ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗಳ ಮದ್ವೆ ಮಾಡಿಸಬೇಕು, ಜಾಮೀನು ಕೊಡಿ ತಂದೇ

By Srinath
|
Google Oneindia Kannada News

Abdul Karim Telgi
ಬೆಂಗಳೂರು, ಮೇ 26: ಒಂದು ದಶಕದಿಂದ ಜೈಲನ್ನೇ ಅರಮನೆಯಾಗಿಸಿಕೊಂಡಿರುವ ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಆರೋಪಿ ಅಬ್ದುಲ್‌ ಕರೀಂ ಲಾಲಾ ತೆಲಗಿ ಈ ಬಾರಿ ಪತ್ನಿ-ಪುತ್ರಿಯನ್ನು ನೋಡಿಕೊಳ್ಳುವ ನೆಪವೊಡ್ಡಿ ತನಗೆ ಜಾಮೀನು ನೀಡುವಂತೆ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾನೆ.

ಪತ್ನಿ -ಪುತ್ರಿಯ ಯೋಗಕ್ಷೇಮ ಹಾಗೂ ತನ್ನ ಆರೋಗ್ಯ ಸ್ಥಿತಿ ಸುಧಾರಣೆಗಾಗಿ ಜೈಲಿನಿಂದ ಹೊರಗೆ ಹೋಗಲು ಜಾಮೀನು ನೀಡುವಂತೆ ಮನವಿ ಮಾಡಿ ಅಬ್ದುಲ್‌ ಕರೀಂ ಲಾಲಾ ತೆಲಗಿ ಸಲ್ಲಿಸಿರುವ ರಿಟ್‌ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೇಶವ್ ನಾರಾಯಣ್ ಅವರು, ತೆಲಗಿ ಆರೋಗ್ಯ ಸ್ಥಿತಿ ಕುರಿತು ಮೇ 31ರೊಳಗೆ ನ್ಯಾಯಾಲಯಕ್ಕೆ ವರದಿ ನೀಡುವಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ಆದೇಶ ನೀಡಿದರು.

ಏಡ್ಸ್‌ ಸೇರಿದಂತೆ ಹಲವು ರೋಗಗಳಿಂದ ನರಳುತ್ತಿರುವುದಾಗಿ ಆತ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾನೆ. ಜತೆಗೆ ಪತ್ನಿಯ ಅನಾರೋಗ್ಯ ಪೀಡಿತರಾಗಿದ್ದಾರೆ. ಮಗಳ ಶಿಕ್ಷಣ ಕುಂಠಿತಗೊಂಡಿದ್ದು, ಆಕೆಗೆ ವಿವಾಹ ಮಾಡಬೇಕಿದೆ. ನಾನು ಜೈಲಿನಲ್ಲಿದ್ದರೆ ಮಗಳನ್ನು ವಿವಾಹ ಮಾಡಿಕೊಳ್ಳಲು ಯಾರೂ ಮುಂದೆ ಬರುವುದಿಲ್ಲ ಎಂಬುದು ತೆಲಗಿಯ ಅಳಲಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ತೆಲಗಿ ಹಾಗೂ ಅವನ ಸಹಚರರ ವಿರುದ್ಧ 42 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 9 ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. 9ರ ಪೈಕಿ ಕೆಲವು ಪ್ರಕರಣಗಳಲ್ಲಿ ತೆಲಗಿಗೆ ಜೀವಾವಧಿ ಶಿಕ್ಷೆಯಾಗಿದೆ.
ಇನ್ನೂ ಕೆಲವು ಪ್ರಕರಣ ವಿಚಾರಣೆ ಹಂತದಲ್ಲಿವೆ. ಜೈಲಿನಿಂದ ಹೊರಗೆ ಬರಲು ಕಳೆದ 9 ವರ್ಷದಿಂದ ಸತತ ಪ್ರಯತ್ನ ನಡೆಸುತ್ತಿರುವ ತೆಲಗಿ, ಈ ಬಾರಿ ಪತ್ನಿ-ಪುತ್ರಿಯನ್ನು ಮುಂದಿಟ್ಟುಕೊಂಡು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ.

English summary
Karnataka High Court on has directed the police to submit by May 31 a medical status report of multi-crore fake stamp paper scam kingpin Abdul Karim Telgi, serving a jail term. Justice Keshav Narayan passed the orders on a bail plea by Telgi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X