ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಲ್ಕಂ ಟು ವಿಕ್ಟೋರಿಯಾ ಬಾರ್ ಅಂಡ್ ರೆಸ್ಟೋರೆಂಟ್

By Prasad
|
Google Oneindia Kannada News

ಬೆಂಗಳೂರು, ಮೇ 25 : ಇದು ಇಂಗ್ಲೆಂಡ್ ದೇಶದ ಕಥೆಯಲ್ಲ. ದೇಶದ ಐಟಿ ಹಬ್, ಸಿಲಿಕಾನ್ ಸಿಟಿ ಬೆಂಗಳೂರಿನ ಕಥೆ ವ್ಯಥೆ. ನಗರದ ಕಲಾಸಿಪಾಳ್ಯದಲ್ಲಿರುವ ರಾಜ್ಯ ಸರಕಾರ ಅಧೀನದ ವಿಕ್ಟೋರಿಯ ಆಸ್ಪತ್ರೆಯ ಗೋಳು. ಇಲ್ಲಿ ಮೆಡಿಸಿನ್, ಸಿರಿಂಜ್ ಗಿಂತ ಜಾಸ್ತಿ ಮಧ್ಯದ ಬಾಟಲ್ ಯಥೇಚ್ಚವಾಗಿ ಲಭ್ಯವಾಗುತ್ತಿದೆ!

ಆಸ್ಪತ್ರೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಸಚಿವ ರಾಮದಾಸ್ ಆಸ್ಪತ್ರೆಯ ಅವ್ಯವಸ್ಥೆ ನೋಡಿ ಬೆಕ್ಕಸ ಬೆರಗಾದರು. ಕ್ಯಾಂಟೀನ್, ಶೌಚಾಲಯ ಎಲ್ಲಿ ನೋಡಿದರೂ ಅಲ್ಲಿ ಬಾಟಲ್ ಗಳು. ಡೈರೆಕ್ಟರ್ ಸ್ಪೆಷಲ್, ರಾಜಾ ವಿಸ್ಕಿ, ಹೇವರ್ಡ್ಸ್ ಹೀಗೇ ನಾನಾ ಕಂಪನಿಯ ಬಾಟಲ್ ಗಳು ಲೋಡ್ ಗಟ್ಟಲೆ ಬಿದ್ದಿರುತ್ತವೆ. ಆಸ್ಪತ್ರೆಯ ಸಿಬ್ಬಂದಿವರ್ಗ, ರೋಗಿಗಳು, ರೋಗಿಗಳ ಸಂಬಂಧಿಗಳು ಹೀಗೆ ಬಂದವರೆಲ್ಲಾ ಆಸ್ಪತ್ರೆಯನ್ನು ಈ ರೀತಿ ಬಳಸಿಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.

ಹಾಗೆಯೇ, ಆಸ್ಪತ್ರೆಯ ಸಿಬ್ಬಂದಿಗಳಿಗೆ ಕೈ ಬೆಚ್ಚಗಾಗಿಸಿದರೆ ತುಂಡೂ ಲಭ್ಯ. ಇನ್ನು ಕ್ಯಾಂಟೀನ್ ಮತ್ತು ಶೌಚಾಲಯದ ಮಧ್ಯೆ ವ್ಯತ್ಯಾಸವೇ ಇಲ್ಲ. ಲಿಫ್ಟ್ ಕೆಟ್ಟೋಗಿ ತಿಂಗಳು ಕಳೆದರೂ ರಿಪೇರಿ ಭಾಗ್ಯವಿಲ್ಲ. ಆದರೂ ಲಿಫ್ಟ್ ಸಂಸ್ಥೆಗೆ ಸಮಯಕ್ಕೆ ಸರಿಯಾಗಿ AMC (annual maintenance contract) ದುಡ್ಡು ಪಾವತಿ. ಅರ್ಧಕ್ಕರ್ಧ ಸಿಬ್ಬಂದಿಗಳು ಬರದಿದ್ದರೂ ಹಾಜರಾತಿ ಪುಸ್ತಕದಲ್ಲಿ ಮಾತ್ರ ಫುಲ್ ಎಟೆಂಡೆನ್ಸ್. [ಓದಿ: ಆಪರೇಷನ್ ಥಿಯೇಟರ್ ಎಂಬ ಮಿನಿ ಬಾರ್ ]

ಆಸ್ಪತ್ರೆ ಸಿಬ್ಬಂದಿಗಳನ್ನು ಚೆನ್ನಾಗಿ ನೋಡಿಕೊಂಡರೆ ಉತ್ತಮ ವೈದ್ಯಕೀಯ ಸೌಲಭ್ಯ ಇಲ್ಲವಾದರೆ ಬದುಕು ನರಕ. ನರ್ಸ್ ಗಳಿಂದ ಹಿಡಿದು ವೈದ್ಯರ ತನಕ ದುಡ್ಡೇ ದೊಡ್ಡಪ್ಪ. ಇನ್ನು ಆಸ್ಪತ್ರೆಯ ಮೆಡಿಕಲ್ ಸುಪರಿಂಟೆಂಡೆಂಟ್ ಅನ್ನು ಈ ಬಗ್ಗೆ ವಿಚಾರಿಸಿದರೆ, ಎಲ್ಲಾ ವಿಭಾಗಕ್ಕೂ ಒಬ್ಬೊಬ್ಬರು ಮುಖ್ಯಸ್ಥರು ಇರುತ್ತಾರೆ. ಇಲ್ಲಿನ ಅವ್ಯವಸ್ಥೆಗೆ ಅವರೂ ಜವಾಬ್ದಾರರು. ಎಲ್ಲದಕ್ಕೂ ನನ್ನನು ಬೊಟ್ಟು ಮಾಡಬೇಡಿ ಎನ್ನುವ ಸಾಂತ್ವನದ ಮಾತು. ಇದನ್ನೆಲ್ಲಾ ನೋಡಿದ ಸಚಿವರು ನರ್ಸ್, ಸಿಬ್ಬಂದಿ ಮತ್ತು ವೈದ್ಯರನ್ನು ಸೇರಿ ಒಟ್ಟು ಆರು ಜನರನ್ನು ಅಮಾನತು ಮಾಡಿದ್ದಾರೆ.

English summary
Karnataka government aided Victoria hospital has turned bar and restaurant. Thanks to the presence of wine bottles instead of medicine bottles. Health minister Ramdas inspects and suspends six people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X