ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಹೊಸ ಕ್ಯಾಂಪಸ್‌ಗೆ ಚೀನಾದಲ್ಲಿ ಶಂಕುಸ್ಥಾಪನೆ

By Rajendra
|
Google Oneindia Kannada News

Infosys to start new campus in Shanghai
ನವದೆಹಲಿ, ಮೇ.21: ಭಾರತದ ಎರಡನೇ ಅತಿದೊಡ್ಡ ಸಾಫ್ಟ್‌ವೇರ್ ಕಂಪನಿ ಇನ್ಫೋಸಿಸ್ ಚೀನಾದಲ್ಲಿ ಹೊಸ ಕ್ಯಾಂಪಸನ್ನು ಆರಂಭಿಸಲು ನಿರ್ಧರಿಸಿದೆ. ಇದಕ್ಕಾಗಿ ಶಾಂಘೈನಲ್ಲಿ 125 ರಿಂದ 150 ಮಿಲಿಯನ್ ಅಮೆರಿಕನ್ ಡಾಲರ್ ಖರ್ಚು ಮಾಡುತ್ತಿರುವುದಾಗಿ ಕಂಪನಿ ಪ್ರಕಟಿಸಿದೆ.

ಚೀನಾದಲ್ಲಿ ಅತಿಹೆಚ್ಚು ಮೊತ್ತದ ಬಂಡವಾಳ ಹೂಡಿತ್ತಿರುವ ಸಂಸ್ಥೆ ಇನ್ಫೋಸಿಸ್ ಎಂದು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ. ತಮ್ಮ ನೂತನ ಕಂಪನಿಗೆ ಶನಿವಾರ ಶಂಕುಸ್ಥಾಪನೆ ಮಾಡಲಾಯಿತು. ಒಟ್ಟು 15 ಎಕರೆ ವಿಸ್ತೀರ್ಣದಲ್ಲಿ ಮುಂಬರುವ ಮೂರು ವರ್ಷಗಳ ಅವಧಿಯಲ್ಲಿ ಕ್ಯಾಂಪಸ್ ನಿರ್ಮಾಣವನ್ನು ಪೂರ್ಣಗೊಳಿಸಲಾಗುತ್ತದೆ.

ಈ ಕ್ಯಾಂಪಸ್‌ನಲ್ಲಿ 8 ಸಾವಿರ ಮಂದಿಗೆ ಉದ್ಯೋಗವಕಾಶ ಲಭ್ಯವಾಗಲಿದೆ. ಸಾಫ್ಟ್‌ವೇ ಡೆವಲಪ್‌ಮೆಂಟ್, ಲ್ಯಾಬ್, ಡೇಟಾ ಕೇಂದ್ರಗಳು, ಫುಡ್ ಕೋರ್ಟ್, 1500 ಮಂದಿ ಸಾಮರ್ಥ್ಯದ ಆಡಿಟೋರಿಯಂ, ಜಿಮ್ ಮತ್ತಿತರ ಸೌಲಭ್ಯಗಳನ್ನು ಕ್ಯಾಂಪಸ್‍ನಲ್ಲಿ ನಿರ್ಮಿಸಲಾಗುತ್ತದೆ. (ಏಜೆನ್ಸೀಸ್)

English summary
The leading Indian IT major, Infosys Technologies, plans to make a huge investment in China. The company will make investments worth $125-150 million in its new campus at Zizhu science and technology park in Shanghai, China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X