ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಡ್ಮಿಂಟನ್ ಆಟಗಾರ್ತಿಯರಿಗೆ ಸದ್ಯಕ್ಕೆ ಮಿನಿ ಸ್ಕರ್ಟ್ ಇಲ್ಲ

By Srinath
|
Google Oneindia Kannada News

jwala gutta
ನವದೆಹಲಿ, ಮೇ 31: ಬ್ಯಾಡ್ಮಿಂಟನ್ ಆಟಗಾರ್ತಿಯರು ಆಟವಾಡಲು ಕಡ್ಡಾಯವಾಗಿ ಸ್ಕರ್ಟ್ ಧರಿಸಬೇಕು ಎಂಬ ವಿವಾದಾತ್ಮಕ ನಿಯಮವನ್ನು ಸದ್ಯಕ್ಕೆ ಜಾರಿಗೊಳಿಸದಂತೆ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ತೀರ್ಮಾನಿಸಿದೆ.

ಆಟಗಾರ್ತಿಯರು ಸ್ಕರ್ಟ್‌ನಲ್ಲಿ ಮಾದಕವಾಗಿ ಕಾಣಿಸಬೇಕೆಂದು ಜಾರಿಗೆ ತರಲಾಗಿದ್ದ ಈ ನಿಯಮಕ್ಕೆ ಭಾರತ ಸೇರಿದಂತೆ ವಿವಿಧ ದೇಶಗಳ ಆಟಗಾರ್ತಿಯರಿಂದ ವಿರೋಧ ವ್ಯಕ್ತವಾಗಿತ್ತು. ಕ್ರೀಡಾ ಆಡಳಿತಾಧಿಕಾರಿಗಳು ಲಿಂಗ ಭೇದಭಾವ ಮಾಡುತ್ತಿದ್ದಾರೆ ಎಂದು ಕೆಲವರು ದೂರಿದ್ದರು.

ಈ ಹಿಂದೆ ಬ್ಯಾಡ್ಮಿಂಟನ್‌ನಲ್ಲಿ ಆಟಗಾರ್ತಿಯರು ತಮಗೆ ಅನುಕೂಲವಾಗುವಂತೆ ಸ್ಕರ್ಟ್‌ ಅಥವಾ ಶಾರ್ಟ್ಸ್ ಧರಿಸಬಹುದಿತ್ತು. ಆದರೆ ಹೆಚ್ಚಿನ ಆಟಗಾರ್ತಿಯರ ಒಲವು ಶಾರ್ಟ್ಸ್ ಕಡೆಗಿತ್ತು.

ಕಡ್ಡಾಯವಾಗಿ ಎಲ್ಲ ಆಟಗಾರ್ತಿಯರು ಬ್ಯಾಡ್ಮಿಂಟನ್ ಆಡುವಾಗ ಸ್ಕರ್ಟ್ ಧರಿಸಿಯೇ ಆಡಬೇಕು ಎನ್ನುವ ನಿಯಮವನ್ನು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್) ಜಾರಿಗೆ ತರಲು ನಿರ್ಧರಿಸಿತ್ತು. ಇದಕ್ಕೆ ಭಾರತ ಹಾಗೂ ಏಷ್ಯಾದ ಕೆಲ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ್ದವು.

ಈ ನಿಯಮ ಮೇ 1ರಿಂದಲೇ ಜಾರಿಗೆ ಬರಬೇಕಾಗಿತ್ತು. ಆದರೆ ತೀವ್ರ ವಿರೋಧದಿಂದಾಗಿ ಇದನ್ನು ಜೂ. 1ಕ್ಕೆ ಮುಂದೂಡಲಾಗಿತ್ತು. ಮತ್ತೆ ವಿರೋಧ ಮುಂದುವರಿದ ಹಿನ್ನೆಲೆಯಲ್ಲಿ ಇದೀಗ ಈ ನಿಯಮವನ್ನೇ ಕೈಬಿಡಲು ನಿರ್ಧರಿಸಲಾಗಿದೆ.

ಆಟಗಾರ್ತಿಯರು ಸ್ಕರ್ಟ್ ಧರಿಸಬೇಕು ಎನ್ನುವ ತೀರ್ಮಾನವನ್ನು ಸದ್ಯಕ್ಕೆ ಜಾರಿಗೆ ತರಲು ಸೋಮವಾರ ಚೀನಾದಲ್ಲಿ ಸಭೆ ಸೇರಿದ್ದ ಬಿಡಬ್ಲ್ಯುಎಫ್ ಮಂಡಳಿ ಕೈ ಬಿಟ್ಟಿದೆ. ಆಟಗಾರ್ತಿಯರು ಯಾವ ರೀತಿಯ ಬಟ್ಟೆ ಧರಿಸಬೇಕೆಂದು ಡಿಸೆಂಬರ್ ಅಂತ್ಯದ ನಂತರ ಇನ್ನಷ್ಟು ಚರ್ಚಿಸಿ ಮುಂದಿನ ನಿಯಮವನ್ನು ರೂಪಿಸಲಾಗುವುದು ಎಂದು ಬಿಡಬ್ಲ್ಯೂಎಫ್ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

English summary
The Badminton World Federation (BWF) today (May 30) indefinitely suspended the dress code rule but did not scrap it, appearing to leave the door open on a revised clothing regulation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X