ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 21 ಕಂಠೀರವ ಕ್ರೀಡಾಂಗಣಕ್ಕೆ ಮಕ್ಕಳೊಂದಿಗೆ ಬನ್ನಿ

|
Google Oneindia Kannada News

World Athletics Day
ಬೆಂಗಳೂರು, ಮೇ 20: ನಿಮ್ಮ ಮಕ್ಕಳು ದೇಶದ ನಾಳೆಯ ಕ್ರೀಡಾಳುಗಳಾಗಿರಬಹುದು. ಅದಕ್ಕಾಗಿ ಶನಿವಾರ (ಮೇ 21) ನೀವು ನಿಮ್ಮ ಮಕ್ಕಳೊಂದಿಗೆ ಶ್ರೀ ಕಂಠೀರವ ಕ್ರೀಡಾಂಗಣಕ್ಕೆ ಬರಬೇಕು. ಇಲ್ಲಿ ಓಟ, ಎತ್ತರ ಜಿಗಿತ, ಉದ್ದ ಜಿಗಿತ, ಶಾಟ್ ಪುಟ್ ಮತ್ತು ಡಿಸ್ಕಸ್ ಥ್ರೋ ಮೂಲಕ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದು.

ವಿವಿಧ ವಯೋಮಿತಿಗೆ ಅನುಗುಣವಾಗಿ 50ರಿಂದ ಒಂದುವರೆ ಸಾವಿರ ಮೀಟರ್ ವರೆಗಿನ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಸುಮಾರ 800 ಸ್ಪರ್ಧಾಳುಗಳು ಭಾಗವಹಿಸಿವ ನಿರೀಕ್ಷೆ ಸಂಘಟಕರದ್ದು.

ವಿಶ್ವ ಅಥ್ಲೆಟಿಕ್ಸ್ ದಿನವನ್ನು ನಾಳೆ ಬೆಂಗಳೂರು ಆಚರಿಸಿಕೊಳ್ಳುತ್ತಿದೆ. ಈ ನಿಮಿತ್ತ ಬೆಳಗ್ಗೆ ಒಂಬತ್ತು ಗಂಟೆಯಿಂದ ಸ್ಪರ್ಧೆಗಳು ಆರಂಭವಾಗಲಿವೆ. ಭಾರತದ ಅಥ್ಲೆಟಿಕ್ಸ್ ಒಕ್ಕೂಟದ ಮಾರ್ಗದರ್ಶನ ಮತ್ತು ಕರ್ನಾಟಕ ಅಥ್ಲೆಟಿಕ್ಸ್ ಒಕ್ಕೂಟದ ಸಹಯೋಗದೊಂದಿಗೆ ಫ್ಯೂಷನ್ ಅಥ್ಲೆಟಿಕಾ ಇದನ್ನು ಆಯೋಜಿಸಿದೆ.

ಯಾರೆಲ್ಲ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸುತ್ತಾರೋ ಅವರು ತಲಾ 50 ರೂಪಾಯಿ ಪಾವತಿಸಬೇಕು. ಮಕ್ಕಳ ಆಟವನ್ನು ನೋಡಲು ನೀವು ಕುಟುಂಬ ಸಮೇತ ಬರಬಹುದು. ಯಾಕೆಂದರೆ ಪ್ರೇಕ್ಷಕರಿಗೆ ಯಾವುದೇ ಶುಲ್ಕ ವಿಧಿಸಲಾಗಿಲ್ಲ.

English summary
Bangalore celebrating the World Athletics Day. Children between the ages of 9 and 17 have the opportunity to participate in the athletics meet at Kanteerava Stadium on Saturday, May 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X