ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಪಾಲರ ರಾಜೀನಾಮೆಗೆ ಕಾಂಗ್ರೆಸ್‌ ಬಣದಿಂದಲೇ ಆಗ್ರಹ

By Srinath
|
Google Oneindia Kannada News

Bharadwaj
ಬೆಂಗಳೂರು, ಮೇ 25: ರಾಜ್ಯ ಕಾಂಗ್ರೆಸ್ಸಿನಲ್ಲಿರುವ ಸಮಾನ ಮನಸ್ಕ ಬಣವೊಂದು ರಾಜ್ಯಪಾಲ ಹಂಸರಾಜ ಭಾರದ್ವಾಜ್‌ ಅವರ ರಾಜೀನಾಮೆಗೆ ಆಗ್ರಹಿಸಿದೆ. ಇದೇ ವೇಳೆ, ಯಡಿಯೂರಪ್ಪ ಸರ್ಕಾರ ವಜಾಕ್ಕೆ ಆಗ್ರಹಿಸಿ ಬೀದಿಗಿಳಿದ ಕಾಂಗ್ರೆಸ್ಸಿಗರನ್ನು ತರಾಟೆಗೆ ತೆಗೆದುಕೊಂಡಿದೆ.

ಪಕ್ಷದ ಮುಖಂಡ, ಮಾಜಿ ಸಂಸದ ಪಿ.ಕೋದಂಡರಾಮಯ್ಯ, ಮುಖಂಡ ಬಿ.ಆರ್‌.ಪಾಟೀಲ್‌ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯಪಾಲರ ರಾಜೀನಾಮೆ ಪಡೆಯುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಲು ಸದ್ಯವೇ ದೆಹಲಿಗೆ ನಿಯೋಗ ಹೋಗುವುದಾಗಿ ಹೇಳಿದರು.

ಕಾಂಗ್ರೆಸ್‌ ನಾಯಕರು ಪದೇ ಪದೇ ರಾಜಭವನಕ್ಕೆ ಹೋಗುವುದನ್ನು ಬಿಟ್ಟು ಜನರ ಬಳಿಗೆ ಹೋಗಬೇಕಾಗಿತ್ತು. ಅದು ಮಾಡದಿರುವುದೇ ತಪ್ಪಾಗಿದೆ ಎಂದರು. ಪಕ್ಷದ ಮುಖಂಡ ಸುಭಾಷ್‌ಚಂದ್ರ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ರಾಜ್ಯ ಬಿಜೆಪಿ ಸರ್ಕಾರವನ್ನು ವಜಾಗೊಳಿಸುವಂತೆ ಮಾಡಿದ ಎರಡನೇ ಬಾರಿ ಶಿಫಾರಸನ್ನು ತಳ್ಳಿ ಹಾಕುವುದರ ಮೂಲಕ ಕೇಂದ್ರ ಯುಪಿಎ ಸರ್ಕಾರ ಸರಿಯಾದ ನಿರ್ಧಾರವನ್ನೇ ಕೈಗೊಂಡಿದೆ. ಇಂತಹ ಕ್ರಮದ ಮೂಲಕ ರಾಜ್ಯಪಾಲರು ಜೋಕರ್ ಅಂತೆ ವರ್ತಿಸಿದ್ದಾರೆ. ಅಧಿವೇಶವನ್ನು ಕರೆಯುವ ಸಂಬಂಧ ಸಂಪುಟದ ನಿರ್ಧಾರವನ್ನು ಮಾನ್ಯ ಮಾಡದೇ ಇರುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ಅಧಿವೇಶನ ನಡೆಸಲು ರಾಜ್ಯಪಾಲರು ಏಕೆ ಅಡ್ಡಿಪಡಿಸಿದರು ಎಂದು ಈ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ದೇವೇಗೌಡರ ತಾಳಕ್ಕೆ ತಕ್ಕಂತೆ ಕುಣಿದು ಹಾಳಾಗಬೇಡಿ ಎಂದು ಕಾಂಗ್ರೆಸ್‌ ನಾಯಕರಿಗೆ ಕಿವಿ ಮಾತು ಹೇಳಿದ ಅವರು, ಗೌಡರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬೇರೆಯವರನ್ನು ಬಳಸಿಕೊಳ್ಳುತ್ತಾರೆ. ತಮಗೆ ಯಾವಾಗ ಯಾರು ಉಪಯೋಗ ಆಗುವುದಿಲ್ಲವೋ ಆಗ ಕಿತ್ತು ಬಿಸಾಕುತ್ತಾರೆ. ಇದು ಕಾಂಗ್ರೆಸ್‌ ನಾಯಕರಿಗೆ ತಿಳಿದಿರಬೇಕು ಎಂದು ಹೇಳಿದರು.

English summary
Four Congress leaders praise high command for not succumbing to pressure tactics Congress leaders criticise Deve Gowda for political mess in State. Also they have demanded for Governor Bhardwaj's resignation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X