ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನ ಲೋಕಪಾಲದ ಬಗ್ಗೆ ಕೇಂದ್ರ ನಿರಾಸಕ್ತಿ: ಹೆಗ್ಡೆ ವಿಷಾದ

By Srinath
|
Google Oneindia Kannada News

Lokayukta Santosh Hegde
ಬೆಂಗಳೂರು, ಮೇ 18: ಜನ ಲೋಕಪಾಲ ಮಸೂದೆ ವಿಚಾರದಲ್ಲಿ ಕೇಂದ್ರ ಸರಕಾರ ಸ್ವಲ್ಪವೂ ಆಸಕ್ತಿ ತೋರುತ್ತಿಲ್ಲ ಎಂದು ಜನ ಲೋಕಪಾಲ ಕರಡು ಸಮಿತಿಯ ಸದಸ್ಯ ಮತ್ತು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

ೀ ಹಿಂದೆ ಕೇಂದ್ರವು ಸೂಕ್ತವಾಗಿ ಚರ್ಚಿಸದೆಯೂ ಹಲವಾರು ಮಸೂದೆಗಳನ್ನು ಅಂಗೀಕರಿಸಿದ ಉದಾಹರಣೆಗಳಿವೆ. 2008ರ ಡಿ. 23ರಂದು ಸಂಸತ್ ನಲ್ಲಿ ಕೆಲವೇ ನಿಮಿಷಗಳಲ್ಲಿ ಬರೋಬ್ಬರಿ 17 ಮಸುದೆಗಳನ್ನು ಅಂಗೀಕರಿಸಲಾಯಿತು. ಅದರಲ್ಲಿ ಒಂದು ಮಾತ್ರ ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದು. ಉಳಿದವು ಯಾವ್ಯಾವ ವಿಷಯಗಳಿಗೆ ಸಂಬಂಧಿಸಿದ್ದವೆಂಬುದು ಅಂದಿನ ಸರಕಾರಕ್ಕೆ ಅರಿವಿಲ್ಲ. ಹೀಗೆ ವಿವೇಚನಾ ರಹಿತ ನಿರ್ಣಯಗಳು ಹಲವಾರು ಇವೆ.

ಕನಿಷ್ಠ ಪಕ್ಷ, ಮಸೂದೆಯಲ್ಲೇನಿದೆ? ಅದರ ಸಾಧಕ, ಭಾದಕಗಳೇನು? ಎಂಬ ಬಗ್ಗೆ ಚರ್ಚಿಸುವ ಪ್ರಯತ್ನವನ್ನಾದರೂ ಮಾಡಬೇಕಲ್ಲವೇ? ಎಂದು ಸಂತೋಷ್ ಹೆಗ್ಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಂವಿಜೆ ಎಂಜಿನಿಯರಿಂಗ್ ಕಾಲೇಜು ಮಂಗಳವಾರ (ಮೇ 17) ಏರ್ಪಡಿಸಿದ್ದ 84ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

English summary
Lokayukta Santosh Hegde criticises Union Government's lack of interest in introducing Jan Lok Pal. Speaking at a function organised by MVJ engeneering college in Bangalore on May 17, Hegde said that without a comprehensive discussion in the parliament the union goverment has accepted many bills but not so with the present Jan Lok Pal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X