ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿ ವಾಪಸ್ ನೀಡಲು ಗಂಗೂಲಿಗೆ ಕೋರ್ಟ್ ಗಡುವು

|
Google Oneindia Kannada News

ಸೌರವ್ ಗಂಗೂಲಿ
ಕೊಲ್ಕತ್ತಾ, ಮೇ 26: ಪಶ್ಚಿಮ ಬಂಗಾಳ ಸರಕಾರ, ಸೌರವ್ ಗಂಗೂಲಿಗೆ ಕಡಿಮೆ ಬೆಲೆಗೆ ನೀಡಿದ ಭೂಮಿಗೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಭೂಮಿಯನ್ನು ಎರಡು ವಾರದೊಳಗೆ ವಾಪಸ್ ನೀಡುವಂತೆ ಗಂಗೂಲಿಗೆ ಕೋರ್ಟ್ ಆದೇಶಿಸಿದೆ. ಇದರೊಂದಿಗೆ ಗಂಗೂಲಿ ನೀಡಿದ ಹಣವನ್ನು ಎರಡು ವಾರದೊಳಗೆ ಹಿಂತುರುಗಿಸುವಂತೆ ಪಶ್ಚಿಮ ಬಂಗಾಳ ಸರಕಾರಕ್ಕೆ ಕೋರ್ಟ್ ಹೇಳಿದೆ.

ಶಾಲೆಯ ನಿರ್ಮಾಣಕ್ಕಾಗಿ ಗಂಗೂಲಿಗೆ ಭೂ ಹಂಚಿಕೆ ಮಾಡಲಾಗಿತ್ತು. ಆದರೆ ನಿಯಮಗಳನ್ನು ಉಲ್ಲಂಘಿಸಿ 44.9 ಕೋಟಿ ರು. ಮೌಲ್ಯದ ಭೂಮಿಯನ್ನು ಕೇವಲ 63 ಲಕ್ಷ ರು.ಗೆ ನೀಡಿರುವುದರ ಕುರಿತು ತೀವ್ರ ವಿರೋಧ ವ್ಯಕ್ತವಾಗಿತ್ತು.

2010ರಲ್ಲಿ ಈ ಕುರಿತು ಅನಿವಾಸಿ ಭಾರತೀಯರೊಬ್ಬರು ನೀಡಿದ ದೂರನ್ನು ವಿಚಾರಣೆ ನಡೆಸಿದ ಕೊಲ್ಕತ್ತಾ ಹೈಕೋರ್ಟ್ ಗಂಗೂಲಿ ಪರವಾಗಿ ತೀರ್ಪು ನೀಡಿದ್ದರು. ಆದರೆ ಈ ತೀರ್ಪಿನಿಂದ ತೃಪ್ತಿಯಾಗದ ಅವರು ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದರು.

English summary
The Supreme Court on Thursday, May 26 quashed land allotment to the former Indian cricket captain. The court directed Ganguly to surrender the land within two weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X