ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 30ಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ?

By Rajendra
|
Google Oneindia Kannada News

V S Acharya
ಬೆಂಗಳೂರು, ಮೇ.21: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶಗಳನ್ನು ಮೇ.30ರಂದು ಪ್ರಕಟಿಸಲು ನಿರ್ಧರಿಸಲಾಗಿದೆ. ಸೀಟು ಹಂಚಿಕೆ ಹಾಗೂ ಖಾಸಗಿ ಕಾಲೇಜುಗಳ ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಶೀಘ್ರದಲ್ಲೆ ವಿವರಗಳನ್ನು ಪ್ರಕಟಿಸುವುದಾಗಿ ಉನ್ನತ ಶಿಕ್ಷಣ ಸಚಿವ ವಿ ಎಸ್ ಆಚಾರ್ಯ ತಿಳಿಸಿದ್ದಾರೆ.

ಖಾಸಗಿ ಕಾಲೇಜುಗಳಿಂದ ಶುಲ್ಕ ಏರಿಕೆಗೆ ಬೇಡಿಕೆ ಬಂದಿದೆ. ಶೇ.60ರಷ್ಟು ಶುಲ್ಕ ಏರಿಕೆ ಮಾಡಲು ಒತ್ತಡ ಹೇರುತ್ತಿದ್ದಾರೆ. ಆದರೆ ಸರ್ಕಾರ ಸಂಧಾನದ ಮೂಲಕ ಶುಲ್ಕವನ್ನು ನಿಗದಿಪಡಿಸಲಿದೆ. ಸಿಇಟಿ ಫಲಿತಾಂಶ ಪ್ರಕಟವಾಗುವುದಕ್ಕೂ ಮುನ್ನ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕವನ್ನು ನಿಗದಿಪಡಿಸಲಾಗುತ್ತದೆ ಎಂದು ಸಚಿವರು ಹೇಳಿದರು.

ಪ್ರಸ್ತುತ ಸರ್ಕಾರಿ ಕೋಟಾದಡಿ ಖಾಸಗಿ ಕಾಲೇಜಿಗಳ ಗೆ ವಾರ್ಷಿಕ ರು.30,000 ಶುಲ್ಕ ನಿಗದಿಪಡಿಸಲಾಗಿದೆ. ಈಗಿರುವ ಶುಲ್ಕವನ್ನು ರು.2,500ರಕ್ಕೆ ಏರಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಕಳೆದ ವರ್ಷ ಖಾಸಗಿ ಕಾಲೇಜುಗಳು ಒತ್ತಡ ಹೇರಿದ ಕಾರಣ ಶುಲ್ಕವನ್ನು ರು.5,000ಕ್ಕೆ ಏರಿಸಲಾಗಿತ್ತು ಎಂದು ಸಚಿವರು ವಿವರ ನೀಡಿದರು.

ಕೌನ್ಸೆಲಿಂಗ್ : ಜೂನ್ 9ರಿಂದ ಸಿಇಟಿ ಕೌನ್ಸೆಲಿಂಗ್ ಪ್ರಾರಂಭವಾಗಲಿದೆ. ಬೆಂಗಳೂರು, ಹುಬ್ಬಳ್ಳಿ, ಗುಲಬರ್ಗಾ, ಬೆಳಗಾವಿ, ಚಿತ್ರದುರ್ಗ, ಶಿವಮೊಗ್ಗ ಮತ್ತು ಮಂಗಳೂರಿನಲ್ಲಿ ಕೌನ್ಸೆಲಿಂಗ್ ನಡೆಯಲಿದೆ. ಸಿಇಟಿ ಕುರಿತಂತೆ ಹೆಚ್ಚಿನ ವಿವರಗಳಿಗಾಗಿ ನೋಡಿರಿ : ಕರ್ನಾಟಕ.ಕಾಂ ವೆಬ್ ಸೈಟ್. (ದಟ್ಸ್‌ಕನ್ನಡ ವಾರ್ತೆ)

English summary
The tentative date for announcement of the Common Entrance Test results is May 30. Talks will be held over the weekend to finalise this and the details over the seat sharing and tuition fee in private engineering colleges, Higher Education Minister V.S. Acharya told The Hindu on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X