ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಪಾಲರ ವರ್ತನೆ ಮೇಲೆ ಕಣ್ಗಾವಲು: ಯಡಿಯೂರಪ್ಪ

By Srinath
|
Google Oneindia Kannada News

yeddyurappa
ಬೆಂಗಳೂರು, ಮೇ 24: ರಾಜ್ಯಪಾಲರನ್ನು ವಾಪಸು ಕರೆಸಿಕೊಳ್ಳುವಂತೆ ಒತ್ತಾಯಿಸುವುದನ್ನು ಆಡಳಿತಾರೂಢ ಬಿಜೆಪಿ ಸದ್ಯಕ್ಕೆ ಕೆಲಕಾಲ ಮುಂದೂಡಲು ನಿರ್ಧರಿಸಿದೆ. ಆದರೆ ರಾಜ್ಯಪಾಲ ಭಾರದ್ವಾಜ್‌ ವರ್ತನೆ ಮೇಲೆ ನಿಗಾ ಇರಿಸಲು ಉದ್ದೇಶಿಸಿದೆ. ಮುಂದೆಯೂ ರಾಜ್ಯಪಾಲರಿಂದ ಕಿರಿಕಿರಿ ಉಂಟಾದರೆ ಆಗ ಹೋರಾಟವನ್ನು ತೀವ್ರಗೊಳಿಸುವ ಮನಃಸ್ಥಿತಿ ಬಿಜೆಪಿ ನಾಯಕರಿಗೆ ಇದೆ ಎನ್ನಲಾಗಿದೆ.

ರಾಜ್ಯಪಾಲರ ವರ್ತನೆ ಮೇಲೆ ನಿಗಾ ವಹಿಸಲಾಗುವುದು ಎಂದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ತಿಳಿಸಿದ್ದಾರೆ. ಸೋಮವಾರ ದೆಹಲಿಯಿಂದ ವಾಪಸಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಪಾಲರಿಗೆ ಛೀಮಾರಿ ಹಾಕಿದೆ. ಅವರು ಅಕ್ಷಮ್ಯ ಅಪರಾಧ ಎಸಗಿದ್ದಾರೆ ಎಂದು ಹರಿಹಾಯ್ದರು.

ಕಳೆದ ಒಂದು ವಾರದಿಂದ ನಡೆದ ಬೆಳವಣಿಗೆಗಳಿಗೆ ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಈ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು. ವಿಧಾನಸಭೆಯ ಮೂರು ಸ್ಥಾನಗಳಿಗೆ ನಡೆದ‌ ಉಪಚುನಾವಣೆಯ ಫ‌ಲಿತಾಂಶದಿಂದಾಗಿ ಮುಂದಿನ 20 ವರ್ಷಗಳ ಕಾಲ ಪ್ರತಿಪಕ್ಷ ಸ್ಥಾನದಲ್ಲೇ ಕೂಡುವ ಭೀತಿ ಕಾಂಗ್ರೆಸ್‌ ನಾಯಕರಿಗೆ ಆವರಿಸಿದೆ ಎಂದು ಲೇವಡಿ ಮಾಡಿದರು.

English summary
After Union Government rejected to impose President’s Rule in Karnataka, CM Yeddyurappa declared that Karnataka BJP will keep close watch on Governor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X