ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ದಸರಾದಲ್ಲಿ ಏರ್ ಶೋ, ಯುವ ದಸರಾ ಬೇಡ

|
Google Oneindia Kannada News

dasara
ಮೈಸೂರು, ಮೇ 30: ವಿಶ್ವವಿಖ್ಯಾತ ಮೈಸೂರು ದಸರಾ ಆರಂಭವಾಗಲು ಇನ್ನು ಕೇವಲ ನಾಲ್ಕು ತಿಂಗಳು ಬಾಕಿ ಉಳಿದಿದೆ. ಪ್ರಸಕ್ತ ವರ್ಷದ ಹತ್ತು ದಿನಗಳ ಉತ್ಸವ ಹೆಚ್ಚು ಸುಸುತ್ರವಾಗಿ ನಡೆಯಲು ಅಲ್ಲಿನ ಜಿಲ್ಲಾಧಿಕಾರಿ ಹರ್ಷ ಗುಪ್ತಾ ಕೆಲವು ಸಲಹೆಗಳನ್ನು ನೀಡಿದ್ದಾರೆ.

ಯುವ ದಸರಾ ಮತ್ತು ವೈಮಾನಿಕ ಪ್ರದರ್ಶನದಂತಹ ಕಾರ್ಯಕ್ರಮಗಳನ್ನು ದಸಾರದಿಂದ ಬೇರ್ಪಡಿಸುವಂತೆ ಅವರು ವರದಿಯಲ್ಲಿ ತಿಳಿಸಿದ್ದಾರೆ. ದಸರಾದಲ್ಲಿ ಜಂಬೂ ಸವಾರಿ, ಮೆರವಣಿಗೆ ಇತ್ಯಾದಿ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದಿದ್ದಾರೆ.

ಯುವ ದಸರಾದಂತಹ ಕಾರ್ಯಕ್ರಮಗಳನ್ನು ಫೆಬ್ರವರಿಯಲ್ಲಿ ನಡೆಯುವ ಮೈಸೂರು ಜಿಲ್ಲಾ ಉತ್ಸವದಲ್ಲಿ ನಡೆಸಬಹುದು. ಇದರಿಂದ ನಗರಕ್ಕೆ ಹೆಚ್ಚು ಪ್ರವಾಸಿಗರನ್ನು ಸೆಳೆಯಬಹುದು ಎಂದು ಅವರು ತಿಳಿಸಿದ್ದಾರೆ.

ಪಾಸ್ ಕೊರತೆಯಿಂದ ಹೆಚ್ಚಿನ ಪ್ರವಾಸಿಗರಿಗೆ ಜಂಬೂ ಸವಾರಿ ವೀಕ್ಷಣೆ ಸಾಧ್ಯವಾಗುವುದಿಲ್ಲ. ಅರಮನೆಯೊಳಗೆ ಶೇ. 50ರಷ್ಟು ಪಾಸನ್ನು ಪ್ರವಾಸಿಗರಿಗೆ ವಿನಿಯೋಗಿಸುವ ಮೂಲಕ ಈ ಸಮಸ್ಯೆ ಬಗೆ ಹರಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮೈಸೂರು ದಸರಾ ಹೆಚ್ಚು ಸುಸುತ್ರವಾಗಿ ನಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಒದಗಿಸಬೇಕು ಎಂಬ ಬೇಡಿಕೆಯನ್ನೂ ಜಿಲ್ಲಾಧಿಕಾರಿ ಇಟ್ಟಿದ್ದಾರೆ.

English summary
Mysore DC suggested that only the traditional elements of Mysore Dasara be retained. "Delink some of the events like Yuva Dasara from the 10-day festivities. Yuva Dasara and Air Show can be hosted in February as part of Mysore Zilla Utsav" he suggested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X