ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೇಸ್‌-ಭೂಪತಿಗೆ ಸರ್ಕಾರದಿಂದ ಮಾಸಿಕ 6 ಲಕ್ಷ ರು. ನೆರವು

By Srinath
|
Google Oneindia Kannada News

Paes & Bhupathi
ಹೊಸದಿಲ್ಲಿ, ಮೇ 29: ಲಂಡನ್‌ ಒಲಿಂಪಿಕ್ಸ್‌ಗೆ (2012) ಸಿದ್ಧತೆ ನಡೆಸುವ ಸಲುವಾಗಿ ಕೇಂದ್ರ ಕ್ರೀಡಾ ಸಚಿವಾಲಯ ಲಿಯಾಂಡರ್ ಪೇಸ್‌ ಮತ್ತು ಮಹೇಶ್‌ ಭೂಪತಿ ಅವರಿಗೆ ತಲಾ 6,000 ಡಾಲರ್ (ಅಂದಾಜು 6 ಲಕ್ಷ ರು.) ಮಾಸಿಕ ನೆರವು ನೀಡಲು ನಿರ್ಧರಿಸಿದೆ.

ಲಂಡನ್‌ ಒಲಿಂಪಿಕ್ಸ್‌ನ ಟೆನಿಸ್‌ ಡಬಲ್ಸ್‌ನಲ್ಲಿ ಭಾರತಕ್ಕೆ ಪದಕ ಭರವಸೆ ಎನಿಸಿರುವ ಲಿಯಾಂಡರ್ ಪೇಸ್‌ ಮತ್ತು ಕರ್ನಾಟಕದ ಮಹೇಶ್‌ ಭೂಪತಿ ಒಲಿಂಪಿಕ್ಸ್‌ ಗೆ ತಯಾರಿ ನಡೆಸುವ ಸಲುವಾಗಿ ಆರ್ಥಿಕ ಸಹಾಯ ಮಾಡುವಂತೆ ಸರ್ಕಾರವನ್ನು ಕೋರಿದ್ದರು. ಅವರ ಪರವಾಗಿ ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಸಹ ಮನವಿ ಮಾಡಿತ್ತು. ಅದಕ್ಕೆ ಸಚಿವಾಲಯ ಕೂಡಲೇ ಸ್ಪಂದಿಸಿದೆ.

ಎಐಟಿಎ ಇನ್ನಿಬ್ಬರು ಟೆನಿಸ್‌ ಆಟಗಾರರಾದ ಕರಣ್‌ ರಸ್ತೋಗಿ ಮತ್ತು ವಿಷ್ಣುವರ್ಧನ್‌ ಅವರಿಗೂ ಆರ್ಥಿಕ ನೆರವು ಕೋರಿತ್ತಾದರೂ, ಸಚಿವಾಲಯ ಆ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

English summary
In a bid to help Leander Paes and Mahesh Bhupathi in their preparations for the 2012 London Olympics,the sports ministry has decided to provide financial assistance to the players to the tune of Rs. 2.7 lakh each per month. Ministry's decision came in the wake of the requests sent by the All India Tennis Association (AITA) as well as the players themselves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X