• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನನ್ನ ಅಪ್ಪನನ್ನು ಏಕೆ ಕೊಂದಿರಿ?: ಮರಿ ಲಾಡೆನ್ ಪ್ರಶ್ನೆ

By Srinath
|

ವಾಷಿಂಗ್ಟನ್, ಮೇ 11: ನಮ್ಮಪ್ಪನನ್ನು ನಿರಂಕುಶವಾಗಿ ಹೊಡೆದು ಸಾಯಿಸಿ, ಆತನ ಶವವನ್ನು ಮನಬಂದಂತೆ ಸಮುದ್ರದಲ್ಲಿ ಎಸೆದಿದ್ದು ಯಾಕೆ? ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಬಹುದಿತ್ತಲ್ವೆ' ಎಂದು ಅಲ್ ಖೈದಾ ಉಗ್ರ ಒಸಾಮ ಬಿನ್ ಲಾಡೆನ್ ನ ಪುತ್ರ ಅಮರಿಕದ ಮಿಲಿಟರಿ ಕಾರ್ಯಾಚರಣೆ ವಿರುದ್ದ ಕಿಡಿಕಾರಿದ್ದಾನೆ.

ನಿಶಸ್ತ್ರ ವ್ಯಕ್ತಿ ಮತ್ತು ಆತನ ಕುಟುಂಬದವರನ್ನು ಹತ್ಯೆ ಮಾಡಿ, ಆತನ ಶವವನ್ನು ನೀರಿಗೆಸೆದಿದ್ದು ಮನುಷ್ಯನ ಮೂಲಭೂತ ಹಕ್ಕುಗಳ ಉಲ್ಲಂಘಟನೆಯಾಗಿದೆ. ಆದ್ದರಿಂದ ನಮ್ಮ ತಂದೆಯ ಸಾವಿನ ಬಗ್ಗೆ ವಿಶ್ವಸಂಸ್ಥೆ ವಿಚಾರಣೆ ನಡೆಸಬೇಕು ಎಂದು ಒಬಿಎಲ್ ಪುತ್ರ ಹೇಳಿಕೆಯಲ್ಲಿ ಆಗ್ರಹಿಸಿದ್ದಾನೆ. ಈ ಕುರಿತು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಪಾಕ್ ಬಂಧನದಲ್ಲಿರುವ ಒಬಿಎಲ್ ರ ಮೂವರು ಪತ್ನಿಯರು ಮತ್ತು ಅವರ ಮಕ್ಕಳನ್ನು ಕುಟುಂಬದವರಿಗೆ ಹಸ್ತಾಂತರಿಸುವಂತೆ ಪಾಕಿಸ್ತಾನ ಸರಕಾರವನ್ನು ಒಬಿಎಲ್ ಪುತ್ರ ಇದೇ ವೇಳೆ ಆಗ್ರಹಿಸಿದ್ದಾನೆ. ಉಮರ್ ಈ ಹಿಂದೆ ತನ್ನಪ್ಪನ ಭಯೋತ್ಪಾದಕತೆಯನ್ನು ಸಾರ್ವಜನಿಕವಾಗಿ ಖಂಡಿಸಿದ್ದ. ಅದೇ ಧಾಟಿಯಲ್ಲಿ ಈಗ ಅಮೆರಿಕದ ಅಧ್ಯಕ್ಷ ನಮ್ಮಪ್ಪನ ಮೇಲೆ ನಡೆಸಿರುವ ಕ್ರೂರತೆಯನ್ನೂ ಖಂಡಿಸುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾನೆ.

ಒಬಿಎಲ್ ನ ನಾಲ್ಕನೇ ಪುತ್ರ ಉಮರ್ ಬಿನ್ ಲಾಡೆನ್ ( 30) ನಿರ್ದೇಶನದಂತೆ ಈ ಹೇಳಿಕೆಯನ್ನು ಸಿದ್ಧಪಡಿಸಲಾಗಿದೆ. 2009ರಲ್ಲಿ Growing Up bin Laden ಎಂಬ ಪುಸ್ತಕವನ್ನು ಬರೆದಿದ್ದ. ಇದಕ್ಕೆ ಅಮೆರಿಕದ ಲೇಖಕ ಜೀನ್ ಸಸಾನ್ ನೆರವು ಪಡೆದಿದ್ದ. ಸಸಾನ್ ಮೂಲಕವೇ ಪ್ರಸ್ತುತ ಒಬಿಎಲ್ ಸಾವಿನ ಕುರಿತಾದ ಹೇಳಿಕೆಯನ್ನು ನ್ಯೂಯಾರ್ಕ್ ಟೈಮ್ಸ್ ಗೆ ಬಿಡುಗಡೆ ಮಾಡಲಾಗಿದೆ.

ಅಂದಹಾಗೆ ಉಮರ್ ತಾಯಿ ನಜ್ವಾ ಬಿನ್ ಲಾಡೆನ್ ಳನ್ನು ಒಬಿಎಲ್ 1999ರಲ್ಲಿ ತೊರೆಯುವವರೆಗೂ ಉಮರ್ ತನ್ನಪ್ಪನೊಂದಿಗೆ ಅಫಘಾನಿಸ್ತಾನದಲ್ಲಿ ಜೀವಿಸುತಿದ್ದ. ನಜ್ವಾ, Growing Up bin Laden ಪುಸ್ತಕದ ಸಹ ಲೇಖಕಿಯೂ ಹೌದು.

English summary
Calling for an UN investigations on the circumstances of his father's death, Osama bin Laden's fourth son Omar bin Laden (30) accused the United States of violating its basic legal principles by killing an unarmed man, shooting his family members and disposing of his body in the sea, the New York Times reported on May 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X