ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಯುಸಿ ರ‌್ಯಾಂಕ್ ವಿಜೇತೆಗೆ ಮದುವೆ ಸಿದ್ಧತೆ

By Srinath
|
Google Oneindia Kannada News

Rank-holder ((prawny, clipart))
ತುಮಕೂರು, ಮೇ 12: ಪಿಯುಸಿ ಕಲಾ ವಿಭಾಗದಲ್ಲಿ ಮೂರನೇ ರ‌್ಯಾಂಕ್ ಪಡೆದಿರುವ ಎಂ. ಶಿಲ್ಪಕಲಾಗೆ ಐಎಎಎಸ್ ಅಧಿಕಾರಿಯಾಗುವ ಕನಸು. ಆದರೆ ಅವರ ಮನೆಯವರು ಅವಳಲ್ಲಾಗಲೇ ಮದುವೆಯ ಕನಸು ಬಿತ್ತಿದ್ದಾರೆ! ದ್ವಿತೀಯ ಪಿಯುಸಿಯಲ್ಲಿ ರಾಜ್ಯದ ಜನತೆ ಹೆಮ್ಮೆ ಪಡುವಂತಹ ಸಾಧನೆ ಮಾಡಿರುವ ಕೊರಟಗೆರೆ ತಾಲೂಕು ಊರ್ಡಿಗೆರೆ ಹೋಬಳಿ ಕೋಳಾಲದ ಬಸವೇಶ್ವರ ಕೇಂದ್ರೀಯ ಸಂಯುಕ್ತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಶಿಲ್ಪಾಳ ಕಥೆ ವ್ಯಥೆ ಇದು.

ಶಿಲ್ಪಾ ಹೇಳುವಂತೆ ಅವಳ ಅಪ್ಪ-ಅಮ್ಮ ಮೊನ್ನೆಮೊನ್ನೆಯವರೆಗೂ ಜೀತದಾಳುಗಳಾಗಿದ್ದವರು ಈಗ ಕೂಲಿ ಕೆಲಸಕ್ಕೆ ಹೋಗಿ ತನ್ನನ್ನೂ, ತಮ್ಮನನ್ನೂ ಸಾಕುತ್ತಿದ್ದಾರೆ. ರ‌್ಯಾಂಕ್ ಗಳಿಸಿದ ಸುದ್ದಿಯ ಸಂತಸ ಕೂಡ ಮನೆಯಲ್ಲಿಲ್ಲ. ಅವಳ ಮದುವೆಗೆ ಸಿದ್ಧತೆ ನಡೆದಿದೆ. ಈಗಾಗಲೇ ಎರಡು ಮೂರು ಸಂಬಂಧ ನೋಡಿದ್ದು, ಮುಂದಿನ ಓದಿಗೆ ಯಾರೂ ಸಹಾಯ ಮಾಡದಿದ್ದರೆ ಮದುವೆ ಗ್ಯಾರಂಟಿ.

ಅಂದಹಾಗೆ ಎಸ್ಎಸ್ಎಲ್ ಸಿಯಲ್ಲಿ ಶೇ. 86ರಷ್ಟು ಗಳಿಸಿದ್ದ ಶಿಲ್ಪಾಗೆ ಸೈನ್ಸ್ ಓದಬೇಕೆಂಬ ಹಂಬಲ ಬಹಳಷ್ಟಿತ್ತು. ಆದರೆ ಮನೆಯಲ್ಲಿ ಊಟಕ್ಕೂ ಕಷ್ಟ. ಬೆಳಗ್ಗೆ ತಿಂಡಿ ತಿನ್ನದೆ ಕಾಲೇಜಿಗೆ ಹೋಗುತ್ತಿದ್ದ ಶಿಲ್ಪಾ, ಮಧ್ಯಾಹ್ನ ವಾಪಸ್ ಬಂದು ಊಟ ಮಾಡುತ್ತಿದ್ದಳು. ಊರಿಂದ 6 ಕಿ.ಮೀ. ದೂರವಿರುವ ಕಾಲೇಜಿಗೆ ಬಸ್ಸಿನಲ್ಲಿ ತೆರಳುತ್ತಿದ್ದಳು.

ಆದರೆ ಈಗ ಪದವಿ ಕಾಲೇಜಿಗಾಗಿ ತುಮಕೂರಿಗೆ ಹೋಗಬೇಕು. ಪ್ರತಿದಿನ ಬಸ್ ಪ್ರಯಾಣ ದರವೇ 30 ರುಪಾಯಿ ಆಗುತ್ತದೆ. ಜತೆಗೆ ಓದಿನ ಖರ್ಚೂ ಭರಿಸಬೇಕು. ಆರ್ಥಿಕ ನೆರವು ಸಿಕ್ಕಲ್ಲಿ ಮಾತ್ರ ಅಪ್ಪ-ಅಮ್ಮ ಅವಳನ್ನು ಕಾಲೇಜಿಗೆ ಕಳಿಸುವ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಶಿಲ್ಪಕಲಾಳ ಆಸೆ, ಆಕಾಂಕ್ಷೆಗೆ ನೀರೆರೆಯುವವರು ಯಾರು?

English summary
Tumkur girl Shilpakala.M who secured Third Rank in II PUC arts is getting ready to marriage thanks to her parents' poor finacial status. Anybody there to help her ?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X