ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಾಕ್ ಹುಸೇನ್ ಒಬಾಮಾ II : 40X60

By Prasad
|
Google Oneindia Kannada News

Barack Obama interview on The Huffington Post
ಮೇ 2ರ ಸೋಮವಾರ ಮುಂಜಾನೆ ಪಾಕಿಸ್ತಾನದ ನೆಲದಲ್ಲಿ ಒಸಾಮಾ ಬಿನ್ ಲಾಡೆನ್ ಅನ್ನು ಕೊಂದು ಮುಗಿಸಿದ ನಂತರ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ನೀಡಿದ ಸುದೀರ್ಘ ಟಿವಿ ಸಂದರ್ಶನದ ಆಯ್ದ ಭಾಗಗಳನ್ನು ಇಲ್ಲಿ ದಾಖಲಿಸಲಾಗಿದೆ. ಸಂದರ್ಶನ ಮಾಡಿದವರು ಸ್ಟೀವ್ ಕ್ರಾಫ್ಟ್. ಚಾನಲ್ ಸಿಬಿಎಸ್. ಸಂದರ್ಶನದ ವಿಡಿಯೋ ಮತ್ತು ವರದಿ ಪ್ರಸಿದ್ಧ ದಿ ಹಫಿಂಗ್ಟನ್ ಪೋಸ್ಟ್. ಓದಿ ಮತ್ತು ನೋಡಿ.

"ಮಗಳು ಸಶಾ ಮಿದುಳು ಊತದಿಂದ ಬಳಲುತ್ತಿದ್ದಾಗಿನ ಸಂದರ್ಭ ಹೊರತುಪಡಿಸಿದರೆ, ಆ ನಲವತ್ತು ನಿಮಿಷಗಳ ಕಾಲ ಒಂದೊಂದು ಕ್ಷಣವೂ ಒಂದೊಂದು ಯುಗವಾದಂತೆ ಭಾಸವಾಗುತ್ತಿತ್ತು. ಇಡೀ 'ಕಿಲ್ ಒಸಾಮ್' ಆಪರೇಷನ್ ಮುಗಿಯುವವರೆಗೆ ನಾನು ಅನುಭವಿಸಿದ ತಳಮಳ, ದುಗುಡ, ವೇದನೆ ನನಗೇ ಗೊತ್ತು. ಆದರೆ, ಒಸಾಮಾ ಬಿನ್ ಲಾಡೆನ್ ನನ್ನು ಹೊಡೆದುರುಳಿಸುವ ಕುರಿತು ಯಾವುದೇ ಶಂಕೆ ಇರಲಿಲ್ಲ."

ಹೀಗೆ, ಜಗತ್ತಿನ ಸರ್ವಶಕ್ತ ರಾಷ್ಟ್ರದ ಅಧಿನಾಯಕನಾಗಿ, ಭಯೋತ್ಪಾದಕತೆಯ ಸಂಕೇತವಾಗಿದ್ದ ಅಲ್ ಖೈದಾ ಮುಖಂಡ ಒಸಾಮಾ ಬಿನ್ ಲಾಡೆನ್ ನನ್ನು ಅತ್ಯಂತ ಯುಕ್ತಿಯಿಂದ, ಸಾಹಸದಿಂದ, ಗೌಪ್ಯತೆಯಿಂದ ಸಾಯಿಸಿದ ಅಮೆರಿಕಾದ ಯಶೋಗಾಥೆಯನ್ನು ಸಿಬಿಎಸ್ ಟಿವಿ ಚಾನಲ್ ನ '60 ನಿಮಿಷಗಳು' ಕಾರ್ಯಕ್ರಮದಲ್ಲಿ ಸ್ಟೀವ್ ಕ್ರಾಫ್ಟ್ ಗೆ ನೀಡಿದ ಸಂದರ್ಶನದಲ್ಲಿ ಮನಸನ್ನು ಬಿಚ್ಚಿಟ್ಟು ಬರಾಕ್ ಒಬಾಮಾ ನಿರಾಳರಾಗಿದ್ದಾರೆ.

