ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಮೃಗಾಲಯದಲ್ಲಿ ಹೆಚ್ಚಿದ ದತ್ತು ಸ್ವೀಕಾರ

|
Google Oneindia Kannada News

ಮೈಸೂರು ಮೃಗಾಲಯದಲ್ಲಿ ದತ್ತು ದರ್ಬಾರ್
ಮೈಸೂರು, ಮೇ 29: ಮೈಸೂರು ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳ ಕುರಿತು ಜನರಲ್ಲಿ ಪ್ರೀತಿ ಹೆಚ್ಚುತ್ತಿದೆ. ಅಲ್ಲಿನ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಲು ಹೆಚ್ಚು ಹೆಚ್ಚು ಜನರು ಆಸಕ್ತರಾಗುತ್ತಿದ್ದಾರೆ. ಕ್ರಿಕೆಟ್ ಆಟಗಾರರು, ಸಿನಿಮಾ ತಾರೆಗಳು, ಉದ್ಯಮಿಗಳಿಂದ ಅಲ್ಲೀಗ ದತ್ತು ದರ್ಬಾರ್.

1995ರಲ್ಲಿ ಪ್ರಾಣಿ ಪಕ್ಷಿಗಳ ದತ್ತು ಸ್ವೀಕಾರ ಮೈಸೂರಿನಲ್ಲಿ ಆರಂಭವಾಗಿತ್ತು. ಆದರೆ ಆರಂಭದ ವರ್ಷಗಳಲ್ಲಿ ಅದು ಅಷ್ಟೇನೂ ಜನಪ್ರಿಯವಾಗಿರಲಿಲ್ಲ. ಆದರೆ ಇತ್ತಿಚಿನ ಒಂದೆರಡು ವರ್ಷಗಳಲ್ಲಿ ಪ್ರಾಣಿಗಳ ದತ್ತು ಸ್ವೀಕರಿಸುವ ಕ್ರೇಝ್ ಹೆಚ್ಚಾಗಿತ್ತು.

ಇದರ ಪರಿಣಾಮವಾಗಿ ಕಳೆದ ವರ್ಷ ಮೈಸೂರು ಮೃಗಾಲಯದ ಸುಮಾರು 394 ಪ್ರಾಣಿ ಪಕ್ಷಿಗಳಿಗೆ ದತ್ತು ಸ್ವೀಕಾರದ ಭಾಗ್ಯ ದೊರಕಿದೆ. 2010-11ರ ಆರ್ಥಿಕ ವರ್ಷದಲ್ಲಿ ಪ್ರಾಣಿಪಕ್ಷಿಗಳ ದತ್ತು ಸ್ವೀಕಾರದಿಂದ ಮೈಸೂರು ಮೃಗಾಲಯ ಸುಮಾರು 30.2 ಲಕ್ಷ ರು. ಸಂಗ್ರಹಿಸಿದೆ.

ಆದರೆ ತಾವರೆಕೊಪ್ಪದಲ್ಲಿ ಮೈಸೂರು ಮೃಗಾಲಯಕ್ಕಿಂತ ಹೆಚ್ಚು ಹುಲಿಗಳಿದ್ದರೂ ಇಲ್ಲಿ ದತ್ತು ಯೋಜನೆ ಹೆಚ್ಚು ಜನಪ್ರಿಯವಾಗಿಲ್ಲ ಎಂದು ದಿ ಹಿಂದು ವರದಿ ಮಾಡಿದೆ. ಪ್ರಾಣಿ ದತ್ತು ತೆಗೆದುಕೊಳ್ಳುವಂತೆ ಸೆಲೆಬ್ರಿಟಿಗಳನ್ನು ಆಕರ್ಷಿಸಲು ಪ್ರಯತ್ನ ಮಾಡುತ್ತಿರುವುದಾಗಿ ಅಲ್ಲಿನ ಅಧಿಕಾರಿಗಳು ಹೇಳುತ್ತಾರೆ.

ಇತ್ತೀಚೆಗೆ ಈ ಯೋಜನೆಯ ಜನಪ್ರಿಯತೆಗೆ ಕ್ರಿಕೆಟ್ ಆಟಗಾರರು, ಸಿನಿಮಾ ನಟನಟಿಯರು, ರಾಜಕಾರಣಿಗಳು ಮತ್ತು ಉದ್ಯಮಿಗಳು ಕೂಡ ಕಾರಣ. ಅನಿಲ್ ಕುಂಬ್ಲೆ ಜಿರಾಫೆ ಮರಿಯೊಂದನ್ನು ಮತ್ತು ಏಷ್ಯಾದ ಸಿಂಹವೊಂದನ್ನು ದತ್ತು ತೆಗೆದುಕೊಂಡಿದ್ದಾರೆ.

ಜಾವಗಲ್ ಶ್ರೀನಾಥ್ ಒಂದು ಚಿರತೆಯನ್ನು ದತ್ತು ತೆಗೆದುಕೊಂಡಿದ್ದಾರೆ. ಇದರಿಂದ ಉತ್ಸಾಹ ಪಡೆದ ಜಹೀರ್ ಖಾನ್ ಹುಲಿಯೊಂದನ್ನು ದತ್ತು ಪಡೆದಿದ್ದು ಅದಕ್ಕೆ ಸುಮಾರು 1 ಲಕ್ಷ ರು. ವಿನಿಯೋಗಿಸಿದ್ದಾರೆ.

ಪ್ರಾಣಿಗಳ ದತ್ತು ಸ್ವೀಕಾರದಲ್ಲಿ ರಾಜಕಾರಣಿಗಳೂ ಹಿಂದೆ ಬಿದ್ದಿಲ್ಲ. ಅಮೂಲ್ಯ ಎಂಬ ಹುಲಿಯನ್ನು ಸತತ ಮೂರನೇ ವರ್ಷಬಿ. ಎಸ್. ಯಡಿಯೂರಪ್ಪ ದತ್ತು ತೆಗೆದುಕೊಂಡಿದ್ದಾರೆ.

ಡಿ. ಕೆ. ಶಿವಕುಮಾರ್ ಒಂದು ಗೊರಿಲ್ಲಾ ದತ್ತು ತೆಗೆದುಕೊಂಡಿದ್ದಾರೆ. ಜೊತೆಗೆ ಎರಡು ಕಿಂಗ್ ಕೋಬ್ರಾಗಳಿಗೆ ಒಂದು ಲಕ್ಷ ರು. ನೀಡಿ ಅಜೀವ ದತ್ತು ಸ್ವೀಕಾರ ಮಾಡಿದ್ದಾರೆ. ಕನ್ನಡ ಚಿತ್ರನಟ ದರ್ಶನ್ ಆನೆಯ ಮರಿಯನ್ನು ದತ್ತು ತೆಗೆದುಕೊಂಡಿದ್ದಾರೆ.

English summary
Celebrities have adopted animals at Mysore zoo. Mysore zoo had 394 takers for adoption scheme 2010-11. The zoo collected Rs. 30.2 lakh as adoption fees in 2010-11 the hindu reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X