ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಡ್ಲಿ ಹೆಡ್ಲಿ ತಂದೆ ಅಂತ್ಯಕ್ರಿಯೆಯಲ್ಲಿದ್ದ ಪಾಕ್ ಪ್ರಧಾನಿ ಗಿಲಾನಿ

By Srinath
|
Google Oneindia Kannada News

Pakistan PM Gilani
ಚಿಕಾಗೊ, ಮೇ 30: ಮುಂಬೈ ದಾಳಿಗೆ ಸಂಚು ರೂಪಿಸಿದ ಆಪಾದನೆ ಎದುರಿಸುತ್ತಿರುವ, ಅಮೆರಿಕದಲ್ಲಿ ಬಂಧಿತಯಾಗಿರುವ ಡೇವಿಡ್‌ ಹೆಡ್ಲಿ ತಂದೆಯ ಅಂತ್ಯಸಂಸ್ಕಾರದಲ್ಲಿ ಪಾಕಿಸ್ತಾನದ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರು ಪಾಲ್ಗೊಂಡಿದ್ದರು ಎಂಬ ಆತಂಕಕಾರಿ ವಿಷಯ ಬಹಿರಂಗವಾಗಿದೆ.

ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಚಿಕಾಗೊ ಕೋರ್ಟ್‌ನಲ್ಲಿ ಸಹ ಆರೋಪಿ ತಹಾವೂರ್ ರಾಣಾ ವಿಚಾರಣೆ ವೇಳೆ 50ರ ಹರೆಯದ ಹೆಡ್ಲಿ ಈ ವಿಷಯ ಬಹಿರಂಗಪಡಿಸಿದ್ದಾನೆ.

2010ರಲ್ಲಿ ತನ್ನ ತಂದೆ ಸಯ್ಯದ್‌ ಸಲೀಂ ಗಿಲಾನಿ ಮೃತಪಟ್ಟಾಗ ಕುಟುಂಬದ ಸದಸ್ಯರಿಗೆ ಸಂತಾಪ ಸೂಚಿಸಿದ್ದ ಪ್ರಧಾನಿ ಗಿಲಾನಿ ಬಳಿಕ ತಂದೆಯ ಅಂತ್ಯಸಂಸ್ಕಾರದಲ್ಲಿಯೂ ಪಾಲ್ಗೊಂಡಿದ್ದರು ಎಂದು ಹೇಳಿದ್ದಾನೆ. ಸಲೀಂ ಗಿಲಾನಿ ಖ್ಯಾತ ಕವಿ, ಲೇಖಕ ಹಾಗೂ ಸಂಗೀತ ವಿದ್ವಾಂಸರಾಗಿದ್ದರು. ಪಾಕಿಸ್ತಾನ್ ರೇಡಿಯೋದ ಮಾಜಿ ಮಹಾನಿರ್ದೇಶಕ ಹಾಗೂ ವಾಷಿಂಗ್ಟನ್‌ ಡಿಸಿಯ ಪಾಕಿಸ್ಥಾನಿ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ಹೆಡ್ಲಿಯ ಸಹೋದರ ದನ್ಯಾಲ್‌ ಗಿಲಾನಿ, ಪ್ರಧಾನಿ ಗಿಲಾನಿ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.

English summary
Pakistan Prime Minister Yousuf Raza Gilani had attended the funeral of 26/11 plotter David Headley's father in 2010, according to the latter's testimony in the Chicago court during the trial of co-accused Tahawwur Rana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X