"ಅಮೆರಿಕಾದ ಕಮಾಂಡರ್-ಇನ್-ಚೀಫ್ ಆಗಿ ಬಿನ್ ಲಾಡೆನ್ ನನ್ನು ಹತ್ಯೆಗೈಯಲು ನಾನು ತೆಗೆದುಕೊಂಡ ನಿರ್ಧಾರ, ನನ್ನ ಜೀವನದ ಅತೀ ಕಷ್ಟಕರ ನಿರ್ಧಾರವಾಗಿತ್ತು. ಕಷ್ಟಕರ ಯಾಕಾಗಿತ್ತೆಂದರೆ, ಲಾಡೆನ್ ಅಲ್ಲಿದ್ದಿದ್ದು ಸಂಪೂರ್ಣವಾಗಿ ಖಚಿತವಾಗಿರಲಿಲ್ಲ. ಮೇಲಾಗಿ, ನಮ್ಮ ಸೇನಾನಿಗಳನ್ನು ಅಲ್ಲಿ ಕಳಿಸಿಕೊಡುವುದು ರಿಸ್ಕಿನ ಕೆಲಸವಾಗಿತ್ತು. ಅವರು ಸುರಕ್ಷಿತವಾಗಿ ಅಲ್ಲಿಗೆ ಹೋಗಿ, ವಾಪಸ್ ಬರುವುದು ಬಹು ಮುಖ್ಯವಾಗಿತ್ತು" ಎಂದು ಕ್ರಾಫ್ಟ್ ಗೆ ಅವರು ತಿಳಿಸಿದ್ದಾರೆ.

ಈ ದಾಳಿಯ ಬಗ್ಗೆ ಪಾಕಿಸ್ತಾನಕ್ಕೆ ತಿಳಿಸಿರದ ಬಗ್ಗೆ ಕ್ರಾಫ್ಟ್ ಪ್ರಶ್ನಿಸಿದಾಗ, ಒಬಾಮಾ ಅವರು, "ಶ್ವೇತ ಭವನದಲ್ಲಿನ ಅನೇಕರಿಗೇ ಆ ವಿಷಯ ಗೊತ್ತಿರಲಿಲ್ಲ, ನನ್ನ ಕುಟುಂಬದವರಿಗೂ ಗೊತ್ತಿರಲಿಲ್ಲ. ಭದ್ರತಾ ದೃಷ್ಟಿಯಿಂದ ಯಾರಿಗೂ ತಿಳಿಸದಿರುವುದು ಅತಿ ಮುಖ್ಯವಾಗಿತ್ತು. ನನ್ನ ಹತ್ತಿರದವರಿಗೇ ಆ ವಿಷಯ ತಿಳಿಸದಿದ್ದ ಮೇಲೆ, ಗೊತ್ತಿಲ್ಲದವರಿಗೆ ತಿಳಿಸುವುದು ಹೇಗೆ?" ಎಂದು ಒಬಾಮಾ ವ್ಯಂಗ್ಯವಾಡಿದ್ದಾರೆ.

ಒಬಾಮಾ ಅವರು ಈ ವಿಸ್ತೃತವಾಗ ಸಂದರ್ಶನದಲ್ಲಿ ಅಮೆರಿಕಾದ ಹಿಂದಿನ ಅಧ್ಯಕ್ಷರುಗಳು ಕೈಗೊಂಡ ಕ್ರಮ, ಲಾಡೆನ್ ನನ್ನು ಅವನ ಗುಹೆಯಲ್ಲಿಯೇ ಸದೆಬಡಿದ ಮೇಲೆ ಅನುಭವಿಸಿದ ಸಂತೃಪ್ತಿ, ಲಾಡೆನ್ ನನ್ನು ಖಚಿತವಾಗಿ ಹತ್ಯೆ ಮಾಡಲಾಗಿದ್ದರೂ ಅವನ ಫೋಟೋಗಳನ್ನು ಬಿಡುಗಡೆ ಮಾಡಲಾಗದ ದ್ವಂದ್ವ, ಉಗ್ರನನ್ನು ತಮ್ಮಲ್ಲಿಯೇ ಪಾಕಿಸ್ತಾನ ಬಚ್ಚಿಟ್ಟುಕೊಂಡಿದ್ದರ ಬಗ್ಗೆ ಅಸಮಾಧಾನ, ಪಾಕಿಸ್ತಾನದೊಡನೆ ಮುಂದೆ ಕೈಗೊಳ್ಳಬೇಕಾದ ರಾಜತಾಂತ್ರಿಕ ಕ್ರಮಗಳ ಬಗ್ಗೆ ಬರಾಕ್ ಒಬಾಮಾ ಮಾತನಾಡಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ದಿ ಹಫಿಂಗ್ಟನ್ ಪೋಸ್ಟ್ ನಲ್ಲಿ ಪ್ರಕಟವಾದ ಈ ಲೇಖನ ಓದಿರಿ.

English summary
US President Barack Hussein Obama II speaks about 'Kill Osama' operation and nervous 40 minutes he went through the process, in an interview to Steve Kroft on CBS's '60 Minutes'. Oneindia Kannada brings the excerpts of the interview relayed by The Huffington Post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X