ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪರೇಶನ್ ಕಮಲಕ್ಕೆ ಬೈ ; ಸಂಪುಟ ವಿಸ್ತರಣೆ ಅಧಿವೇಶನದ ಬಳಿಕ

By Srinath
|
Google Oneindia Kannada News

yeddyurappa, Arun Jaitley
ನವದೆಹಲಿ, ಮೇ 23: ರಾಜ್ಯಪಾಲ ಹಂಸರಾಜ್‌ ಭಾರಧ್ವಾಜ್‌ ಮತ್ತು ತಮ್ಮ ನಡುವಣ ಹಗ್ಗಜಗ್ಗಾಟ ಮುಗಿದಿದ್ದು, ಇನ್ನು ಆಪರೇಶನ್ ಕಮಲಕ್ಕೆ ಕೈಹಾಕುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಿ, ವಿಧಾನಮಂಡಲದ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ಕಸರತ್ತು ನಡೆಸುವುದಾಗಿ ಅವರು ಸೋಮವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ರಾಷ್ಟ್ರಪತಿ ಆಳ್ವಿಕೆ ಎಂಬ ತೂಗುಕತ್ತಿ ತಮ್ಮ ನೆತ್ತಿ ಮೇಲೆ ತೂಗುತ್ತಿದ್ದಾಗ ತಮ್ಮ ಬೆಂಬಲಕ್ಕೆ ನಿಂತ ಬಿಜೆಪಿ ವರಿಷ್ಠರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ.

ಎಲ್.ಕೆ. ಆಡ್ವಾಣಿ, ನಿತಿನ್ ಗಡ್ಕರಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಅವರನ್ನು ಸೋಮವಾರ ಬೆಳಗ್ಗೆ ಭೇಟಿ ಮಾಡಿ ಅವರನ್ನು ಭೇಟಿ ಮಾಡಿ, ಮಾತುಕತೆ, ಹೂ ಗುಚ್ಛಗಳನ್ನು ಬಿಎಸ್ ವೈ ವಿನಿಮಯ ಮಾಡಿಕೊಂಡರು.

ಬಿಜೆಪಿ ರಾಜ್ಯಾಧ್ಯಕ್ಷ ಕೆ. ಎಸ್. ಈಶ್ವರಪ್ಪ, ಸಂಸದ ಡಿ.ವಿ. ಸದಾನಂದ ಗೌಡ, ಕರ್ನಾಟಕ ಸರಕಾರದ ದೆಹಲಿ ಪ್ರತಿನಿಧಿ ವಿ. ಧನಂಜಯ್ ಕುಮಾರ್ ಅವರು ಈ ಸಂದರ್ಭದಲ್ಲಿ ಯಡಿಯೂರಪ್ಪ ಜತೆಗಿದ್ದರು.

English summary
The Karnataka CM Yeddyurappa called on the Senior Party Leader Arun Jaitley and other leaders in New Delhi on May 23 and profusely thanked them for their support during the Crises - the democles's sword of President Rule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X