ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 24ರಂದು ರಂಗಶಂಕರದಲ್ಲಿ ಮಾಯಾಮೃಗ ನಾಟಕ

By Prasad
|
Google Oneindia Kannada News

Mayamruga Kannada play
ದೆವ್ವ, ಭೂತಗಳೆಂಬ ಅತಿ ಸಹಜವಾದ ಪರಿಕಲ್ಪನೆಯ ಬಗ್ಗೆ ಅನೇಕ ಮಾತುಕತೆಗಳು ನಮ್ಮ ಬದುಕಿನಲ್ಲಿ ನಡೆಯುತ್ತಲೇ ಇರುತ್ತವೆ. 'ಮಾಯಾಮೃಗ' ನಾಟಕದಲ್ಲಿ ಬೆಂಗಳೂರಿನ ಹವ್ಯಾಸಿ ಕಲಾತಂಡ ವಟೀಕುಟೀರ ದೆವ್ವ-ಭೂತಗಳ ಈ ಕಲ್ಪನೆಯನ್ನು ಪ್ರಶ್ನಿಸುತ್ತಲೇ, ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುತ್ತದೆ. ಅಲ್ಲಿ ಕಲ್ಪನೆಯಿದೆ, ಹಾಸ್ಯವಿದೆ, ಜೀವನದ ಸತ್ಯ ಅನಾವರಣವಾಗುತ್ತದೆ.

ಪೂಚಂತೆ (ಕೆ. ಪಿ. ಪೂರ್ಣಚಂದ್ರ ತೇಜಸ್ವಿ)ಯವರ ಸಣ್ಣಕಥೆ ಆಧಾರಿತ ನಾಟಕ 'ಮಾಯಾಮೃಗ. ಮೆದುಳಿನ ಮೂಲೆಯಲ್ಲಿ ಕೂತಿರುವ ದೆವ್ವ-ಭೂತಗಳ ಕಲ್ಪನೆ ಮಾನವನ ಮನಸ್ಸಿನಲ್ಲಿ ಹೇಗೆ ಕೆಲಸ ಮೂಡುತ್ತದೆ ಎಂಬುದೇ ನಾಟಕದ ಸತ್ವ. ಈ ನಾಟಕ ಜೆಪಿ ನಗರದ ರಂಗಶಂಕರದಲ್ಲಿ ಮೇ 24, ಮಂಗಳವಾರ ಸಂಜೆ 7.30ಕ್ಕೆ ಪ್ರದರ್ಶಿತವಾಗುತ್ತಿದೆ. ಟಿಕೆಟ್ ಬೆಲೆ ರು. 100.

'ಮಾಯಾಮೃಗ' ಹೆಸರೇ ಸೂಚಿಸುವಂತೆ ಒಂದು ಮಾಯೆಯ ಪ್ರಾಣಿ, ತೇಜಸ್ವಿ ಮತ್ತು ಅವರ ಸ್ನೇಹಿತರು ಒಂದು ಸ್ಮಶಾನದಲ್ಲಿ ದೆವ್ವವನ್ನು ಹುಡುಕಿಕೊಂಡು ಹೊರಟ ಕಥೆ ಇದಾಗಿದೆ. ದಾರಿಯಲ್ಲಿ ಅವರು ಕಂಡ ಕಜ್ಜಿ ಹಿಡಿದ ನಾಯಿಮರಿ ಅವರಿಗೆ ಒಂದು ದೆವ್ವವಾಗಿ ಕಂಡಂತಾಗುತ್ತದೆ. ಇಂಥಹ ಹಲವಾರು ಜೀವನದ ಘಟನೆಗಳ ಸರಮಾಲೆಯೇ ಹಾಸ್ಯಭರಿತ ನಾಟಕವಾಗಿ ಪ್ರದರ್ಶಿತವಾಗುತ್ತಿದೆ.

ಈ ನಾಟಕದ ಮೂಲಕ ಪ್ರೇಕ್ಷಕರಿಗೆ ಯಾವುದೇ ತತ್ವ ಸಿದ್ಧಾಂತಗಳನ್ನು ಹುಟ್ಟುಹಾಕುವುದಾಗಲೀ ಅಥವಾ ತೋರಿಸುವುದಾಗಲೀ ನಮ್ಮ ಉದ್ಧೇಶವಲ್ಲ ಎಂದು ನಿರ್ದೇಶಕ ಪೃಥ್ವಿ ಆರಾಧ್ಯ ತಿಳಿಸಿದ್ದಾರೆ. ತೇಜಸ್ವಿಯವರ ಜೀವನದ ಘಟನೆಗಳನ್ನು ರಂಗದಮೇಲೆ ತೋರಿಸುವುದಷ್ಟೇ ನಮ್ಮ ಕೆಲಸ. ನಾಟಕದಲ್ಲಿ ರಂಗವಿನ್ಯಾಸ, ಬೆಳಕು ಮತ್ತು ಸಂಗೀತದ ಮೂಲಕ ಪ್ರೇಕ್ಷಕರಿಗೆ ವಿಚಿತ್ರ, ವಿಶಿಷ್ಟ ಅನುಭವಗಳು ಸಿಗುವಂತೆ ಮಾಡುವ ಪ್ರಯತ್ನ ಮಾಡಿದ್ದೇವೆ ಎನ್ನುತ್ತಾರೆ ಆರಾಧ್ಯ.

ಪಾತ್ರಧಾರಿಗಳಾಗಿ ಪ್ರದೀಪ್ ಬಿ.ವಿ., ಸುಜಯ್ ಶಾಸ್ತ್ರಿ, ಪ್ರವೀಣ್ ಬಿ.ವಿ., ವಿನಯ್ ಶಾಸ್ತ್ರಿ, ಭೂಪೇಶ ಬೆಳಗಲಿ, ಹರಿಪ್ರಸಾದ್, ಸತೀಶ್ ನಟಿಸಿದ್ದಾರೆ. ಬೆಳಕು ಮುಸ್ತಾಫ, ಸಂಗೀತ ರಾಜಗುರು ಹೊಸಕೋಟೆ, ವಿನ್ಯಾಸ ಸಂಘಟನೆ ಕಿರಣ್ ವಟಿ ಮತ್ತು ನಿರ್ದೇಶನ ಪೃಥ್ವಿ ಆರಾಧ್ಯ. ಹಾಸ್ಯಭರಿತವಾದ ಸಂಭಾಷಣೆಯೊಂದಿಗೆ ಮಾನವನ ಹುಚ್ಚು ಕಲ್ಪನೆಯ ವ್ಯಂಗ್ಯಗಳು ತೇಜಸ್ವಿಯವರ ಈ ಸಣ್ಣಕಥೆಯಲ್ಲಿ ಇದೆ.

ಟಿಕೆಟ್ ಬೆಲೆ 100 ರು. ಟಿಕೆಟ್‌ಗಳಿಗಾಗಿ 98806 95659 ಸಂಪರ್ಕಿಸಬಹುದಾಗಿದೆ.

English summary
Mayamruga, a kannada play based on short story of Kannada short story writer, novelist Poornachandra Tejaswi, will be played by theatre group Vatikutira troupe at Rangashankara, JP Nagar, Bangalore on May 24, Tuesday. Drama is directed by Prithvi Aradhya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X