ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಯಡಿಯೂರಪ್ಪ-ಭಾರದ್ವಾಜ್ ಮುಖಾಮುಖಿ?

By Srinath
|
Google Oneindia Kannada News

Yeddyurappa, Bhardwaj
ಬೆಂಗಳೂರು, ಮೇ 18: ಬಂದ ದಾರಿಗೆ ಸುಂಕವಿಲ್ಲದಂತೆ ಯಡಿಯೂರಪ್ಪ ದಂಡು ಬೆಂಗಳೂರಿಗೆ ವಾಪಸಾಗಿದೆ. ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ ಇಳಿದವರೇ ಇಂದು ಸಂಜೆ ನಾಲ್ಕಕ್ಕೆ ನಾವೆಲ್ಲ ಗುಂಪು ಕೂಡಿಕೊಂಡು ರಾಜಭವನಕ್ಕೆ ಹೋಗುತ್ತೇವೆ. ಆಡಳಿತಾರೂಢ ಬಿಜೆಪಿಗೆ ಅಗತ್ಯ ಬೆಂಬಲ ಇರುವುದನ್ನು ರಾಜ್ಯದ ಪ್ರಥಮ ಪ್ರಜೆಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಯಡಿಯೂರಪ್ಪನವರು ಪ್ರಕಟಿಸಿದ್ದಾರೆ.

ಅಲ್ಲಿಗೆ, ಕಳೆದೊಂದು ವಾರದಿಂದ ವಿಮುಖರಾಗಿರುವ ರಾಜ್ಯದ ಮುಖ್ಯಮಂತ್ರಿ ಮತ್ತು ರಾಜ್ಯಪಾಲರು ಮುಖಾಮುಖಿಯಾಗುವುದು ನಿಕ್ಕಿಯಾಗಿದೆ. ಆದರೆ ರಾಜ್ಯಪಾಲರು ಅಷ್ಟೂ ಬಿಜೆಪಿ ಶಾಸಕರನ್ನು ರಾಜಭವನದ ಅಂಗಳದೊಳಕ್ಕೆ ಬಿಟ್ಟುಕೊಳ್ಳುತ್ತಾರಾ?

'ಮೂರ್ನಾಲ್ಕು ಸಚಿವರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡುವೆ. ಸಾಂವಿಧಾನಿಕವಾಗಿ ಆಡಳಿತ ನಡೆಸಲು ಅನುವು ಮಾಡಿಕೊಡಿ ಎಂದು ಕೇಳುವೆ. ಮುಂದಿನ ತಿಂಗಳು 2ರಿಂದ ಅಧಿವೇಶನ ನಡೆಯುವುದಕ್ಕೆ ಸಮ್ಮತಿಸಿ ಎಂದೂ ಬೇಡುವೆ' ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಈ ಮಧ್ಯೆ, ನಿನ್ನೆ ಇಡೀ ದಿನ ಬಿಸಿಲಲ್ಲಿ ರಸ್ತೆ ತಡೆ ನಡೆಸಿದ ಕಾಂಗ್ರೆಸ್ ಮಂದಿ ದಣಿವಾರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ಸಹ 'ನಿಮಗಿದೇ ಸಾಕು' ಎಂದಿದೆಯಂತೆ. ಇನ್ನು, ದಳಪತಿಗಳು ದೊಡ್ಡೆಜಮಾನ್ರ 79ನೇ ಹುಟ್ಟುಹಬ್ಬ ಸಂಭ್ರಮದ ನೆಪ ಮಾಡಿಕೊಂಡು ರಾಜಕೀಯದಿಂದ ದೂರವಾಗಿದ್ದಾರೆ. ಆದರೆ ದೆಹಲಿ ಕಾಂಗ್ರೆಸ್ ಮಂದಿ ಸೊಪ್ಪು ಹಾಕದಿರುವುದೇ ಕುಮಾರಸ್ವಾಮಿ ಅಂಡ್ ಗ್ಯಾಂಗ್ ತಟಸ್ಥವಾಗಿರುವುದಕ್ಕೆ ಕಾರಣ ಎಂದು ಹೇಳಲಾಗಿದೆ. ಒಟ್ಟಿನಲ್ಲಿ, ಇಂದು ಸಂಜೆ ನಡೆಯುವ ಮತ್ತೊಂದು ಸುತ್ತಿನ ರಾಜಕೀಯ ಪ್ರಹಸನಕ್ಕೆ ಸಾಕ್ಷಿಯಾಗಲು ಕರ್ನಾಟಕ ಮಂದಿ ಅನಿವಾರ್ಯವಾಗಿ ಕಾಯುತ್ತಿದ್ದಾರೆ.

English summary
Now, it's time for BS Yeddyurappa and HR Bhardwaj, Karnataka's Chief Minister and Governor respectively, to come face to face. For the first time since after the Supreme Court struck down the disqualification of rebel BJP MLAs last week they will meet in Bangalore today at 4pm (May 18).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X