ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಮುಂದು: ರಾಜ್ಯಕ್ಕೆ 200 ಹೊಸ ಪಿಯು ಕಾಲೇಜ್

|
Google Oneindia Kannada News

ರಾಜ್ಯಕ್ಕೆ 200 ಹೊಸ ಪಿಯು ಕಾಲೇಜು ಬರಲಿವೆ
ಬೆಂಗಳೂರು, ಮೇ 29: 2011-12 ಶೈಕ್ಷಣಿಕ ವರ್ಷದಲ್ಲಿ ಸುಮಾರು 250ರಷ್ಟು ಹೊಸ ಪಿಯು ಕಾಲೇಜುಗಳನ್ನು ಆರಂಭಿಸುವ ಅಪ್ಲಿಕೇಷನ್ ಗಳು ಪದವಿಪೂರ್ವ ಶಿಕ್ಷಣ ಇಲಾಖೆಗೆ ಬಂದಿವೆ. ಇದರಲ್ಲಿ ಹೆಚ್ಚಿನವುಗಳಿಗೆ ತ್ವರಿತವಾಗಿ ಅನುಮತಿ ನೀಡಲಾಗುತ್ತಿದೆ.

ಇವುಗಳಲ್ಲಿ ಹೆಚ್ಚಿನವುಗಳಿಗೆ ವಿಶ್ವೇಶ್ವರ ಹೆಗ್ಡೆ ಕಾಗೇರಿ ಅನುಮತಿ ನೀಡಿಯಾಗಿದೆ ಎಂದು ಮೂಲಗಳು ಹೇಳುತ್ತಿವೆ. ಪ್ರಸಕ್ತ ವರ್ಷದಿಂದ ಕೋರ್ಸ್ ಆರಂಭಿಸಲು ಸುಮಾರು 170 ಕಾಲೇಜುಗಳಿಗೆ ಕಾಗೇರಿ ಅನುಮತಿ ನೀಡಿದ್ದಾರೆ. ಮುಂದಿನ ವಾರ ಇನ್ನಷ್ಟು ಕಾಲೇಜುಗಳಿಗೆ ಅನುಮತಿ ದೊರಕಲಿದೆ ಎಂದು ಮೂಲಗಳು ಹೇಳಿವೆ.

"ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಸರಕಾರಿ ಪಿಯು ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ. ಹೀಗಾಗಿ ಈ ವರ್ಷ ಸರಕಾರಿ ಕಾಲೇಜುಗಳ ನಿರ್ಮಾಣಕ್ಕೆ ಯಾವುದೇ ಪ್ರಸ್ತಾಪಗಳು ಬಂದಿಲ್ಲ. ಈ ವರ್ಷ ನಾವು ಯಾವುದೇ ಸರಕಾರಿ ಪಿಯು ಕಾಲೇಜು ಆರಂಭಿಸುವಿದಲ್ಲ" ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬೆಂಗಳೂರು ಮುಂದು: ಪಿಯುಸಿ ಕೋರ್ಸ್ ಆರಂಭಿಸಲು ಅನುಮತಿ ಕೋರಿರುವ ಅಪ್ಲಿಕೇಷನ್ ಗಳಲ್ಲಿ ಹೆಚ್ಚಿನವು ಬೆಂಗಳೂರಿನಿಂದ ಬಂದಿವೆ. 250 ಅಪ್ಲಿಕೇಷನ್ ಗಳಲ್ಲಿ 150 ಅಪ್ಲಿಕೇಷನ್ ಗಳು ಬೆಂಗಳೂರಿನಿಂದ ಬಂದಿದೆ. ಧಾರವಾಡದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಅಪ್ಲಿಕೇಷನ್ ಗಳು ಬಂದಿವೆ.

English summary
200 more PU colleges to come up in Karnataka. The state department of pre-university education (PUE) has received about 250 applications to open PU colleges for the academic year 2011-12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X