ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ರಾಪ್ತರ ಮದುವೆ ತಡೆದ ಪೊಲೀಸರಿಂದ ಬುದ್ಧಿಮಾತು

By * ರೋಹಿಣಿ ಬಳ್ಳಾರಿ
|
Google Oneindia Kannada News

Child marriage aborted in Bellary
ಬಳ್ಳಾರಿ, ಮೇ. 28 : ವಧು - ವರ ಇಬ್ಬರೂ ಅಪ್ರಾಪ್ತರೇ. ಆದರೂ, ಹಸೆಮಣೆ ಏರಲು ಸಿದ್ಧರಾಗಿದ್ದರು. ಅದೂ ಹೆತ್ತವರು, ಬಂಧುವರ್ಗದ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ವೈವಾಹಿಕ ಬದುಕಿಗೆ ಪದಾರ್ಪಣೆ ಮಾಡಲು ಅಣಿಯಾಗಿದ್ದರು.

ವರ ಆಂಜಿನೇಯಲು (16), ವಧು ಸುಜಾತ (14). ಈ ಇಬ್ಬರೂ ಆಂಧ್ರ ಮೂಲದವರು. ಬಳ್ಳಾರಿ ನಗರದ ಹವಂಭಾವಿ ವ್ಯಾಪ್ತಿಯ ಗಾಯಿತ್ರಿ ನಗರ ನಿವಾಸಿಗಳು. ಇವರ ತಂದೆ - ತಾಯಿ ಇಬ್ಬರೂ ಒಪ್ಪಿ ಇವರ ವಿವಾಹಕ್ಕೆ ಮುಂದಾಗಿದ್ದರು.

ಈ ಕುರಿತು ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳು ಮತ್ತು ಪೊಲೀಸರು ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿ ಇವರ ವಿವಾಹವನ್ನು ತಡೆದು, ಈ ಇಬ್ಬರ ಪೋಷಕರಿಂದ ಲಿಖಿತ ಹೇಳಿಕೆಯ ಪ್ರಮಾಣ ಪತ್ರ ಪಡೆದು ಬಿಡುಗಡೆ ಮಾಡಿದರು.

ಅಷ್ಟೇ ಅಲ್ಲ, ಈ ವಿವಾಹಕ್ಕೆ ಆಗಮಿಸಿದ್ದ ಪುರೋಹಿತರಿಗೆ ಕೂಡ ಅಧಿಕಾರಿಗಳು ಮತ್ತು ಪೊಲೀಸರು ಬುದ್ಧಿಮಾತನ್ನು ಹೇಳಿ ಕಳುಹಿಸಿದ್ಧಾರೆ. ಅಧಿಕಾರಿಗಳು - ಪೊಲೀಸರು ವಿವಾಹ ತಡೆದ ಕೆಲ ಹೊತ್ತಿನ ನಂತರ ಮದುವೆ ಮನೆಯಲ್ಲಿ ಬಹುತೇಕರು ಜಾಗ ಮಾಡಿದ್ದರು.

English summary
Woman and child welfare officers and police stop child marriage in Bellary. The marriage was being solemnized with the consent of parents of both under aged boy and girl, both from Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X