ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆ ವಿಮಾನ ಮನೆಯ ಮೇಲೆ ಬಿದ್ದು 10 ಮಂದಿ ಭಸ್ಮ

By Srinath
|
Google Oneindia Kannada News

ಫ‌ರೀದಾಬಾದ್‌, ಮೇ 4: ಇಬ್ಬರು ಪೈಲಟ್‌ಗಳ ಸಹಿತ 7 ಜನರನ್ನು ಹೊತ್ತೂಯ್ಯುತ್ತಿದ್ದ ಲಘು ವಿಮಾನವೊಂದು ಜನವಸತಿ ಪ್ರದೇಶದಲ್ಲಿ 2 ಮನೆಗಳ ಮೇಲೆ ಪತನಗೊಂಡು ವಿಮಾನದಲ್ಲಿದ್ದ ಅಷ್ಟೂ ಮಂದಿ ಮತ್ತು ಮನೆಯಲ್ಲಿದ್ದ ಮೂವರು ಭಸ್ಮವಾಗಿದ್ದಾರೆ. ಸಾವಿನ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ದೆಹಲಿ ಅಪೊಲೊ ಆಸ್ಪತ್ರೆಗೆ ಸೇರಿದ ಈ ಆಂಬುಲೆನ್ಸ್ ವಿಮಾನ ರೋಗಿಯೊಬ್ಬರ ತುರ್ತು ಚಿಕಿತ್ಸೆಗಾಗಿ ಬುಧವಾರ ರಾತ್ರಿ 9 ಗಂಟೆಗೆ ಪಟ್ನಾ ಬಿಟ್ಟಿತ್ತು. 10.35ರ ಹೊತ್ತಿಗೆ ಇಲ್ಲಿಗೆ ಸಮೀಪದ ಪರ್ವತೀಯ ಕಾಲನಿ ಬಳಿ ಈ ದುರಂತ ಸಂಭವಿಸಿದೆ ಎಂದು ಅಧಿಕೃತ ಮೂಲಗಳು ಳಿಸಿವೆ.

ಚಿಕಿತ್ಸೆಗಾಗಿ ತೆರಳುತ್ತಿದ್ದ ರಾಹುಲ್ ರಾಜ್ (22) ಸಹ ಮೃತಪಟ್ಟಿದ್ದಾರೆ. ಪ್ರತಿಕೂಲ ಹವಾಮಾನ, ಬಲವಾದ ಗಾಳಿ ಬೀಸುತ್ತಿದ್ದರಿಂದ ಅಪಘಾತವಾಗಿದೆ ಎಂದು ತಿಳಿದುಬಂದಿದೆ.

ಅಪಘಾತಕ್ಕೆ ಕೆಲವೇ ಕ್ಷಣಗಳ ಮುನ್ನ ನಿಯಂತ್ರಣ ಕೊಠಡಿಗೆ ಪೈಲಟ್ ಈ ಮಾಹಿತಿ ರವಾನಿಸಿದ್ದಾರೆ. ಅದಾದನಂತರ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಕಡಿತಗೊಂಡಿದೆ. ಸಂಬಂಧಿಸಿದ ಅಧಿಕಾರಿಗಳು, ಡಿಜಿಸಿಎ ಮತ್ತು ನಾಗರಿಕ ವಿಮಾನ ಯಾನ ಖಾತೆಯ ಅಧಿಕಾರಿಗಳು ವಿಮಾನ ಪತನಗೊಂಡಿರುವ ಸ್ಥಳಕ್ಕೆ ಧಾವಿಸಿದ್ದಾರೆ.

English summary
A small aircraft with seven on board crashed into a colony in Faridabad's sector 22 around 10.45 pm on Wednesday (May25), killing all on board. Three more persons were killed on the ground. The plane fell on two houses in the middle of Parvatia Colony and immediately burst into flames.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X