ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನ ದೇವರಪುರದಲ್ಲಿ ಸಂಭ್ರಮದ ಕುಂಡೆ ಹಬ್ಬ

By Bm Lavakumar
|
Google Oneindia Kannada News

Kunde Habba of Coorg
ಮಡಿಕೇರಿ, ಮೇ 27 : ದಕ್ಷಿಣ ಕೊಡಗಿನ ದೇವರಪುರದಲ್ಲಿ ಬುಡಕಟ್ಟು ಜನಾಂಗದವರು ತಮ್ಮ ವಾರ್ಷಿಕ ಹಬ್ಬವಾದ ಕುಂಡೆ ಹಬ್ಬವನ್ನು ಮೇ 27ರಂದು ಸಡಗರ ಸಂಭ್ರಮದಿಂದ ಆಚರಿಸಿದರು.

ಬೆಳಿಗ್ಗೆಯೇ ಎಲ್ಲೆಡೆಯಿಂದ ವೇಷಧಾರಿಗಳಾಗಿ ಆಗಮಿಸಿದ ಬುಡಕಟ್ಟು ಮಂದಿ ರಸ್ತೆಯಲ್ಲಿ ತಿರುಗಾಡುತ್ತಾ ವಾಹನಗಳನ್ನು ತಡೆದು ಭಿಕ್ಷೆ ಬೇಡಿದರೆ, ಇನ್ನು ಕೆಲವರು ಅಂಗಡಿ, ಮನೆಗಳಿಗೆ ತೆರಳಿ ಕುಂಡೇ... ಕುಂಡೇ.... ಎನ್ನುತ್ತಾ ಅಶ್ಲೀಲ ಪದಗಳಿಂದ ಬೈಯುತ್ತಾ ಹಣ ವಸೂಲಿ ಮಾಡಿದರು.

ಹಣ ನೀಡಿದವರಿಗೆ ಒಳ್ಳೆ ಕುಂಡೆ ಎಂದು ಹೊಗಳಿದ ವೇಷಧಾರಿಗಳು, ಕೊಡದೆ ಸತಾಯಿಸಿದವರನ್ನು ಕೆಟ್ಟ ಕೆಟ್ಟ ಪದಗಳಿಂದ ಬೈಯುತ್ತಾ ಹಣ ವಸೂಲಿ ಮಾಡದೆ ಮುಂದೆ ತೆರಳಲಿಲ್ಲ. [ಕುಂಡೆ ಹಬ್ಬ ಹೇಗೆ ಆಚರಿಸುತ್ತಾರೆ? ಸಂಪೂರ್ಣ ವಿವರ ಇಲ್ಲಿದೆ]

ಗೋಣಿಕೊಪ್ಪಲು, ಪೊನ್ನಂಪೇಟೆ, ಪಾಲಿಬೆಟ್ಟ, ಕುಟ್ಟ ಅಲ್ಲದೆ ಜಿಲ್ಲೆಯ ಹೊರಭಾಗಗಳಿಂದ ವಿವಿಧ ನಮೂನೆಯ ವೇಷ ಭೂಷಣಗಳನ್ನು ಧರಿಸಿ ಬಂದಿದ್ದವರು ಕೈಯಲ್ಲಿ ಸೊರೆಕಾಯಿಯನ್ನು ಹನುಮಂತನ ಗದೆಯಂತೆ ಭುಜದ ಮೇಲಿಟ್ಟು ವೀರಾವೇಶದಲ್ಲಿ ಹೊರಟರೆ, ಕೆಲವರು ತಗಡಿನ ಡಬ್ಬಗಳಿಗೆ ಬಡಿಯುತ್ತಾ ಕುಣಿಯುತ್ತಾ ಹೆಜ್ಜೆ ಹಾಕಿದರು.

ಈ ಬಾರಿ ನಿತ್ಯಾನಂದನ ಹಾಗೂ ಸಿನಿಮಾ ನಟಿಯ ವೇಷದಲ್ಲಿ ಮಿಂಚುವ ಮೂಲಕ ಬುಡಕಟ್ಟು ಮಂದಿ ನಮಗೂ ವಿದ್ಯಮಾನಗಳ ಅರಿವಿದೆ ಎಂಬುವುದನ್ನು ಸಾರಿ ಹೇಳಿದರು. ಸಂಜೆ ದೇವರಪುರಕ್ಕೆ ತೆರಳಿದ ವೇಷಧಾರಿಗಳು ಅಲ್ಲಿನ ಅಯ್ಯಪ್ಪ ಭದ್ರಕಾಳಿ ದೇವಾಲಯದ ಪೂಜೆಯಲ್ಲಿ ಪಾಲ್ಗೊಂಡು ಜನರಿಗೆ, ದೇವರಿಗೆ ಬೈದುದಕ್ಕೆ ತಪ್ಪಾಯಿತೆಂದು ಕ್ಷಮೆ ಕೇಳಿದರು.

;
English summary
Traditional Kunde habba is a unique festival of tribals in Coorg district. On the day of festival tribals condemn deity, curse and scold everyone, who come on their way. They wear unusual costumes like sari, ladies undergarments etc. This festival was celebrated on May 27, 2011.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X