ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ರಸ್ತೆಗಳ ಸುಧಾರಣೆಗೆ 350 ಮಿ ಡಾಲರ್

By Mahesh
|
Google Oneindia Kannada News

Karnataka highways to get makeover
ಬೆಂಗಳೂರು, ಮೇ 30: ರಾಜ್ಯದ ಒರಟಾದ ರಸ್ತೆಗಳಿಗೆ ಸುಯೋಗ ಒದಗಿದೆ. ರಾಜ್ಯದ ರಸ್ತೆಗಳನ್ನು ಚೆಂದಗಾಣಿಸಲು ವಿಶ್ವಬ್ಯಾಂಕ್ ಸುಮಾರು 350 ಮಿಲಿಯನ್ ಯುಎಸ್ ಡಾಲರ್ ಸಾಲ ನೀಡುತ್ತಿದೆ. ಈ ಬಗ್ಗೆ ಇಂದು ಕರ್ನಾಟಕ ಸರ್ಕಾರ, ಕೇಂದ್ರ ಹಾಗೂ ವಿಶ್ವ ಬ್ಯಾಂಕ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. K-SHIP-II ಯೋಜನೆಗೆ ವಿಶ್ವಬ್ಯಾಂಕ್ ಹಣ ಒದಗಿಸುತ್ತಿರುವುದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಯೋಜನೆಯ ಅಡಿಯಲ್ಲಿ ಸುಮಾರು 3,411 ಕಿಲೋ ಮೀಟರ್ ಗಳಷ್ಟು ರಾಜ್ಯ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತದೆ. ಹಾಗೂ 2,385 ಕಿ.ಮೀ ರಸ್ತೆಗಳನ್ನು ಸುಧಾರಣೆಗೊಳಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು. ಕೇಂದ್ರ ಆರ್ಥಿಕ ವ್ಯವಹಾರ ಖಾತೆ ಕಾರ್ಯದರ್ಶಿ ವೇಣು ರಾಜಮೋನಿ ಹಾಗೂ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸುಭಾಶ್ ಚಂದ್ರ ಕೆ ಅವರು ಕೇಂದ್ರದ ಪರವಾಗಿ ಒಪ್ಪಂದಕ್ಕೆ ಅಂಕಿತ ಹಾಕಿದರು. ವಿಶ್ವಬ್ಯಾಂಕ್ ವ್ಯವಹಾರಗಳ ಸಲಹೆಗಾರ ಹ್ಯೂಬರ್ಟ್ ನೋವೆ ಜೊಸ್ಸೆರಾಂಡ್ ಅವರು ಈ ಸಮಯದಲ್ಲಿ ಉಪಸ್ಥಿತರಿದ್ದರು.

ಹೆದ್ದಾರಿಗಳ ಸಂಖ್ಯೆ ಬದಲು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಧಾರದಂತೆ ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆಗಳು ಬದಲಾಗಲಿದೆ. ದೇಶದಾದ್ಯಂತ ಸುಮಾರು 218 ಹೆದ್ದಾರಿಗಳು ಇದೇ ರೀತಿ ಬದಲಾವಣೆಗೆ ಒಳಪಡಲಿದೆ.

ಮಹಾರಾಷ್ಟ್ರ, ಕರ್ನಾಟಕ, ಕೇರಳದಲ್ಲಿ ಹಾದು ಹೋಗುವ NH 17 ಹೆದ್ದಾರಿ ಈಗ NH 66 ಆಗಲಿದೆ. ಮಂಗಳೂರು ಬೆಂಗಳೂರು NH 48 ಹೆದ್ದಾರಿ ಈಗ NH 75 ಎಂದು ಕರೆಯಲ್ಪಡುತ್ತದೆ. ದೇಶದ ಹೆದ್ದಾರಿಗಳನ್ನು ನಾಲ್ಕು ವಲಯಗಳಲ್ಲಿ ವಿಂಗಡಿಸಲಾಗಿದ್ದು, ವೈಜ್ಞಾನಿಕವಾಗಿ ಹೆದ್ದಾರಿಗಳನ್ನು ಗುರುತಿಸಲು ಇದು ಸಹಾಯಕವಾಗಲಿದೆ ಎಂದು ಇಲಾಖೆ ಹೇಳಿದೆ.

English summary
Karnataka Government today (May 30) signed an agreement with Centre and World Bank for securing USD 350 million loan assistance for implementing roads development under K-SHIP-II project. would develop 3,411 kms of state highway with the World Bank assistance. Meanwhile 218 National Highways in the nation is to get new names and number.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X