ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕಾಕ್‌ ಪ್ರವಾಸ ಆಮಿಷ : ವಂಚಕರ ಬಂಧನ

By Srinath
|
Google Oneindia Kannada News

Bangkok Online tricksters
ಬೆಂಗಳೂರು, ಮೇ 26: ಆನ್‌ಲೈನ್‌ ಮೂಲಕ ವಿದೇಶ ಪ್ರಯಾಣದ ಆಸೆ ತೋರಿಸಿ ಹಣ ವಸೂಲಿ ಮಾಡುತ್ತಿದ್ದ ಮೂವರು ವಂಚಕರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕನ್ನಿಂಗ್‌ಹ್ಯಾಂ ರಸ್ತೆಯ ಪ್ರಸ್ಟೀಜ್‌ ಸೆಂಟರ್ ಪಾಯಿಂಟ್‌ನಲ್ಲಿ ಕಚೇರಿ ತೆರೆದು 'ಸ್ಮಾರ್ಟ್‌ ಟ್ರಿಪ್‌' ವೆಬ್‌ಸೈಟ್‌ ಮೂಲಕ ವಿದೇಶಿ ಪ್ರವಾಸದ ಆಮಿಷವೊಡ್ಡಿ ಹಣ ಪಡೆಯುತ್ತಿದ್ದರು. ದೇವಪ್ರಕಾಶ್‌, ಟಿ.ಬಾಲಚಂದರ್‌, ಕೆ. ಪ್ರಶಾಂತ್‌ ಬಂಧಿತರು. ದಾಳಿ ಸಂದರ್ಭದಲ್ಲಿ 1.46 ಲಕ್ಷ ರೂ. ನಗದು, 5 ಮೊಬೈಲ್‌ ಫೋನ್‌ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

10 ಸಾವಿರ ರೂ. ಸದಸ್ಯ ಶುಲ್ಕ ಪಡೆಯುತ್ತಿದ್ದ ಆರೋಪಿಗಳು ನಂತರ ಸದಸ್ಯತ್ವ ಪಡೆದವರು ತಮ್ಮ ಕಡೆಯಿಂದ ಮತ್ತಿಬ್ಬರ ಸದಸ್ಯತ್ವ ಮಾಡಿಸಿದರೆ ಬ್ಯಾಂಕಾಕ್‌ ಪ್ರವಾಸ ಪ್ಯಾಕೇಜ್‌ ಬಹುಮಾನವಾಗಿ ದೊರೆಯಲಿದೆ ಎಂಬ ಆಮಿಷವೊಡ್ಡುತ್ತಿದ್ದರು.

ಇಬ್ಬರಿಗಿಂತ ಹೆಚ್ಚಿನ ಸದಸ್ಯತ್ವ ಮಾಡಿಸಿದರೆ ಮತ್ತಷ್ಟು ಬಹುಮಾನ ನೀಡುವ ಆಸೆ ತೋರಿಸಿ ಹಣ ಪಡೆದು ಮೋಸ ಮಾಡುತ್ತಿದ್ದರು. ತಂಡದ ಇನ್ನೂ ಮೂವರು ಆರೋಪಿಗಳಾದ ಮಹೇಶ್‌ ಲೋಗನಾಥನ್‌, ಸಂತೋಷ್‌ ಸುಮೊ ಮತ್ತು ಸುರೇಶ್‌ಕುಮಾರ್ ಗೌರಿಶೆಟ್ಟಿ ಎಂಬುವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
The Central Crime Branch (CCB), Bangalore cracked down on the gang of six running a fake online travel agency, and arrested three men on Wednesday (May 25), while three others are on the run.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X