ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡಗದ್ದೆ ಬಳಿ ಸಾಲು ಸಾಲು ಮೊಸಳೆ ಮರಿಗಳ ಜನನ

By Srinath
|
Google Oneindia Kannada News

Crocodile ltakes birth in Mandagadde
ಶಿವಮೊಗ್ಗ, ಮೇ 30: ಇಲ್ಲಿನ ಮಂಡಗದ್ದೆ ಹತ್ತಿರದ ಕಣಗಲಕೊಪ್ಪ ಗ್ರಾಮದ ತುಂಗಾ ನದಿ ದಡದಲ್ಲಿ ಭಾನುವಾರ (ಮೇ 29) ಬೆಳಗಿನ ಜಾವ 35 ಮೊಸಳೆ ಮರಿಗಳು ಜನ್ಮ ತಾಳಿವೆ. ಆಗ ತಾನೇ ಮೊಟ್ಟೆಯಿಂದ ಹೊರಬರುತ್ತಿದ್ದ ಮೊಸಳೆ ಮರಿಗಳನ್ನು ಸುತ್ತಲಿನ ಜನ, ಮಕ್ಕಳು ಕುತೂಹಲದಿಂದ ಮುಟ್ಟಿ ನೋಡಿ, ಸಂತಸಪಟ್ಟರು.

ಸುಮಾರು ಎಂಟು ವರ್ಷ ವಯಸ್ಸಿನ ಎಂಟು ಅಡಿ ಉದ್ದದ ಮೊಸಳೆಯು ತುಂಗಾ ನದಿ ತೀರದಲ್ಲಿ ಅಂದಾಜು ಮೂರು ತಿಂಗಳ ಹಿಂದೆ ಭೂಮಿಯಲ್ಲಿ ಗೂಡು ಮಾಡಿ 38 ಮೊಟ್ಟೆಗಳನ್ನು ಹಾಕಿ ಸುರಕ್ಷಿತವಾಗಿ ಇಟ್ಟಿತ್ತು. ಅವುಗಳಲ್ಲಿ 35 ಮೊಸಳೆ ಮರಿಗಳು ಬೆಳಗಿನ ಜಾವ ಮೊಟ್ಟೆ ಒಡೆದು ಹೊರಬಂದಿವೆ.

ತಾಯಿ ಮೊಸಳೆಯು ಮೂರು ಕಡೆ ಮಣ್ಣು ಅಗೆದು ಒಂದೆಡೆ ಮಾತ್ರ ಮೊಟ್ಟೆಗಳನ್ನು ಹೂತು ಇಟ್ಟಿತ್ತು. ಶನಿವಾರ ರಾತ್ರಿವರೆಗೂ ತಾಯಿ ಮೊಸಳೆ ಸ್ಥಳದಲ್ಲಿಯೇ ಮೊಟ್ಟೆಗಳನ್ನು ಕಾಯುತ್ತಿತ್ತು. ಭಾನುವಾರ ಬೆಳಗಿನ ಜಾವ ಮೀನು ಹಿಡಿಯಲು ಹೋದಾಗ, ಹತ್ತಾರು ಮರಿಗಳು ಮೊಟ್ಟೆ ಒಡೆದು ಚೀರುತ್ತಾ ಒಂದೊಂದಾಗಿ ಹೊರಬರುತ್ತಿರುವುದು ಕಂಡುಬಂತು ಎಂದು ಗ್ರಾಮಸ್ಥರು ಹೇಳಿದ್ದಾರೆ.

38 ಮೊಟ್ಟೆಗಳಲ್ಲಿ 35 ಮರಿಗಳಾಗಿ ಹೊರಬಂದಿವೆ. ಆ ಎಲ್ಲ ಮರಿಗಳೂ ಸುರಕ್ಷಿತವಾಗಿದ್ದು, ನದಿಗೆ ಸೇರಿವೆ. ಇನ್ನೂ ಮೂರು ಮೊಟ್ಟೆಗಳು ಹಾಗೇ ಇದ್ದು, ಸದ್ಯದಲ್ಲೇ ಇವು ಕೂಡ ಮರಿಗಳಾಗಲಿವೆ ಎಂದು ವಲಯ ಅರಣ್ಯಾಧಿಕಾರಿ ರಂಗನಾಥ್ ತಿಳಿಸಿದ್ದಾರೆ.

English summary
35 Crocodile eggs take birth near Mandagadde, Shimoga on Sunday morning (May 29). Mandagadde is in Shettihalli wildlife sanctuary. River Tunga provides the necessary shelter and food for the reptiles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X