ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿಯಲ್ಲಿ ನಕ್ಸಲರಿಗೆ ಜನಬೆಂಬಲವಿಲ್ಲ: ಡಿಜಿಪಿ

|
Google Oneindia Kannada News

Naxal activity in Karnataka
ಉಡುಪಿ, ಮೇ 22: ನಕ್ಸಲರಿಗೆ ಜನಬೆಂಬಲ ದೊರಕದಿರುವುದರಿಂದ ಉಡುಪಿ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಕಡಿಮೆಯಾಗುತ್ತಿದೆ ಎಂದು ಪಶ್ಚಿಮ ವಲಯ ಐಜಿಪಿ ಆಲೋಕ್ ಮೋಹನ್ ತಿಳಿಸಿದ್ದಾರೆ. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ನಕ್ಸಲ್ ಬಾಧಿತ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರಕಾರವು ಹೆಚ್ಚಿನ ಒತ್ತು ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ.

ರಾಜ್ಯದ ಪೋಲಿಸರಿಂದ ನಕ್ಸಲರ ಶೋಧ ಕಾರ್ಯಾಚರಣೆ ಹೆಚ್ಚಿದ್ದು ನಕ್ಸಲರ ದಮನಕ್ಕೆ ಸಹಕಾರಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಜನಸಂಪರ್ಕ ಸಭೆಗಳನ್ನು ನಡೆಸಲಾಗುತ್ತಿದೆ. ರಸ್ತೆ, ಕುಡಿಯುವ ನೀರು, ಶಿಕ್ಷಣ, ವಿದ್ಯುತ್ ಇತ್ಯಾದಿ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ಹೀಗಾಗಿ ನಕ್ಸಲರಿಗೆ ಜನಬೆಂಬಲ ದೊರಕುತ್ತಿಲ್ಲವೆಂದು ಅಲೋಕ್ ಮೋಹನ್ ತಿಳಿಸಿದ್ದಾರೆ.

ಅವರು ಉಡುಪಿ ಎಸ್ಪಿ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜ್ಯದ ನಕ್ಸಲ್ ಸಮಸ್ಯೆ ಕುರಿತು ವಿವರ ನೀಡುತ್ತಿದ್ದರು. ಮೂಲಸೌಕರ್ಯ ಅಭಿವೃದ್ಧಿ ಒಂದಿಷ್ಟು ನಿಧಾನ ಪ್ರಕ್ರಿಯೆ ಆಗಿದ್ದು ಸಂಪೂರ್ಣ ಅನುಷ್ಠಾನಕ್ಕೆ ಒಂದಿಷ್ಟು ಸಮಯ ಹಿಡಿಯಬಹುದೆಂದು ಅವರು ಅಭಿಪ್ರಾಯಪಟ್ಟರು. ಎಸ್ಪಿ ಡಾ| ವೈ.ಎಸ್‌. ರವಿಕುಮಾರ್‌, ಡಿವೈಎಸ್‌ಪಿ ಜಯಂತ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

English summary
Naxal activities in Udupi district were under control. Police were proactive in the naxal-affected areas of the district. The naxalites were not getting people's support Inspector-General of Police (Western Range) Alok Mohan said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X