ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಭಾರಿ ಮಳೆಗೆ ಕೊಚ್ಚಿ ಹೋದ ಬಾಲಕ

By Rajendra
|
Google Oneindia Kannada News

Boy swept away in Bangalore
ಬೆಂಗಳೂರು, ಮೇ.13: ನಗರದಲ್ಲಿ ಇಂದು ಸಂಜೆ ಸುರಿದ ಭಾರಿ ಮಳೆಗೆ ಬಾಲಕನೊಬ್ಬ ಮೋರಿಗೆ ಬಿದ್ದು ಕೊಚ್ಚಿಹೋಗಿದ್ದಾನೆ. ವೆಂಕಟೇಶ್ವರ ನಗರದ ನಿವಾಸಿ ಅರವಿಂದ್ (13) ಮೋರಿಯಲ್ಲಿ ಕೊಚ್ಚಿಹೋದ ದುರ್ದೈವಿ. ಈ ಘಟನೆ ಬೆಂಗಳೂರಿನ ಇತಿಹಾಸ ಪ್ರಸಿದ್ಧ ಗಾಳಿ ಆಂಜನೇಯ ದೇಗುಲದ ಬಳಿ ಶುಕ್ರವಾರ (ಮೇ.13) ನಡೆದಿದೆ.

ಬಾಲಕನ ದೇಹ ಇದುವರೆಗೂ ಪತ್ತೆಯಾಗಿಲ್ಲ. ಅರವಿಂದನ ದೇಹವನ್ನು ಪತ್ತೆ ಹಚ್ಚುವ ಕಾರ್ಯ ಭರದಿಂದ ಸಾಗುತ್ತಿದೆ. ಹರಿಯುತ್ತಿರುವ ನೀರನ್ನು ನೋಡಲು ಹೋಗಿ ಈ ಬಾಲಕಿ ಮೋರಿಯಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈತನನ್ನು ಅವರು ಗುರುತಿಸಿದ್ದಾಗಿಯೂ ಹೇಳಿದ್ದಾರೆ.

ಅರವಿಂದನ ಪೋಷಕರಿಗೆ ದಿಕ್ಕು ತೋಚದಂತಾಗಿದ್ದು ಅವರು ಮಗನ ಪತ್ತೆಗಾಗಿ ಶ್ರಮಿಸುತ್ತಿದ್ದಾರೆ. ಕಳೆದಬಾರಿ ಸುರಿದ ಭಾರಿ ಮಳೆಯಿಂದಾಗಿ ದೇಗುಲಕ್ಕೆ ಚರಂಡಿ ನೀರು ನುಗ್ಗಿ ಮಲಿನವಾಗಿತ್ತು. ಆಗ ಎಚ್ಚೆತ್ತುಕೊಂಡ ಬೆಂಗಳೂರು ಮಹಾನಗರ ಪಾಲಿಕೆ ಆಲಯಕ್ಕೆ ನೀರು ನುಗ್ಗದಂತೆ ತಾತ್ಕಾಲಿಕ ತಡೆಗೋಡೆಯನ್ನು ನಿರ್ಮಿಸಿತ್ತು.

ಆಲಯದ ಪಕ್ಕದಲ್ಲೇ ಇರುವ ದೊಡ್ಡ ಮೋರಿಯಲ್ಲಿ (ವೃಷಭಾವತಿ ನದಿ ) ನಗರದ ನಾನಾ ಭಾಗಗಳಿಂದ ಹೊಲಸು ನೀರು ಹರಿಯುತ್ತದೆ. ಮಳೆ ಬಿದ್ದರಂತೂ ನೀರಿನ ಹರಿವು ತೀವ್ರವಾಗಿರುತ್ತದೆ. ಈಗ ಅರವಿಂದ ಕೊಚ್ಚಿಹೋಗಿರುವುದು ಈ ಮೋರಿಗೆ ಬಿದ್ದು. ಬಾಲಕನ ಪತ್ತೆ ಕಾರ್ಯ ನಡೆಯುತ್ತಿದೆ. (ದಟ್ಸ್‌ಕನ್ನಡ ವಾರ್ತೆ)

English summary
A thirteen-year-old boy who got swept away in a drain during a heavy downpour on Friday in Bangalore notorious drain, Venkateshwaranagar near Gali Anjaneya Swamy temple. Aravind has swept away after he fell into an open drain at at Mysore Road.The civic authorities are yet to locate the child's body.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X