ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿನ್ನಿಸ್ ದಾಖಲೆ ಮಾಡಿದ ದೀರ್ಘಾಯುಷಿ ಅಜ್ಜಿ

|
Google Oneindia Kannada News

World's oldest person
ಮೊನ್ನೆ ಈ ಅಜ್ಜಿಯನ್ನು ಗಿನ್ನಿಸ್ ದಾಖಲೆ ಪುಸ್ತಕದೊಳಗೆ ಸೇರಿಸಲಾಗಿದೆ. ಈ ಅಜ್ಜಿ ಅಂತಹ ಯಾವ ಸಾಧನೆ, ದಾಖಲೆ ಮಾಡಿದ್ದಾಳೆ ಅಂದುಕೊಂಡಿರ? ಅಂತಿಂಥ ಸಾಧನೆಯಲ್ಲ. ವಿಶ್ವದಲ್ಲಿಯೇ ಅತ್ಯಧಿಕ ವರ್ಷ ಬದುಕಿದ ವ್ಯಕ್ತಿ ಇವಳು. ಇಲ್ಲಿವರೆಗೆ ಯಾರೂ ಇಷ್ಟು ವರ್ಷ ಬದುಕಿಲ್ಲ. ಈಗ ಈಕೆಯ ವಯಸ್ಸು 114 ವರ್ಷ 313 ದಿನ. ಇದಕ್ಕೂ ಮೊದಲು ಈ ದಾಖಲೆ ಮಾಡಿದ್ದ ಅಮೆರಿಕದ ವ್ಯಕ್ತಿಗಿಂತ ಇವಳು ನಲುವತ್ತು ದಿನಕ್ಕೆ ದೊಡ್ಡವಳು.

ಮಾರಿಯಾ ಗೋಮ್ಸ್ ವಾಲೆಂಟಿಮ್ ಹುಟ್ಟಿದ್ದು 1886ರಲ್ಲಿ. ಇದಕ್ಕೂ ಒಂದು ವರ್ಷ ಮೊದಲು ಸ್ವಾತಂತ್ರ್ಯ ಹೋರಾಟಗಾರ ಮತ್ತು ನಮ್ಮ ದೇಶದ ಪ್ರಧಾನಮಂತ್ರಿಯಾಗಿದ್ದ ಮೋರಾರ್ಜಿ ದೇಸಾಯಿ ಜನಿಸಿದ್ದರು. ಈ ಅಜ್ಜಿ ರಾಣಿ ವಿಕ್ಟೋರಿಯಾ ಹುಟ್ಟಿದ ರಾಜ್ಯದಲ್ಲಿಯೇ ಹುಟ್ಟಿದಂತೆ. ಈಕೆ ಹುಟ್ಟಿದ ನಂತರ ಫೋರ್ಡ್ ಮೋಟರ್ ಕಂಪನಿ ಆರಂಭವಾಗಿದೆ. ಹೀಗಾಗಿ ಈ ಅಜ್ಜಿ ಫೋರ್ಡ್ ಗಿಂತಲೂ ಓಲ್ಡ್.

ಅಜ್ಜಿಯ ದೀರ್ಘಾಯುಷ್ಯದ ಗುಟ್ಟು ತಿಳಿದುಕೊಳ್ಳೋಣ. ದೇವತೆಗಳ ತರಹ ಅಮೃತಪಾನ ಮಾಡುವುದಿಲ್ಲ. ಆದ್ರೂ ಈಕೆಗೆ ವೈನ್ ಅಂದ್ರೆ ಇಷ್ಟವಂತೆ. ಉಪಹಾರದಲ್ಲಿ ಒಂದು ಕಪ್ ಚಹಾ, ಒಂದು ಬನ್, ಒಂದಿಷ್ಟು ಹಣ್ಣು ತಿನ್ನುತ್ತಾಳಂತೆ. ಜೊತೆಗೆ ಬಿಸಿ ಸಾಸ್ ನೊಂದಿಗೆ ಕೋಳಿ ಪಾಸ್ಟ್ರಿಸ್(ನೋಡಲು ಸಮೋಸ ತರಹ ಇರುತ್ತೆ!) ಇಷ್ಟವಂತೆ. ಈಕೆಯ ಡಯೆಟ್ ಆಹಾರ ಸೇವನೆ ಕೂಡ ದೀರ್ಘಾಯುಷ್ಯದ ಗುಟ್ಟು ಎಂದು ಅಜ್ಜಿಯ ಸಂಬಂಧಿಕರು ಹೇಳುತ್ತಾರೆ.

English summary
Guinness World Records officially confirmed on Wednesday that Brazilian Maria Gomes Valentim, aged 114 years and 313 days as the oldest living person. Relatives of Valentim said her secret of long life is looking after herself before others and a good diet including a bread roll, a cup of coffee and fruit for breakfast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X