• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ವಿನಿತಳ ಮದುವೆಗೆ 6.4 ಕೋಟಿ ರು. ಖರ್ಚಾಯ್ತು..!

|

"ಮದುವೆ ಅದ್ದೂರಿಯಾಗಿ ಮಾಡಿಮುಗಿಸಬೇಕು. ಊಟದಿಂದ ಹಿಡಿದು ಅತಿಥಿ ಸತ್ಕಾರದವರೆಗೂ ಒಂದೂ ಕೊಂಕು ನುಡಿಯುವಂತಿರಬಾರದು" ಇದು ಭಾರತದ ಜನಸಾಮನ್ಯರಿಂದ ಹಿಡಿದು ಕೋಟ್ಯಾಧಿಪತಿಗಳವರೆಗಿನ ಕನಸು. ಇದೇ ಕಾರಣಕ್ಕೆ ಇಲ್ಲಿ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿ ಮುಗಿಸುತ್ತಾರೆ. ಇಷ್ಟೊಂದು ಖರ್ಚು ಮಾಡಿ ಮದುವೆಯಾದವರು ಕೆಲವು ತಿಂಗಳಲ್ಲಿಯೇ ಡಿವೋರ್ಸ್ ಪಡೆಯುವುದೂ ಇದೆ.

ಇಟಲಿಯ ಸ್ಯಾನ್ ಸೆಮೆಂಟೆ ಪ್ಯಾಲೆಸ್ ಹೋಟೆಲ್ ಆಂಡ್ ರೆಸಾರ್ಟ್ ನಲ್ಲಿ ಒಂದು ಮದುವೆ ನಡೆಯಿತು. ಅದು ಅನಿವಾಸಿ ಭಾರತೀಯರಾದ ಪ್ರಮೋದ್ ಅಗರ್ ವಾಲ್ ಪುತ್ರಿಯದ್ದು. ಜನಪ್ರಿಯ ಪಾಪ್ ಗಾಯಕಿ ಶಕೀರಾ(ಚಿತ್ರ ನೋಡಿ) ಈ ಮದುವೆಯಲ್ಲಿ ವಿಶೇಷ ಆಕರ್ಷಣೆ. ಮೋಜು ಮಸ್ತಿಗೇನೂ ಕಮ್ಮಿ ಇರಲಿಲ್ಲ. ವಿಶ್ವದ ಮೂಲೆಮೂಲೆಗಳಿಂದ ಸುಮಾರು 800 ಜನರು ಅತಿಥಿ ಅಭ್ಯಾಗತರು ಬಂದಿದ್ದರಂತೆ. ಅಂದಹಾಗೇ ಈ ಮದುವೆಗೆ ಖರ್ಚಾಗಿರೋದು ಸುಮಾರು ಆರುವರೆ ಕೋಟಿ ರೂಪಾಯಿಯಷ್ಟು.

ಇಷ್ಟೊಂದು ಖರ್ಚು ಮಾಡಿದ ಮೇಲೆ ಮದುವೆ ಅದ್ದೂರಿಯಾಗಿಯೇ ನಡೆದಿರುತ್ತದೆ ಬಿಡಿ. ಮುಂಬೈ ಮತ್ತು ದೆಹಲಿಯಿಂದ ಪ್ರಖ್ಯಾತ ಬಾಣಸಿಗರು, ಛಾಯಾಗ್ರಾಹಕರನ್ನು ಅಲ್ಲಿಗೆ ಕರೆಸಿಕೊಳ್ಳಲಾಗಿದಂತೆ. ಇಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು ಸುಮಾರು 72 ಗಂಟೆಗಳ ಕಾಲ ಪಾಪ್ ಗಾಯಕಿ ಶಕೀರಾ ನೀಡಿದ ಕಾರ್ಯಕ್ರಮವಂತೆ. [ಓದಿ: ಜೂನಿಯರ್ ಎನ್ಟಿಆರ್ ಮದುವೆ; ಮಂಟಪಕ್ಕೇ ರು.18 ಕೋಟಿ!]

