಳಮುಖಿಯರ ಕಾಟ

By Srinath
|

ಬೆಂಗಳೂರು, ಮೇ 31: ನಗರದ ಯಾವುದೇ ಸಿಗ್ನಲ್ ಅಥವಾ ವೃತ್ತದ ಬಳಿ ಐದು, ಹತ್ತು ನಿಮಿಷ ಟ್ರಾಫಿಕ್ ಜಾಮ್ ಈಗ ಸಾಮಾನ್ಯ. ಮೊದಲೆಲ್ಲ ಸಿಗ್ನಲ್ ಬಿದ್ದಾಗ ಹೊಟ್ಟೆಪಾಡಿಗಾಗಿ ಪತ್ರಿಕೆ, ಚಿಕ್ಕ- ಪುಟ್ಟ ಮನೆ ಬಳಕೆ ವಸ್ತುಗಳನ್ನು ಮಾರುವ ಹುಡುಗರು, ಯುವಕರು ವಾಹನ ಸವಾರರಿಗೆ ಗಂಟು ಬೀಳುತ್ತಿದ್ದರು. ನಾಲ್ಕೈದು ವರ್ಷಗಳ ಹಿಂದೆ ಎಲ್ಲ ಸಿಗ್ನಲ್‌ಗಳಲ್ಲಿ ಉತ್ತರ ಭಾರತದಿಂದ ಬಂದ ಭಿಕ್ಷುಕರ ಹಾವಳಿ ಇತ್ತು. ಈಗ ನಗರದ ವಾಹನ ಸವಾರರಿಗೆ ತಲೆನೋವಾಗಿರುವವರು ಮಂಗಳಮುಖಿಯರು (ದ್ವಿಲಿಂಗಿಗಳು).

ಇವರು ರಸ್ತೆಗಳಲ್ಲಿ, ಸಿಗ್ನಲ್‌ಗಳಲ್ಲಿ ಅಶ್ಲೀಲ ಭಾವಭಂಗಿ ಪ್ರದರ್ಶಿಸಿ, ಹಣ ಕಸಿಯುತ್ತ, ನಾಗರಿಕರಿಗೆ ಮುಜುಗರ, ತೊಂದರೆ ನೀಡುತ್ತಿದ್ದಾರೆ. ಪ್ರತಿ ಸಿಗ್ನಲ್‌ನಲ್ಲಿ 4-5 ಮಂಗಳಮುಖಿಯರು ಇರುತ್ತಾರೆ. ಇದೊಂದು ಲಾಭದಾಯಕ ದಂಧೆ ಎಂದು ಮನಗಂಡು ಕೆಲ ಪುರುಷರು ಮಂಗಳಮುಖಿಯರ ವೇಷ ಧರಿಸಿ ಭಿಕ್ಷಾಟನೆಗೆ ಇಳಿದಿದ್ದಾರೆ.

ಇವರು ಕೇಳಿದಾಗ ಹಣ ಕೊಡದಿದ್ದಲ್ಲಿ ಬೈಗುಳ ಬೇರೆ. ಕೆಲವರು ರಾತ್ರಿ ವೇಳೆ ನಾಗರಿಕರನ್ನು ಬೆದರಿಸಿ ಹಣ, ಒಡವೆ ಕಿತ್ತುಕೊಂಡಿರುವ ಘಟನೆಗಳು ವರದಿಯಾಗಿವೆ. ಬಹುತೇಕ ಮಂಗಳಮುಖಿಯರು ವೇಶ್ಯಾವಾಟಿಕೆಯಲ್ಲಿಯೂ ತೊಡಗಿಕೊಂಡಿರುತ್ತಾರೆ. ಇವರ ಹಾವಳಿ ತಪ್ಪಿಸಲು ಹಿಂದಿನ ಪೊಲೀಸ್ ಆಯುಕ್ತ ಶಂಕರ್ ಬಿದರಿ ಕೆಲ ಮಟ್ಟಿನ ಪ್ರಯತ್ನ ಮಾಡಿದ್ದರು. ಅದು, ಪರಿಣಾಮಕಾರಿಯಾದಂತೆ ಕಾಣುವುದಿಲ್ಲ.

ಈ ಮಧ್ಯೆ ಕೇಂದ್ರ ಸರ್ಕಾರ 2011ರ ಜನಗಣತಿಯಲ್ಲಿ ದ್ವಿಲಿಂಗಿಗಳನ್ನು ಗುರುತಿಸಿ ಅವರಿಗಾಗಿ ಕಲ್ಯಾಣ ಯೋಜನೆ ರೂಪಿಸುವುದಕ್ಕೆ ಸಿದ್ಧತೆ ನಡೆಸಿದೆ. ಅವರಲ್ಲಿ ಜಾಗೃತಿ ಬೆಳೆಸಿ ಸಮಾಜದ ಮುಖ್ಯ ವಾಹಿನಿಗೆ ತರಲು ಯತ್ನಿಸಬೇಕು. ಅನೈತಿಕ ಚಟುವಟಿಕೆ, ಭಿಕ್ಷಾಟನೆ, ಸುಲಿಗೆಯಲ್ಲಿ ತೊಡಗಿಕೊಂಡ ಮಂಗಳಮುಖಿಯರಿಗೆ ಕಾನೂನಿನ ರುಚಿಯನ್ನೂ ತೋರಿಸಬೇಕು.

ಮಂಗಳಮುಖಿಯರಿಂದ ಜೆಪಿ ನಗರದಲ್ಲಿ ಹಲ್ಲೆ : ಕಾಸು ಕೊಡದ ಮೊಬೈಲ್ ಅಂಗಡಿ ಮಾಲೀಕನ ಮೇಲೆ ಮೂವರು ಮಂಗಳಮುಖಿಯರು ಹಲ್ಲೆ ನಡೆಸಿ ಪೊಲೀಸರ ಅತಿಥಿಗಳಾದ ತಾಜಾ ಘಟನೆಯೂ ಇಲ್ಲಿದೆ.

ಜೆಪಿ ನಗರ 7ನೇ ಹಂತದ ಶ್ರೀರಾಮ ಬಡಾವಣೆಯಲ್ಲಿ ಮೊಬೈಲ್ ಅಂಗಡಿಯಿಟ್ಟುಕೊಂಡಿರುವ ಮುತ್ತುಕುಮಾರ್ ಹಲ್ಲೆಗೊಳಗಾದವರು. ಈ ಸಂಬಂಧ ಶರ್ಮಿಳಾ, ಅಮೃತಾ, ಪಿಂಟೊ ಕಿರಣ ಎಂಬ ಮೂವರನ್ನು ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
There is nothing new about motorists and auto-rickshaw commuters being harassed by eunuchs at traffic signals across Bangalore. Eunuch menace just got worse these days, so who’ll check eunuch menace?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more