ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗವರ್ನರ್ ವಿರುದ್ಧ ಬಿಜೆಪಿ ವಾರ್: ಮೇ 25ಕ್ಕೆ ಡೆಡ್ ಲೈನ್

By Srinath
|
Google Oneindia Kannada News

Yeddyurappa, Eshvarappa
ಬೆಂಗಳೂರು, ಮೇ 20: ಅಧಿವೇಶನಕ್ಕೆ ಅನುಮತಿ ನೀಡದಿರುವ ರಾಜ್ಯಪಾಲರ ಕ್ರಮವನ್ನು ವಿರೋಧಿಸಿ ರಾಜ್ಯದ್ಯಾಂತ ಎರಡು ಹಂತದ ಜನಾಂದೋಲನ ನಡೆಸಲು ರಾಜ್ಯ ಬಿಜೆಪಿ ನಿರ್ಧರಿಸಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ಅಧ್ಯಕ್ಷ ಈಶ್ವರಪ್ಪ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳು ಈ ಜನಾಂದೋಲನ ನಡೆಸಲಿವೆ. ಈ ಮಧ್ಯೆ, ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆ ಬಳಿಯಿಂದ ಬಿಜೆಪಿ ಇಂದು ಪ್ರತಿಭಟನಾ ಮೆರವಣಿಗೆ ನಡೆಸಿದೆ.

ಈ ಆಂದೋಲನ ಕೇಂದ್ರ ಸರಕಾರದ ವಿರುದ್ಧವೂ ಆಗಿದೆ. ಮೇ 21ರಂದು ರಾಯಚೂರಿನಲ್ಲಿ ಯಡಿಯೂರಪ್ಪ ತಂಡ ಮತ್ತು ಮೈಸೂರಿನಲ್ಲಿ ಈಶ್ವರಪ್ಪ ತಂಡ ಬೀದಿ ಹೋರಾಟ ನಡೆಸಲು ಎಂದು ಪಕ್ಷದ ನೂತನ ಕಚೇರಿಯಲ್ಲಿ ಶುಕ್ರವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

ಮೇ 22ರಂದು ಮಂಗಳೂರಿನಲ್ಲಿ, 23ರಂದು ತುಮಕೂರು, 24ರಂದು ಕೋಲಾರ ಹಾಗೂ 25ರಂದು ಬಾಗಲಕೋಟದಲ್ಲಿ ಯಡಿಯೂರಪ್ಪ ನೇತೃತ್ವದ ತಂಡ ಜನಾಂದೋಲನ ನಡೆಸಲಿದೆ. ಇನ್ನು ಈಶ್ವರಪ್ಪ ನೇತೃತ್ವದ ತಂಡ ಮೇ 21ರಂದು ಕೊಪ್ಪಳದಲ್ಲಿ, 24ರಂದು ಗುಲ್ಬರ್ಗ, 25 ಬೀದರಿನಲ್ಲಿ ಪ್ರತಿಭಟನೆ ನಡೆಸಲಿದೆ. ಬೀದಿಬೀದಿಗಳಲ್ಲಿ ಜನರನ್ನು ಭೇಟಿ ಮಾಡಿ, ಅವರಿಗೆ ಯಡಿಯೂರಪ್ಪ ನೇತೃತ್ವದ ಸರಕಾರದ ಸಾಧನೆಗಳ ಬಗ್ಗೆ ತಿಳಿಸಲು ಪಕ್ಷ ತೀರ್ಮಾನಿಸಿದೆ.

English summary
Karnataka BJP which is unhappy with central governments delay tactics on Governor H R Bharadwaj's report has set a new deadline for both Center and Governor. The Party on Friday (May 20) spoke about mass movement if not permitted to conduct the assembly session in June.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X