ಭಾರತೀಯ ಮದುವೆಯಲ್ಲಿ ಅಂತರ್ ರಾಷ್ಟ್ರೀಯ ಖ್ಯಾತಿಯ ಕಲಾವಿದರು ಕಾರ್ಯಕ್ರಮ ನೀಡುವುದು ಇದೇ ಮೊದಲಲ್ಲ. ಕಳೆದ ಮಾರ್ಚ್ ನಲ್ಲಿ ಕಾಜಲ್ ಫಾಬಿಯಾನಿ ಮತ್ತು ಗೌರವ್ ಮದುವೆಗೆ ಪಾಪ್ ಗಾಯಕ ಅಕಾನ್ ಕಾರ್ಯಕ್ರಮ ನೀಡಿದ್ದರು. ಶಾರೂಕ್ ಖಾನ್ ಮತ್ತು ಮಲೈಕಾ ಅರೋರಾ ಮದುವೆ ಕೂಡ ತುಂಬಾ ಗ್ರಾಂಡಾಗಿಯೇ ನಡೆದಿತ್ತು. ಕಾಂಗ್ರೆಸ್ ನಾಯಕ ಕನ್ವರ್ ಸಿಂಗ್ ತನ್ವರ್ ಮಗನ ಮದುವೆ ಕೂಡ ಐಷಾರಾಮಿ ಮದುವೆಗೆ ಇನ್ನೊಂದು ಉದಾಹರಣೆ.

ಭಾರತದ ಇತಿಹಾಸದಲ್ಲಿ ದಾಖಲಾಗಿರುವ ಅದ್ದೂರಿ ಮದುವೆಯಲ್ಲಿ ಮಿತ್ತಲ್ ಕುಟುಂಬ ಎತ್ತರದಲ್ಲಿದೆ. ಲಕ್ಷ್ಮಿ ನಿವಾಸ್ ಮಿತ್ತಲ್ ಮಗಳಾದ ವನಿಶಾ ಮಿತ್ತಲ್ ಮಗಳ ಮದುವೆ ಫ್ರಾನ್ಸ್ ನಲ್ಲಿ ಸುಮಾರು 6 ದಿನಗಳ ಕಾಲ ವೈಭವದಿಂದ ನಡೆಯಿತು. ಈ ಮದುವೆಗೆ ಅಂದಾಜು 200 ಕೋಟಿ ರೂಪಾಯಿ ಖರ್ಚಾಗಿದೆಯಂತೆ. ಬಾಲಿವುಡ್ ನಟ ನಟಿಯರು ಈ ಮದುವೆಯಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡಿ ಅತಿಥಿಗಳನ್ನು ರಂಜಿಸಿದರಂತೆ. ಇತ್ತೀಚೆಗೆ ನಡೆದ ಸುಬಾರ್ಟೊ ರಾಯ್ ಅವರ ಮಗನ ಮದುವೆಗೆ ಸುಮಾರು 11 ಸಾವಿರ ಅತಿಥಿಗಳು ಆಗಮಿಸಿದ್ದರು. ಖರ್ಚು ಎಷ್ಟು ಕೋಟಿಯಾಗಿದೆಯೆಂದು ಸದ್ಯ ಲೆಕ್ಕ ಸಿಕ್ಕಿಲ್ಲ.

ದೇಶದ ಕ್ರಿಕೆಟ್ ಮತ್ತು ಸಿನಿಮಾ ತಾರೆಯರ ಮದುವೆ ಕೂಡ ಅದ್ದೂರಿಯಾಗಿಯೇ ನಡೆದಿದೆ. ಹೃತೀಕ್ ರೋಷನ್ ತನ್ನ ಸ್ವೀಟ್ ಹಾರ್ಟ್ ಸುಸಾನೆಯನ್ನು ಬೆಂಗಳೂರಿನ ಗೋಲ್ಡನ್ ಪಾಲ್ಮ್ ರೆಸಾರ್ಟ್ ಆಂಡ್ ಸ್ಪಾದಲ್ಲಿ ಮದುವೆಯಾಗಿದ್ದರು. ನಟಿ ಕರಿಷ್ಮಾ ಕಪೂರ್ ಮತ್ತು ಉದ್ಯಮಿ ಸಂಜಯ್ ಕಪೂರ್, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ, ಸುನಿಲ್ ಗವಾಸ್ಕರ್ ಮಗ ರೋಹನ್ ಗವಾಸ್ಕರ್ ಮದುವೆಗಳಿಗೂ ಕೂಡ ಹಲವು ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು.

ಅಜಯ್ ಜಡೇಜಾ ಮತ್ತು ಅದಿತ ಜೆಟ್ಲಿ ಮದುವೆ, ಅಂಜಲಿ ಮೆಹ್ಲಾ ಮತ್ತು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮದುವೆ ಭಾರತದಲ್ಲಿ ನಡೆದ ಕೆಲವು ಅದ್ದೂರಿ ಮದುವೆಗಳಾಗಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
NRI industrialist Pramod Agarwal spent Rs 6.4 crore for his daughter's wedding. The May 12-14 affair to remember saw as many as 800 guests and 72 hours of celebration, the high point of which was a performance by Shakira. Just read famous Indian wedding stories
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more