ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂಪ್ ಗೆ ಸಿಕ್ಕಿ ಫಜೀತಿಗೀಡಾದ ಒಬಾಮಾ ಕಾರು

By Srinath
|
Google Oneindia Kannada News

Obama’s missile-proof Cadillac
ಡಬ್ಲಿನ್, ಮೇ 26: ಅಯ್ಯೋ ಬಿಡಿ. ಅದರ ಮಾತೇಕೆ ಹೇಳುತ್ತೀರಿ. ನಮ್ಮಲ್ಲಿ ಘಳಿಗೆಗೊಂದು ಇಂತಹ ಘಟನೆಗಳು ಕಣ್ಣಿಗೆ ಕಾಣುತ್ತವೆ ಎಂದು ಸ್ವಾಟೆ ತಿರುವಬೇಡಿ. ಸಾಕ್ಷಾತ್ ದೊಡ್ಡಣ್ಣ, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ ಬೀಸ್ಟ್ ಹೆಸರಿನ ಪರಮ ಐಷಾರಾಮಿ ಕಾರು ಸಹ ಒಬಾಮಾಗೆ ಕೈಕೊಟ್ಟಿದೆ ಎಂದು ಸಮಾಧಾನ ಮಾಡಿಕೊಳ್ಳಬಹುದು.

ಒಬಾಮಾ ಕಾರು ಚಿಕ್ಕ ಹಂಪ್ ನಲ್ಲಿ ಮಿನಿಸಿಕೊಂಡು ನಿಂತುಬಿಟ್ಟ ಘಟನೆ ನಡೆದಿದೆ. ಇದರಿಂದ ಒಬಾಮಾ ಪೇಚಾಟಕ್ಕೆ ಸಿಲುಕಿರಬಹುದು. ಆದರೆ ಇಡೀ ಪ್ರಪಂಚ ಟಿವಿಗಳಲ್ಲಿ ಈ ದೃಶ್ಯವನ್ನು ನೋಡಿ, ಮುಸಿಮುಸಿ ನಗುತ್ತಿದೆ. ಬಕಿಂಗ್ ಹ್ಯಾಮ್ ಪ್ಯಾಲೆಸ್ ಎದುರು ಸೋಮವಾರ ಈ ಘಟನೆ ನಡೆದಿದೆ.

ಈ ಕಾರಿನಲ್ಲಿ ಒಬಾಮಾ ಜತೆಗೆ ಅವರ ಪತ್ನಿಯೂ ಇದ್ದರು. ಕಾರು ಮುಂದಕ್ಕೆ ಚಲಿಸದೇ ಹೋದಾಗ ದಡಬಡನೇ ಕಾರಿನಿಂದ ಇಳಿದ ದಂಪತಿ ತೆಪ್ಪಗೆ ಮತ್ತೊಂದು ಕಾರೇರಿ ಪ್ರಯಾಣ ಮುಂದುವರಿಸಿದರು. ಪ್ರತಿಷ್ಠಿತ ಜನರಲ್ ಮೋಟಾರ್ಸ್ ಕಂಪನಿ ತಯಾರಿಸಿರುವ ಕಪ್ಪು ಬಣ್ಣದ ಕ್ಯಾಡಿಲ್ಯಾಕ್‌ ಕಾರು ಸುಮಾರು 3 ಟನ್‌ ಭಾರ ಹೊಂದಿದ್ದು, ತಾಸಿಗೆ 60 ಮೈಲು ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಲಂಡನ್‌ ವರದಿ: ಈ ಮಧ್ಯೆ, ಲಾಡನ್‌ ಹತ್ಯೆ ಬಳಿಕ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಜೀವಕ್ಕೆ ಅಪಾಯವಿದೆ ಎಂದು ವರದಿಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಅವರ ಕಾರನ್ನು ಅತ್ಯಾಧುನಿಕವಾಗಿ ಮತ್ತಷ್ಟು ಸುಭ್ರದಗೊಳಿಸುವ ಕಾರ್ಯ ನಡೆದಿದೆ. ಸದ್ಯದಲ್ಲೇ, ಬ್ರಿಟನ್‌ ಹಾಗೂ ಐರ್ಲೆಂಡ್‌ ಭೇಟಿ ವೇಳೆ ಈ ಕಾರಿನಲ್ಲಿಯೇ ಅವರು ಸುತ್ತಾಡಲಿದ್ದಾರೆ.

