ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಾಪುರದಲ್ಲಿ ಮೇ 20ರಿಂದ ನವರಸಪುರ ಉತ್ಸವ

|
Google Oneindia Kannada News

Navaraspur Festival
ವಿಜಾಪುರ, ಮೇ 18: ಕಳೆದ ಕೆಲವು ವರ್ಷಗಳಿಂದ ನಿಂತುಹೋಗಿದ್ದ ವಿಜಾಪುರ ನವರಸಪುರ ಉತ್ಸವವು ನಾಡಿದ್ದು ಮೇ 20ರಿಂದ ವಿಜಾಪುರದಲ್ಲಿ ಆರಂಭವಾಗಲಿದೆ. ಮೂರುದಿನಗಳ ಕಾಲ ನಡೆಯುವ ಈ ಅದ್ದೂರಿ ಉತ್ಸವಕ್ಕೆ ಈಗಾಗಲೇ ರಾಜ್ಯಸರಕಾರ ಸುಮಾರು 50 ಲಕ್ಷ ರು. ಬಿಡುಗಡೆ ಮಾಡಿದೆ.

ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತಗಳ ಸಹಯೋಗದಲ್ಲಿ ನವರಸಪುರ ಉತ್ಸವ ನಡೆಸಲಾಗುತ್ತಿದೆ. ವಿಜಾಪುರದ ಇತಿಹಾಸ, ಸಂಸ್ಕೃತಿ, ಕಲೆ, ಸಾಹಿತ್ಯ, ಪರಂಪರೆಯನ್ನು ಬಿಂಬಿಸುವ ಈ ಉತ್ಸವವು ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರಲಿಲ್ಲ. ಉತ್ತರ ಕರ್ನಾಟಕದ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲು ಹಾಗೂ ಕುಸ್ತಿ ಪಂದ್ಯ ಹಮ್ಮಿಕೊಳ್ಳಲು ಪ್ರಸಕ್ತ ನವರಸಪುರ ಉತ್ಸವದಲ್ಲಿ ಯೋಜಿಸಲಾಗಿದೆ.

ಮೇ 20ರಂದು ನವರಸಪುರ ಸಂಗೀರ ಮಹಲ್ ನಲ್ಲಿ ಮತ್ತು ಮೇ 22ರಂದು ಗೋಲ್ ಗುಂಬಜ್ ವಿಜಾಪುರದಲ್ಲಿ ಈ ಉತ್ಸವ ನಡೆಯಲಿದೆ. ವಿಜಯ್ ಪ್ರಕಾಶ್, ಸಂಗೀತ ಕಟ್ಟಿ, ಗುಲಾಮ್ ಸಬೀರ್ ಮತ್ತು ಗುಲಾಮ್ ವಾರಿಸ್ ಪ್ರವೀಣ ಗೋಡ್ಕಿಂಡಿ, ಅಸ್ಲಂ ಶಬರಿ, ವೈಜಯಂತಿ ಕಾಶಿ ಮುಂತಾದವರು ನಡೆಸಿಕೊಡುವ ಸಾಂಸ್ಕೃತಿಕ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಿದೆ. ವಿಜಾಪುರ ನವರಸಪುರ ಉತ್ಸವದ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

English summary
Navaraspur Festival , would be celebrated on 20th, 21st, 22nd May 2011 in Bijapur. There would be typical folk performances, vocal and instrumental recitals, art and dance ballets and dance performances representing traditional forms of dancing, plays by pointing reputed theatre groups, gazals, Quawwalis and everything that could be classed as the country’s cultural heritage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X