ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೇನ್ ನಲ್ಲಿ ಪ್ರಬಲ ಭೂಕಂಪ : 10 ಮಂದಿ ಸಾವು

By Srinath
|
Google Oneindia Kannada News

Earthquake in Spain
ಮ್ಯಾಡ್ರಿಡ್, ಮೇ 12: ದಕ್ಷಿಣ ಸ್ಪೇನ್ ನಲ್ಲಿ ಬುಧವಾರ ಸಂಜೆ 6.47ರಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದ್ದು, 10 ಮಂದಿ ಮೃತಪಟ್ಟಿದ್ದಾರೆ. ಇದಕ್ಕಿಂತ ಕೇವಲ ಎರಡು ಗಂಟೆಗಳ ಮುನ್ನ 4.4 ತೀವ್ರತೆಯ ಭೂಕಂಪ ಇಲ್ಲಿ ಸಂಭವಿಸಿದೆ. ಭೂಕಂಪದಿಂದ ಅನೇಕ ಕಟ್ಟಡಗಳು ಧರೆಗುರುಳಿವೆ. ಜನ ಭಯಭೀತರಾಗಿ ದಿಕ್ಕಾಪಾಲಾಗಿ ಓಡಿದ್ದಾರೆ.

ಈ ಮಧ್ಯೆ, ಇಟಲಿಯ ರೋಮ್ ನಲ್ಲಿ ಭಾರಿ ಭೂಕಂಪ ಸಂವಿಸಲಿದೆ ಎಂಬ ದಟ್ಟ ವದಂತಿಗಳ ಹಿನ್ನೆಲೆಯಲ್ಲಿ ನಾಗರಿಕರು ಬುಧವಾರ (ಮೇ 11) ಊರು ಖಾಲಿ ಮಾಡಿ, ವಾಹನಗಳ ಮೂಲಕ ದೂರದ ಊರುಗಳಿಗೆ ಪಲಾಯ ಮಾಡಿರುವ ಘಟನೆ ವರದಿಯಾಗಿದೆ.

ಸ್ಪೇನ್ ಭೂಕಂಪದಿಂದ ಲೋರ್ಕಾ ನಗರದಲ್ಲಿ ಭಾರಿ ಅನಾಹುತ ಸಂಭವಿಸಿದೆ. ರಾಜಧಾನಿ ಮ್ಯಾಡ್ರಿಡ್ ವರೆಗೂ ಕಂಪನದ ಅನುಭವವಾಗಿದೆ. ಇದು ಕಳೆದ ಐದು ದಶಕಗಳಕಲ್ಲಿ ಇಲ್ಲಿ ಸಂಭವಿಸಿರುವ ಭೀಕರ ಭೂಕಂಪವಾಗಿದೆ. ಚರ್ಚ್ ನ ಗಡಿಯಾರ ಗೋಪುರ ನೆಲಕ್ಕಪ್ಪಳಿಸಿದಾಗ ಭೂಕಂಪದ ಕುರಿತು ವರದಿ ಮಾಡುತ್ತಿದ್ದ ಟಿವಿ ವರದಿಗಾರರೊಬ್ಬರು ಸ್ವಲ್ಪದರಲ್ಲಿ ಪಾರಾಗಿದ್ದಾರೆ. ಭೀತಿಗೊಳಗಾದ ಕುಟುಂಬಗಳು ಮಕ್ಕಳು ಮರಿಗಳೊಂದಿಗೆ ಮೈದಾನಗಳಲ್ಲಿ ಬೀಡುಬಿಟ್ಟಿದ್ದಾರೆ. ಸೇನಾ ತುಕಡಿಗಳನ್ನು ಪರಿಹಾರ ಕಾರ್ಯಗಳಲ್ಲಿ ನಿಯೋಜಿಸಲಾಗಿದೆ.

English summary
A magnitude 5.1 quake killed at least 10 people in southern Spain, sending buildings crashing down as panicked residents fled for their lives. The tremor struck at 6:47 pm (1647 GMT) with a depth of 10 kilometres (six miles) and could be felt as far away as the capital Madrid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X