ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರೂ ಕ್ಷೇತ್ರಗಳನ್ನು ಬಾಚಿಕೊಂಡ ಬಿಜೆಪಿ

By Srinath
|
Google Oneindia Kannada News

ಬೆಂಗಳೂರು, ಮೇ 13: ಚನ್ನಪಟ್ಟಣ, ಜಗಳೂರು, ಬಂಗಾರಪೇಟೆ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮೂರರಲ್ಲೂ ಭರ್ಜರಿ ಗೆಲುವು ಸಾಧಿಸಿದೆ.

ಪ್ರತಿಷ್ಠಿತ ಚನ್ನಪಟ್ಟಣದಲ್ಲಿ ಸಿಪಿ ಯೋಗಿಶ್ವರ್ 10,000ಕ್ಕೂ ಅಧಿಕ ಮತಗಳ ಅಂತರದಿಂದ, ಬಂಗಾರಪೇಟೆಯಿಂದ ಬಿಜೆಪಿಯ ಎಂ ನಾರಾಯಣಸ್ವಾಮಿ 4050 ಮತಗಳ ಅಂತರದಿಂದ ಮತ್ತು ಜಗಳೂರಿನಿಂದ ಎಸ್ ವಿ ರಾಮಚಂದ್ರ 7700 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಈ ಮಧ್ಯೆ, ಜಗಳೂರಿನ ಪರಾಜಿತ ಅಭ್ಯರ್ಥಿ ಸಿ. ವೆಂಕಟೇಶಪ್ಪ ಜೆಡಿಎಸ್ ಗೆ ವಿದಾಯ ಹೇಳಿದ್ದಾರೆ. ಇದೇ ವೇಳೆ, ಹದಿನಾರು ಶಾಸಕರ ಅನರ್ಹತೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಸಹ ಇಂದೇ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಬೆಳಗ್ಗೆ ವಿಧಾನಸೌಧದಲ್ಲಿ ಸಚಿವ ಸಂಪುಟದ ತುರ್ತು ಸಭೆ ನಡೆಸಿದ್ದಾರೆ.

ಆಪರೇಷನ್ ಕಮಲದಿಂದ ತೆರವಾಗಿದ್ದ ಚನ್ನಪಟ್ಟಣ, ಬಂಗಾರಪೇಟೆ (ಎಸ್ ಸಿ ಮೀಸಲು ಕ್ಷೇತ್ರ), ಜಗಳೂರು(ಎಸ್ ಟಿ ಮೀಸಲು ಕ್ಷೇತ್ರ) ಕ್ಷೇತ್ರಗಳಲ್ಲಿ ಎ.9 ರಂದು ಮತದಾನ ನಡೆದಿತ್ತು. ಮೂರೂ ಕ್ಷೇತ್ರಗಳಲ್ಲಿ ಒಟ್ಟು 33 ಮಂದಿ ಸ್ಪರ್ಧಿಸಿದ್ದರು.

ಪ್ರಮುಖ ಅಭ್ಯರ್ಥಿಗಳು -
ಚನ್ನಪಟ್ಟಣ: ಸಿಪಿ ಯೋಗಿಶ್ವರ್ (ಬಿಜೆಪಿ), ಸಿಂ ಲಿಂ ನಾಗರಾಜ್ (ಜೆಡಿಎಸ್ ), ರಘುನಂದನ ರಾಮಣ್ಣ (ಕಾಂಗ್ರೆಸ್) ಸೇರಿದಂತೆ ಒಟ್ಟು 15 ಮಂದಿ. ಬಂಗಾರಪೇಟೆ: ಎಂ ನಾರಾಯಣಸ್ವಾಮಿ (ಬಿಜೆಪಿ), ಕೆಎಂ ನಾರಾಯಣಸ್ವಾಮಿ (ಕಾಂಗ್ರೆಸ್), ಎಚ್ ಮಂಜುನಾಥ್ (ಜೆಡಿಎಸ್) ಸೇರಿದಂತೆ ಒಟ್ಟು 10 ಮಂದಿ. ಜಗಳೂರು: ಎಸ್ ವಿ ರಾಮಚಂದ್ರ (ಬಿಜೆಪಿ), ದೇವೇಂದ್ರಪ್ಪ (ಕಾಂಗ್ರೆಸ್) ಹಾಗೂ ವೆಂಕಟೇಶಪ್ಪ (ಜೆಡಿಎಸ್ ) ಸೇರಿದಂತೆ ಒಟ್ಟು 8 ಮಂದಿ.

ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ ಈಗ ಹೀಗಿದೆ:
ಬಿಜೆಪಿ: 105 +3
ಕಾಂಗ್ರೆಸ್: 71
ಜೆಡಿಎಸ್: 26
ಪಕ್ಷೇತರ: 01
ಸ್ಪೀಕರ್: 01
ನಾಮಕರಣ: 01
ಖಾಲಿ ಸ್ಥಾನಗಳು: 17

ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಕಂಡಿದ್ದ ಉಪಚುನಾಚಣೆ ಫಲಿತಾಂಶವು ಮೂರೂ ಪಕ್ಷಗಳ ನಡುವಣ ರಾಜಕೀಯ ಜಿದ್ದಾಜಿದ್ದಿಗೆ ಒಂದಷ್ಟು ಆಹಾರ ಒದಗಿಸಿತ್ತು. ಜೆಡಿಎಸ್ ಭದ್ರಕೋಟೆ ಚನ್ನಪಟ್ಟಣ ಕುತೂಹಲದ ಕೇಂದ್ರ ಬಿಂದುವಾಗಿತ್ತು. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಜೆಡಿಎಸ್ ಗೆ ತೀವ್ರ ಸ್ಪರ್ಧೆಯೊಡ್ಡಿದ್ದವು.

English summary
The results of Karnataka Assembly by-elections that were held on April 9 are available. All the way BJP is the winning party. C P Yogeshwar (Channapatna), M Narayana swamy (Bangarapet), S V Ramachandra (Jagalur) have won the elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X