ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ಜಿ ಹಗರಣ: ಬಂಧಿತನಿಗೆ ಜೈಲಿನಲ್ಲಿ ಐಪ್ಯಾಡ್ ಬೇಕಂತೆ!

|
Google Oneindia Kannada News

ಜೈಲಿನಲ್ಲಿ ಐಪ್ಯಾಡ್ ಬೇಕಂತೆ!
ನವದೆಹಲಿ, ಮೇ 26: ಜೈಲಿನಲ್ಲಿ ಐಪ್ಯಾಡ್ ಬಳಕೆ ಮಾಡಲು ಅವಕಾಶ ನೀಡುವಂತೆ 2ಜಿ ಹಗರಣದಲ್ಲಿ ಬಂಧಿತನಾಗಿರುವ ಆಸೀಫ್ ಬಾಲ್ವಾ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾನೆ.

ತನ್ನ ವಿರುದ್ಧ ತನಿಖಾ ಸಂಸ್ಥೆ ದಾಖಲಿಸಿರುವ ಸುಮಾರು 80 ಸಾವಿರ ಪುಟಗಳಷ್ಟಿರುವ ಜಾರ್ಜ್ ಷೀಟ್ ಮತ್ತು ಇನ್ನಿತರ ದಾಖಲೆಗಳನ್ನು ಓದಲು[ಐಪ್ಯಾಡ್ ನಲ್ಲಿ ದಟ್ಸ್ ಕನ್ನಡ ಓದಿ] ಐಪ್ಯಾಡ್ ಬಳಕೆಗೆ ಅವಕಾಶ ನೀಡಿ ಎಂದು ಆತ ಮನವಿ ಮಾಡಿಕೊಂಡಿದ್ದಾನೆ.

ಆತನ ಮನವಿಗೆ ಕೋರ್ಟ್ ಅಸ್ತು ಎಂದಿದೆ. ಆದರೆ ದಾಖಲೆ ಓದಲು ಮಾತ್ರ ಬಳಕೆಯಾಗುವಂತೆ ಐಪ್ಯಾಡನ್ನು ಪರಿವರ್ತಿಸಿ ಎಂದು ದೆಹಲಿ ಸರಕಾರದ ಐಟಿ ವಿಭಾಗಕ್ಕೆ ನ್ಯಾಯಾಲಯ ಸೂಚಿಸಿದೆ. ಜೈಲಿನ ಭದ್ರತೆ ಮತ್ತು ಇತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಐಪ್ಯಾಡ್ ನಲ್ಲಿ ಉಳಿದ ಎಲ್ಲಾ ಫೀಚರ್ ಗಳು ಕಾರ್ಯನಿರ್ವಹಿಸದಂತೆ ಮಾಡಲು ಸೂಚಿಸಿದೆ.

ತನ್ನ ಸ್ವಂತ ಐಪ್ಯಾಡ್ ಬಳಕೆಗೆ ಅವಕಾಶ ನೀಡುವಂತೆ ಆತ ಮೊನ್ನೆ ಭಿನ್ನವಿಸಿಕೊಂಡಿದ್ದ. ಜೊತೆಗೆ ಮನೆಯಿಂದ ತರಕಾರಿ ಊಟಕ್ಕೆ ಅವಕಾಶ ನೀಡುವಂತೆ ಬೇಡಿಕೆ ಸಲ್ಲಿಸಿದ. ವಾರಕ್ಕೆ ಎರಡು ಬಾರಿ ಮನೆಯೂಟ ತರಲು ಕೋರ್ಟ್ ಒಪ್ಪಿಗೆ ನೀಡಿದೆ. [ಓದಿ: ಭಾರತಕ್ಕೆ ಬಂತು ಆಪಲ್ ಐಫೋನ್4 ]

ಚಾರ್ಜ್ ಷೀಟ್ ಸಂಬಂಧಿತ ಎಲೆಕ್ಟ್ರಾನಿಕ್ ಪ್ರತಿಗಳನ್ನು ಐಪ್ಯಾಡ್ ನಲ್ಲಿ ಆಸೀಫ್ ಓದಬಹುದು. ಆದರೆ ಜೈಲಿನಲ್ಲಿ ಭದ್ರತೆ ದೃಷ್ಟಿಯಿಂದ ಇಂತಹ ಗ್ಯಾಜೆಟ್ ಬಳಕೆ ಒಳ್ಳೆಯದಲ್ಲ ಎಂದು ಜೈಲಿನ ಅಧಿಕಾರಿಗಳು ಹೇಳುತ್ತಾರೆ. ಜೈಲಿನಲ್ಲಿರುವ ಎಲ್ಲರೂ ಇಂತಹ ಬೇಡಿಕೆ ಸಲ್ಲಿಸಬಹುದು ಎಂಬ ಭಯವನ್ನೂ ವ್ಯಕ್ತಪಡಿಸಿದ್ದಾರೆ.

ಐಪ್ಯಾಡ್ ನಂತಹ ಸಾಧನಗಳು ಸಿಮ್ ಮೂಲಕ ಕಾರ್ಯ ನಿರ್ವಹಿಸುತ್ತದೆ. ಎಷ್ಟೇ ಎಚ್ಚರ ವಹಿಸಿದರೂ ಜೈಲಿನೊಳಕ್ಕೆ ಸಿಮ್ ಕಾರ್ಡ್ ಸಾಗಿಸುವುದು ಕಷ್ಟಕಾರಿಯೇನಲ್ಲ ಎಂದು ಐಟಿ ವಿಭಾಗದ ಅಧಿಕಾರಿಯೊಬ್ಬರು ಹೇಳುತ್ತಾರೆ.

English summary
Delhi High Court asked the Tihar Jail authorities to consider giving an iPad to Asif Balwa(2G spectrum scam co-conspirator). He wants the gadget to read the nearly 80,000 pages of charge sheet and related documents filed against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X