ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣಿಗೇರಿ ತಲೆ ಬುರುಡೆಗಳಿಗೂ ಈಗ ಪರೀಕ್ಷೆ ಕಾಲ

By Prasad
|
Google Oneindia Kannada News

Exam time for Annigeri skulls
ಹುಬ್ಬಳ್ಳಿ, ಮೇ. 11 : ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿಯಲ್ಲಿ ಕೆಲ ತಿಂಗಳ ಹಿಂದೆ ದೊರೆತಿದ್ದ 471 ತಲೆಬುರುಡೆಗಳಿಗೂ ಈಗ ಪರೀಕ್ಷೆ ಕಾಲ. ಭುವನೇಶ್ವರದ ಭೌತಶಾಸ್ತ್ರ ಇಲಾಖೆ ಈ ಬುರುಡೆಗಳನ್ನು ಕಾರ್ಬನ್-14 ಡೇಟಿಂಗ್ ಪರೀಕ್ಷೆಗಳಿಗೊಡ್ಡಿ ಇವುಗಳು 638 ವರ್ಷದಷ್ಟು ಹಿಂದಿನವು ಎಂದು ದೃಢಪಡಿಸಿದೆ.

471ರಲ್ಲಿ ಕೇವಲ 2 ಬುರುಡೆಗಳನ್ನು ಮಾತ್ರ ಭುವನೇಶ್ವರಕ್ಕೆ ಕಳಿಸಿಕೊಡಲಾಗಿತ್ತು. ಭೌತಶಾಸ್ತ್ರ ಇಲಾಖೆಯ ಮುಖ್ಯಸ್ಥ ಪ್ರೊ. ಡಿಪಿ ಮಹಾಪಾತ್ರ ಅವರು ಅವುಗಳ ಪರೀಕ್ಷೆ ನಡೆಸಿ ಅವುಗಳ ಕಾಲವನ್ನು ತಿಳಿಸಿದ್ದಾರೆ. ಬುರುಡೆಗಳ ವಯಸ್ಸನ್ನು ಇನ್ನಷ್ಟು ನಿಖರಗೊಳಿಸಲು ಹೆಚ್ಚಿನ ಪರೀಕ್ಷೆಗೆ ಒಡ್ಡಲು ಭೂಗರ್ಭಶಾಸ್ತ್ರ ಮತ್ತು ವಸ್ತುಸಂಗ್ರಹಾಲಯ ಇಲಾಖೆ ನಿರ್ಧರಿಸಿದೆ.

ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಅಣ್ಣಿಗೇರಿಯ ಹೊರವಲಯದಲ್ಲಿರುವ ಚರಂಡಿಯ ಕೆಳಗಿನ ಭೂಗರ್ಭದಲ್ಲಿ ಈ ಬುರುಡೆಗಳು ಪತ್ತೆಯಾಗಿದ್ದವು. ನಂತರ ಈ ವರ್ಷ ಫೆಬ್ರವರಿಯಲ್ಲಿ ನಡೆಸಿದ ಹೆಚ್ಚಿನ ಉತ್ಖನನದಲ್ಲಿ ಇನ್ನಷ್ಟು ಬುರುಡೆಗಳು ಪತ್ತೆಯಾಗಿ ದಂಗುಬಡಿಸಿದ್ದವು. ಸಾಮೂಹಿಕ ಅಂತ್ಯ ಸಂಸ್ಕಾರ ಮಾಡಲಾಗಿರುವ ಮನುಷ್ಯರ ಬುಡುಡೆಗಳು ಇವೆರಬಹುದೆಂದು ಶಂಕಿಸಲಾಗಿದ್ದು, ಇನ್ನೇನೇನು ರಹಸ್ಯಗಳನ್ನು ಅಡಗಿಸಿವೆಯೋ ಯಾರು ಬಲ್ಲರು?

English summary
The mistarious 471 skulls found in Annigeri in Navalagund taluk in Dharwad distrit are 638 years old, estimated by Institute of Physics (IOP), Bhubaneswar. The Department of Archaeology and Museums has decided to send it for higher test to minimise assessment year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X