ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಹಾರ್ ಜೈಲಿನಲ್ಲಿ ಕನ್ನಿಮೋಳಿ ಮೊದಲ ರಾತ್ರಿ

By Prasad
|
Google Oneindia Kannada News

Kanimozhi
ನವದೆಹಲಿ, ಮೇ. 21 : ಸ್ವತಂತ್ರ ಹಕ್ಕಿಯಾಗಿ ಸ್ವೇಚ್ಛೆಯಾಗಿ ಬದುಕು ಸಾಗಿಸಿದ್ದ ಡಿಎಂಕೆ ಪಕ್ಷ ಸಂಸದೆ ಕನ್ನಿಮೋಳಿ, 2ಜಿ ತರಂಗಗುಚ್ಛ ಹಗರಣದಲ್ಲಿ 214 ಕೋಟಿ ರು. ಲಂಚ ತಿಂದಿರುವ ಆರೋಪ ಹೊತ್ತು, ತಿಹಾರ್ ಜೈಲಿನ 8ನೇ ವಾರ್ಡ್ ನಲ್ಲಿರುವ 6ನೇ ಬಂದಿಖಾನೆಯಲ್ಲಿ ಮೊದಲ ರಾತ್ರಿ ಕಳೆದಿದ್ದಾರೆ. [ವಿಡಿಯೋ ನೋಡಿ]

ಮಹಿಳಾ ವಾರ್ಡ್ ನಲ್ಲಿರುವ ಬಂದಿಖಾನೆಯಲ್ಲಿ ಯಾವುದೇ ಎಸಿ, ಫ್ಯಾನು, ಏರ್ ಕೂಲರ್ ಯಾವುದೂ ಇಲ್ಲ. ಕಿಟಕಿಯಿಂದ ತೂರಿ ಬರುವ ಸ್ವಚ್ಛಂದ ಗಾಳಿಯನ್ನು ಹೀರುವ ಸೊಗಸಾದ ಅನುಭವ. ಮನೆಯಿಂದ ತರಿಸಿಕೊಂಡಿದ್ದ ಬಿಸಿಬಿಸಿ ಊಟ ಮಾಡಿ ರಾತ್ರಿ 11.30ಕ್ಕೆ ನಿದ್ರೆಗೆ ಜಾರಿದರು. [ಸಕಲಕಲಾವಲ್ಲಭೆ ಕನ್ನಿಮೋಳಿ ವ್ಯಕ್ತಿಚಿತ್ರ]

ಶನಿವಾರ ಬೆಳಿಗ್ಗೆ ಏಳುತ್ತಿದ್ದಂತೆ, ಹೊಸ ಬದುಕು ಆರಂಭ. ಎಲ್ಲ ಕೈದಿಗಳಂತೆ 5.30ಕ್ಕೆ ಎಬ್ಬಿಸಲಾಯಿತು. ಪ್ರಾತಃರ್ವಿಧಿಗಳಾದ ನಂತರ ಮನೆಯ ತಿಂಡಿಯ ಬದಲು ಎರಡು ಬ್ರೆಡ್ ಸ್ಲೈಸ್ ಮತ್ತು ಅದರ ಮೇಲೆ ಆಲೂಗಡ್ಡೆ ಪಲ್ಯ. ವೈಭವದ ಬದುಕಿನಿಂದ ದೂರವಾಗಿರುವ ಹೊಸ ಬದುಕಿಗೆ ಕಾಲಿಟ್ಟಿರುವ ಕನ್ನಿಮಳಿ 9.30ಕ್ಕೆ ನಗುಮೊಗದಿಂದಲೇ ಕೋರ್ಟಿಗೆ ಹಾಜರಾದರು.

ಅವರಿರುವ ಪಕ್ಕದ ಸೆಲ್ ನಲ್ಲಿ ಪಾಕಿಸ್ತಾನದ ಐಎಸ್ಐ ಪರ ಬೇಹಾಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದಿರುವ ಠಕ್ಕಿ ಮಾಧುರಿ ಗುಪ್ತಾ ಮತ್ತು ಕೊಲೆಯಲ್ಲಿ ಬಂಧಿತೆಯಾಗಿರುವ ಶಾರದಾ ಜೈನ್ ಎಂಬ ಹೈಪ್ರೊಫೈಲ್ ಮಹಿಳೆಯರು ಕಂಬಿ ಎಣಿಸುತ್ತಿದ್ದಾರೆ.

English summary
DMK MP Kanimozhi, jailed for accepting kickback of Rs 214 cr from A Raja in 2G spectrum scam, spent her first night at Tihar jail. Though the first night she had home cooked food, next day morning 2 slice bread with aloo sabji welcomed her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X