ರಕ್ಷಾಕವಚದಿಂದ ಆವೃತವಾಗಿರುವ ಈ ಕಾರು ಸಕಲ ರಕ್ಷಣಾ ವ್ಯವಸ್ಥೆಗಳನ್ನೂ ಹೊಂದಿದೆ. ಗುಂಡು ನಿರೋಧಕ ಗಾಜಿನಿಂದ ಹಿಡಿದು ಅಶ್ರುವಾಯು ನಿರೋಧಕ ಹಾಗೂ ಶಾಟ್‌ ಗನ್‌ ನಿರೋಧಕ ವ್ಯವಸ್ಥೆಯನ್ನೂ ಅದು ಹೊಂದಿದೆ.

3 ಲಕ್ಷ ಡಾಲರ್ ಬೆಲೆಯ ಈ ವಿಶೇಷ ಕಾರನ್ನು ರಾಕೆಟ್‌ ಚಾಲಿತ ಗ್ರೆನೇಡ್‌ ದಾಳಿಗೂ ಹಾನಿಗೊಳ್ಳದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಕಾರಿನಲ್ಲಿ ಪ್ರಯಾಣಿಸುವಾಗ ಒಬಾಮಾ ಅವರಿಗೆ ಒಂದು ವೇಳೆ ಗುಂಡೇಟು ಬಿದ್ದರೂ, ಅವರಿಗೆ ತಕ್ಷಣಕ್ಕೆ ನೀಡಬೇಕಾದ ಪ್ರಥಮ ಚಿಕಿತ್ಸೆ ಸೇರಿದಂತೆ ಅವರಿಗೆ ಹೊಂದುವ ರಕ್ತದ ಬಾಟಲಿಯನ್ನೂ ಕಾರಿನಲ್ಲಿಡಲಾದೆ. ಕಾರಿನಲ್ಲಿ ಅತ್ಯಾಧುನಿಕ ಸಂಪರ್ಕ ಸಾಧನಗಳನ್ನು ಅಳವಡಿಸಲಾಗಿದ್ದು, ಅಧ್ಯಕ್ಷರು ಹಿಂದಿನ ಆಸನದಲ್ಲಿ ಕುಳಿತು ದೇಶದ ಆಡಳಿತವನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದಾಗಿದೆ.

ಬಟನ್‌ ಒತ್ತಿದರೆ ಸಾಕು ಒಬಾಮಾ ಅವರಿಗೆ 10 ಇಂಚು ದಪ್ಪದ ಗುಂಡು ನಿರೋಧಕ ಬಾಗಿಲುಗಳು ರಕ್ಷಣೆ ನೀಡುತ್ತವೆ. ಕಾರಿನಲ್ಲಿ ಲ್ಯಾಪ್‌ಟಾಪ್‌ ನಿಸ್ತಂತು ಅಂತರ್ಜಾಲ, ಸೆಟಲೈಟ್‌ ಫೋನ್‌ ಹಾಗೂ ಉಪಾಧ್ಯಕ್ಷ ಜಾಯ್‌ ಬಿಡೆನ್‌ ಮತ್ತು ಸೇನಾ ಮುಖ್ಯಸ್ಥರ ಜತೆ ನೇರ ಸಂಪರ್ಕ ಪಡೆಯುವ ವ್ಯವಸ್ಥೆಯನ್ನು ಅದು ಹೊಂದಿದೆ.

English summary
The US President Obama’s day in Dublin started with a mishap that was out of his control, but it was a funny sight never the less. The overloaded and heavy presidential limo got stuck on a hump coming out of Buckingham Palace. It looked like a see-saw teetering and not being able to go forward or back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X