ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾದ್ರಿಗಳಿಂದ ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಅಂತ್ಯಕ್ಕೆ ಕರೆ

|
Google Oneindia Kannada News

Pope bendict16
ವ್ಯಾಟಿಕನ್ ಸಿಟಿ, ಮೇ. 17 : ಪಾದ್ರಿಗಳಿಂದ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಶೋಷಣೆ, ಅತ್ಯಾಚಾರದ ಕಳಂಕ ತೊಲಗಿಸಲು ವ್ಯಾಟಿಕನ್ ಮುಂದಾಗಿದೆ. ಜಗತ್ತಿನಲ್ಲಿರುವ ಎಲ್ಲಾ ಬಿಷಪರಿಗೆ ಚರ್ಚುಗಳ ಮೇಲಿರುವ ಈ ಕಳಂಕ ತೊಡೆದು ಹಾಕುವಂತೆ ರೋಮನ್ ಕ್ಯಾಥೋಲಿಕ್ ಚರ್ಚ್ ಹೆಡ್ ಕ್ವಾರ್ಟರ್ಸ್ ನಿಂದ ಸುತ್ತೋಲೆ ಹೊರಡಿಸಲಾಗಿದೆ.

ಇಂತಹ ದೂರುಗಳು ಕಂಡುಬಂದಾಕ್ಷಣ ಸ್ಥಳೀಯ ಕಾನೂನು ಚೌಕಟ್ಟಿನಲ್ಲಿ ದೂರು ದಾಖಲಿಸುವಂತೆ ಬಿಷಪರಿಗೆ ಸೂಚಿಸಲಾಗಿದೆ. ಇಂತಹ ಕೃತ್ಯವೆಸಗಿದವರ ಮೇಲೆ ಕೈಗೊಳ್ಳುವ ಕಠಿಣ ಕ್ರಮಗಳ ನೀತಿ ನಿರೂಪಣೆಗಳನ್ನು ನೂತನ ಸುತ್ತೋಲೆಯಲ್ಲಿ ತಿಳಿಸಲಾಗಿದೆ. "ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕೊನೆಗೊಳಿಸುವುದು ಬಿಷಪರ ಪ್ರಮುಖ ಆದ್ಯತೆಯಾಗಬೇಕು" ಎಂದು ವ್ಯಾಟಿಕನ್ ಒತ್ತಿ ಹೇಳಿದೆ.

ನೂತನ ತಿದ್ದುಪಡಿಯಿಂದಾಗಿ ಲೈಂಗಿಕ ದೌರ್ಜನ್ಯ ಕುರಿತಾಗ ಚರ್ಚ್ ಕಾನೂನು ಇನ್ನಷ್ಟು ಬಲಿಷ್ಠವಾಗಿದೆ. ಅಪರಾಧವೆಸಗಿದ ಪಾದ್ರಿಗಳು ತಪ್ಪಿಸಿಕೊಳ್ಳಲಾಗದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ ಪಾದ್ರಿಗಳಿಂದ ಮಕ್ಕಳಿಗೆ ಲೈಂಗಿಕ ದೌರ್ಜನ್ಯವೆಸಗಿದ ಹಲವು ಪ್ರಕರಣಗಳು ನಡೆದಿದ್ದವು.

English summary
The Vatican told bishops around the world on Monday ( 16 ay 2011) that they must make it a global priority to root out sexual abuse of children by priests. The headquarters of the Roman Catholic Church told bishops in a letter that they should cooperate with civil authorities to end the abuse that has tarnished its image around the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X