ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಪಾಲರಿಗೆ ನಾಚಿಕೆ ಮಾನ ಮರ್ಯಾದೆಯಿಲ್ಲ : ಈಶ್ವರಪ್ಪ

By Prasad
|
Google Oneindia Kannada News

KS Eshwarappa
ಬೆಂಗಳೂರು, ಮೇ 16 : "ರಾಜ್ಯಪಾಲರು ಸಂವಿಧಾನದ ಬಗ್ಗೆ ಮಾತಾಡ್ತಾರೆ, ಕಾನೂನಿನ ಬಗ್ಗೆ ಮಾತಾಡ್ತಾರೆ, ಪ್ರಜಾಪ್ರಭುತ್ವದ ಬಗ್ಗೆ ಮಾತಾಡ್ತಾರೆ, ಸುಪ್ರೀಂ ಕೋರ್ಟಿನ ಬಗ್ಗೆ ಮಾತಾಡ್ತಾರೆ, ಜನತೆಯ ಹಿತದ ಬಗ್ಗೆ ಮಾತಾಡ್ತಾರೆ. ಆದರೆ, ಅವರಿಗೆ ಇದಾವುದರ ಬಗ್ಗೆ ನೈಯಾ ಪೈಸೆ ಗೌರವವೂ ಇಲ್ಲ. ಇಂಥ ನಾಚಿಕೆ, ಮಾನ, ಮರ್ಯಾದೆ ಇಲ್ಲದ ವ್ಯಕ್ತಿಯನ್ನು ನಾನು ನೋಡೇ ಇಲ್ಲ."

ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿನ ಗಾಂಧೀಜಿ ಪ್ರತಿಮೆಯೆದಿರು ನಿಂತು ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಹಂಸರಾಜ್ ಭಾರದ್ವಾಜ್ ಅವರನ್ನು ವಾಚಾಮಗೋಚರವಾಗಿ ತರಾಟೆಗೆ ತೆಗೆದುಕೊಳ್ಳುವಾಗ ಇಂಥ ಪದಪುಂಜಗಳನ್ನು ಧಾರಾಳವಾಗಿ ಬಳಸಿದರು. ಇಂಥ ಜನದ್ರೋಹಿ, ಸಂವಿಧಾನ ದ್ರೋಹಿ, ಪ್ರಜಾಪ್ರಭುತ್ವ ದ್ರೋಹಿ, ಕಾನೂನು ದ್ರೋಹಿ, ಸುಪ್ರೀಂ ಕೋರ್ಟ್ ದ್ರೋಹಿ ರಾಜ್ಯಪಾಲರನ್ನು ಹಿಂದಕ್ಕೆ ಪಡೆಯುವವರೆಗೆ ಬಿಜೆಪಿ ಹೋರಾಟ ನಿಲ್ಲಿಸುವುದಿಲ್ಲ ಎಂದು ಅವರು ಹೇಳಿದರು. [ಕೆಪಿಎಲ್ : ಯಡಿಯೂರಪ್ಪ vs ರಾಜ್ಯಪಾಲ]

ಪಕ್ಷಭೇದ ಮರೆತ ಜನ : ರಾಜಭವನದ ಎದಿರು ಪ್ರತಿಭಟನೆ ರದ್ದು ಮಾಡಿದ ಕಾರಣ, ಮಹಾತ್ಮಾ ಗಾಂಧಿ ಪ್ರತಿಮೆ ಎದಿರು ಶಿಫ್ಟಾದ ಕಾರಣ ಕ್ಯಾಪಿಟಲ್ ಹೊಟೇಲಿನಿಂದ ಪ್ರತಿಮೆವರೆಗೆ ಈಶ್ವರಪ್ಪ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿತು. ಈ ಕಾರಣ ಗಾಂಧಿ ಪ್ರತಿಮೆ ಇರುವ ವೃತ್ತ ಸೇರುವ ಎಲ್ಲ ರಸ್ತೆಗಳಲ್ಲಿ ಭಾರೀ ವಾಹನದಟ್ಟಣೆ ಸಂಭವಿಸಿ, ತೊಂದರೆ ಅನುಭವಿಸಿದ ಜನರು ಪಕ್ಷಭೇದ ಮರೆತು ರಾಷ್ಟ್ರಪತಿ ಆಳ್ವಿಕೆ ಶಿಫಾರಸು ಮಾಡಿದ ರಾಜ್ಯಪಾಲರನ್ನು, ಪ್ರತಿಭಟಿಸುತ್ತಿರುವ ಬಿಜೆಪಿಯನ್ನು, ಇದಕ್ಕೆ ಕಾರಣರಾಗಿರುವ ವಿರೋಧಪಕ್ಷಗಳನ್ನು ಹೀನಾಯವಾಗಿ ಬೈದುಕೊಂಡರು.

ನಾಲ್ಕು ನಿರ್ಣಯ :
ಇದಕ್ಕೂ ಮೊದಲು ಯಡಿಯೂರಪ್ಪ ನೇತೃತ್ವದಲ್ಲಿ ಕ್ಯಾಪಿಟಲ್ ಹೊಟೇಲಿನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಲ್ಕು ನಿರ್ಣಯಗಳನ್ನು ಕೈಗೊಂಡಿತು. ರಾಜ್ಯಪಾಲ ಹಂಸರಾಜ್ ವಿರುದ್ಧ ಖಂಡನಾ ನಿರ್ಣಯ, ಎಲ್ಲ 120 ಶಾಸಕರು ಯಡಿಯೂರಪ್ಪನವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದ ಮತ್ತು ಬಿಜೆಪಿಗೆ ಬೆಂಬಲ ನೀಡಿದ 11 ಬಿಜೆಪಿ ಶಾಸಕರನ್ನು ಅಭಿನಂದಿಸುವ ಮೂರು ನಿರ್ಣಯಗಳನ್ನು ಕೈಗೊಂಡಿತು. ಇಂದಿನಿಂದ ಹತ್ತು ದಿನಗಳ ಆರಂಭವಾಗಬೇಕಿದ್ದ ವಿಶೇಷ ಜಂಟಿ ಅಧಿವೇಶನವನ್ನು ಮುಂದೂಡಿ ಜೂನ್ 2ರಿಂದ ನಡೆಸುವ ನಿರ್ಣಯವನ್ನೂ ತೆಗೆದುಕೊಳ್ಳಲಾಯಿತು.

English summary
Shame shame Hansraj Bharadwaj, Karnataka BJP president KS Eshwarappa blames Governor for his recommendation of imposing President's Rule. After the emergent legislative party meeting, BJP MLAs walked up to Gandhi statue from hotel Capitol and protested against governor's act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X