ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಲಾಡೆನ್ ಲಂಡನ್ ಮೇಲೆ ಬಾಂಬ್ ಹಾಕ್ತಾನಂತೆ!

|
Google Oneindia Kannada News

New Al Qaeda chief
ಲಂಡನ್, ಮೇ 22: ಆಲ್ ಖೈದಾ ನಾಯಕ ಲಾಡೆನ್ ಸ್ಥಾನಕ್ಕೆ ಇತ್ತೀಚೆಗೆ 59 ವರ್ಷದ ಸೈಫ್ ಆಲ್- ಆದಿಲ್ ನನ್ನು ನೇಮಕ ಮಾಡಲಾಗಿತ್ತು. ಈತ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಲಾಡೆನ್ ಕೊಲೆಗೆ ಪ್ರತಿಕಾರವಾಗಿ ಲಂಡನ್ ಮೇಲೆ ಭಾರಿ ಭಯೋತ್ಪಾದಕ ದಾಳಿ ನಡೆಸಲು ಯೋಜಿಸಿದ್ದಾನೆ ಎಂದು ವರದಿಯೊಂದು ಹೇಳಿದೆ.

ಆಲ್ ಖೈದಾ ಉಗ್ರ ಸಂಘಟನೆಯ ನೂತನ ಮುಖ್ಯಸ್ಥನಾಗಿ ಆಯ್ಕೆಯಾದ ತಕ್ಷಣ ಲಂಡನ್ ಮೇಲೆ ಪ್ರತಿಕಾರ ತೆಗೆದುಕೊಳ್ಳುವಂತೆ ಆದೇಶಿಸಿದ್ದಾನೆ. ಈ ಸುದ್ದಿಯನ್ನು ಆಲ್ ಖೈದಾದ ತಾಲಿಬಾನ್ ವಕ್ತಾರ ಕೂಡ ದೃಢೀಕರಿಸಿದ್ದಾನೆ.

"ನಮ್ಮ ಹೊಸ ನಾಯಕರು ಲಂಡನ್ ವಿರುದ್ಧ ಬೃಹತ್ ಯೋಜನೆ ರೂಪಿಸುವಂತೆ ಆದೇಶಿಸಿದ್ದಾರೆ. ಅಮೆರಿಕವು ಯುರೋಪ್ ದೇಶಗಳ ಬೆನ್ನೆಲುಬು. ಹೀಗಾಗಿ ಮೊದಲು ಅಮೆರಿಕವನ್ನು ಬಗ್ಗುಬಡಿಯಬೇಕಿದೆ ಎಂದು ಆದಿಲ್ ತಿಳಿಸಿದ್ದಾರೆ" ಎಂದು ಆಲ್ ಖೈದಾ ವಕ್ತಾರ ಮಾತನ್ನು ವರದಿಯೊಂದು ಉಲ್ಲೇಖಿಸಿದೆ.

ಸೈಫ್ ಆಲ್-ಆದಿಲ್ ಈಜಿಪ್ಟಿನ ವಿಶೇಷ ಸೇನಾ ಪಡೆಯ ಮಾಜಿ ಯೋಧನಾಗಿದ್ದನು. ಅಫ್ಘಾನಿಸ್ತಾನದಲ್ಲಿ ರಷ್ಯಾ ಪಡೆಗಳ ವಿರುದ್ಧ 1980ರಲ್ಲಿ ಹೋರಾಟ ಮಾಡಿದ್ದ. ಈಗ ಲಾಡೆನ್ ತೆರವಾದ ಸ್ಥಾನದಲ್ಲಿ ಕುಳಿತು ಜಾಗತಿಕವಾಗಿ ಉಗ್ರ ಕೃತ್ಯಗಳನ್ನು ನಡೆಸಲು ಯೋಜಿಸುತ್ತಿದ್ದಾನೆ.

ಆದಿಲ್ ಒಂದೊಮ್ಮೆ ಒಸಾಮಾ ಬಿನ್ ಲಾಡೆನ್ ನ ಭದ್ರತಾ ಮುಖ್ಯಸ್ಥನಾಗಿಯೂ ಕಾರ್ಯನಿರ್ವಹಿಸಿದ್ದಾನೆ. 2001ರಿಂದ ಎಫ್ ಬಿಐಗೆ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿರುವ ಈತನ ತಲೆಗೆ 30 ಲಕ್ಷ ಪೌಂಡ್ ಬೆಲೆ ಕಟ್ಟಲಾಗಿದೆ.

English summary
A report said Al Qaeda's new leader, 59-year-old Saif Al-Adel, is planning a major terrorist attack on London to avenge the death of his former boss Osama bin Laden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X